ಗಂಗಾವತಿ: ಈ ಮೊದಲು ಹೇಳಿದಂತೆ ಗಂಗಾವತಿಯಲ್ಲಿರುವ ಗಾಲಿ ಜನಾರ್ದನ ರೆಡ್ಡಿ ನಿವಾಸದಲ್ಲಿ ಅವರ ಅಭಿಮಾನಿ ಯಮನೂರ ಪುಂಡಗೌಡ ಒಂದು ಟಗರನ್ನು ದೇಣಿಗೆ ನೀಡಿ ರಾಜಕೀಯವಾಗಿ ಬೆಳೆಯುವಂತೆ ಶುಭ ಕೋರಿದರು.
ಈ ಸಂದರ್ಭದಲ್ಲಿ ಗಾಲಿ ಜನಾರ್ದನ ರೆಡ್ಡಿ ಮಾತನಾಡಿ ತಮ್ಮ ನೂತನ ಪಕ್ಷಕ್ಕೆ ನಿರೀಕ್ಷೆ ಮೀರಿ ಹಾಲುಮತ ಕುರುಬ ಸಮಾಜವು ಬೆಂಬಲ ನೀಡುತ್ತಿದ್ದು ಶುಭ ಕಾರ್ಯ ಮಾಡುವಾಗ ಹಾಲುಮತಸ್ಥರ ಆಶೀರ್ವಾದ ಪಡೆಯುವ ಪದ್ಧತಿ ಇದೆ. ತಮ್ಮ ಪತ್ನಿ ಬಳ್ಳಾರಿಯಲ್ಲಿ ಹಾಲುಮತದವರ ಮನೆಯಲ್ಲಿ ಪಕ್ಷದ ಚಿಹ್ನೆ ಘೋಷಣೆ ಮಾಡಿದ್ದು ಗಂಗಾವತಿಯಲ್ಲಿ ಪುಂಡಗೌಡ ಟಗರು ದೇಣಿಗೆ ನೀಡಿದ್ದು ಶುಭದ ಸಂಕೇತವಾಗಿದೆ ಎಂದರು.
ಟಗರು ದೇಣಿಗೆ ನೀಡಿದ ಅಭಿಮಾನಿ ಯಮನೂರ ಪುಂಡಗೌಡ ಮಾತನಾಡಿ, ಗಾಲಿ ಜನಾರ್ದನ ರೆಡ್ಡಿ ಅವರ ಅಭಿಮಾನಿಯಾಗಿರುವ ನಾನು ಗಾಲಿಯವರಿಗೆ 101 ಟಗರುಗಳನ್ನು ದೇಣಿಗೆಯಾಗಿ ನೀಡಲಿದ್ದು ಸದ್ಯ ಒಂದು ಟಗರು ದೇಣಿಗೆ ನೀಡಿದ್ದು ವಿಧಾನಸಭಾ ಚುನಾವಣೆಯ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ 100 ಟಗರುಗಳನ್ನು ದೇಣಿಗೆ ನೀಡಲಾಗುತ್ತದೆ.
ಜನಾರ್ದನ ರೆಡ್ಡಿ ಅವರು ರಾಜಕೀಯವಾಗಿ ಬಿಜೆಪಿ ಪಕ್ಷವನ್ನು ದಕ್ಷಿಣ ಭಾರತದಲ್ಲಿ ನೆಲೆಯಾಗಿಸಿದ್ದು ಇದೀಗ ಜನಾರ್ದನ ರೆಡ್ಡಿಯವರನ್ನು ಬಿಜೆಪಿ ಕಡೆಗಣಿಸಿದ್ದು ಕನ್ನಡಿಗರು ರೆಡ್ಡಿಯವರನ್ನು ಕೈಬಿಡುವುದಿಲ್ಲ. ಖಚಿತವಾಗಿ ಗಂಗಾವತಿ ಕ್ಷೇತ್ರದಲ್ಲಿ ಗೆಲುವು ಪಡೆಯಲಿದ್ದು ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಾಣಲಿದೆ ಎಂದರು.
ಇದನ್ನೂ ಓದಿ: ವಿಚಿತ್ರ ಹಸಿವು-ಅವ್ಯಕ್ತ ಸೆಳೆತ: ಸಿದ್ಧೇಶ್ವರ ಶ್ರೀಗಳು ನಡೆದಾಡುವ ದೇವರಾದದ್ದು ಹೇಗೆ?