Advertisement

ಕೆಆರ್ ಪಿಪಿ ಬೃಹತ್ ಸಮಾವೇಶ: ಕನಕಾಚಲ‌ಪತಿ ದೇವಸ್ಥಾನಕ್ಕೆ ಜರ್ನಾದನ ರೆಡ್ಡಿ ಭೇಟಿ

02:32 PM Mar 08, 2023 | Team Udayavani |

ಕನಕಗಿರಿ: ಪಟ್ಟಣದ ಕನಕಗಿರಿ ಉತ್ಸವ ಮೈದಾನದಲ್ಲಿ ಕೆಆರ್ ಪಿಪಿ ಪಕ್ಷದ ವತಿಯಿಂದ ಬೃಹತ್ ಸಮಾವೇಶವನ್ನು ಏರ್ಪಡಿಸಲಾಗಿದ್ದು ಕೆಆರ್ ಪಿ‌ಪಿ ಪಕ್ಷದ ಸಂಸ್ಥಾಪಕ ಗಾಲಿ ಜರ್ನಾದನ ರೆಡ್ಡಿ ಇಲ್ಲಿನ ಶ್ರೀಕನಕಾಚಲ ಪತಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಬುಧವಾರ ಪಡೆದುಕೊಂಡರು.

Advertisement

ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೆಆರ್ ಪಿಪಿ ಪಕ್ಷಕ್ಕೆ ಜನರಿಂದ  ಉತ್ತಮ ಸ್ಪಂದನೆ ದೊರೆಯುತ್ತಿದೆ. ಈಗಾಗಲೇ ಕೆಆರ್ ಪಿಪಿ ಪಕ್ಷದ 15 ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಜಿಲ್ಲೆಯ ಗಂಗಾವತಿಯಲ್ಲಿ ನಾನು ಸ್ಪರ್ಧೆಗೆ ಮಾಡುವುದು ಖಚಿತವಾಗಿದೆ. ಕನಕಗಿರಿ ಕ್ಷೇತ್ರದಲ್ಲಿ ಚಾರುಲ್ ವೆಂಕಟರಮಣ ದಾಸರಿಯನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದೆ. ಉಳಿದ ಕೊಪ್ಪಳ, ಯಲಬುರ್ಗಾ, ಕುಷ್ಟಗಿ,  ಕ್ಷೇತ್ರಗಳಲ್ಲಿ ಸೂಕ್ತ ಅಭ್ಯರ್ಥಿಗಳನ್ನೂ ಇನ್ನೂ ಕೆಲವು ದಿನಗಳಲ್ಲಿ ಘೋಷಣೆ ಮಾಡಲಾಗುವುದು. ಒಟ್ಟು 31  ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಘೋಷಿಸುವ ಸಾಧ್ಯತೆ ‌ಇದೆ. ನಾನು ಪಕ್ಷ ಸ್ಥಾಪಿಸಿದ ಉದ್ದೇಶ ಸಮಬಾಲು- ಸಮ ಪಾಲು ಸರ್ವಧರ್ಮದವರನ್ನು ಸಮಾನವಾಗಿ ಕಾಣುವ ದೃಷ್ಟಿಕೋನದಿಂದ ಹೊರೆತು ವ್ಯಕ್ತಿಗತವಾಗಿ, ಬೇರೆ ಪಕ್ಷಗಳಿಗೆ ಟೀಕೆ ಮಾಡುವುದಿಲ್ಲ. ನನ್ನ ಗುರಿ ಪಕ್ಷ ಸಂಘಟಿಸುವುದು ಜನರಿಗೆ ವಿವಿಧ ಯೋಜನೆ ಸಮರ್ಪಕವಾಗಿ ನೀಡುವ ಮೂಲಕ ಪಕ್ಷದ ಉದ್ದೇಶಗಳನ್ನು ಈಡೇರಿಸುವುದಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next