ಕೊಪ್ಪಳ: ಸಿದ್ದರಾಮಯ್ಯ ಅವರು ತಮ್ಮ ಸಿಎಂ ಸ್ಥಾನ ಉಳಿಸಿಕೊಳ್ಳಲು ಮೈಸೂರಿನಲ್ಲಿ ಭಿಕ್ಷೆ ಬೇಡುತ್ತಿದ್ದಾರೆ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಸಿದ್ದು ವಿರುದ್ದ ಟೀಕಾ ಪ್ರಹಾರ ನಡೆಸಿದರು.
ಕೊಪ್ಪಳದಲ್ಲಿ ಮಾತನಾಡಿ, ಲೋಕಸಭಾ ಚುನಾವಣೆ ನಂತರ ಸಿದ್ದು ಮುಖ್ಯಮಂತ್ರಿಯಾಗಿರಲು ಡಿಕೆಶಿ ಬಿಡಲ್ಲ.
ಎಂಪಿ ಚುನಾವಣೆಯಾದ ತಕ್ಷಣ ಸಿಎಂ ಸ್ಥಾನ ಬದಲಾಗಲಿದೆ. ಡಿಕೆಶಿ ಸಹ ಮುಂದೆ ನಾನೇ ಸಿಎಂ ಎನ್ನುತ್ತಿದ್ದು, ಹಾಗಾಗಿ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಅಭ್ಯರ್ಥಿ ಗೆಲ್ಲಿಸಿ ಎಂದು ಕೈ ಮುಗಿದು ಭಿಕ್ಷೆ ಬೀಡುತ್ತಿದ್ದಾರೆ ಎಂದರು.
ಅನ್ಸಾರಿ ಮನೆ ಮೇಲೆ ಪೆಟ್ರೋಲ್ ಬಾಂಬ್ : ಸಂಗಣ್ಣ ಕರಡಿ ಕಾಂಗ್ರೆಸ್‌ಗೆ ಹೋದರೆ ನಾವು ಯೋಚನೆ ಮಾಡಲ್ಲ. ಆದರೆ ಸಂಗಣ್ಣ ಕರಡಿ ಕೈ ಸೇರ್ಪಡೆಯಿಂದ ಇಕ್ಬಾಲ್ ಅನ್ಸಾರಿ ಮನೆ ಮೇಲೆ ಪೆಟ್ರೋಲ್ ಬಾಂಬ್ ಬಿದ್ದಿದೆ. ಗಂಗಾವತಿಗೆ ಸಂಗಣ್ಣಗೆ ಮುಂದೆ ಕೈ ಟಿಕೆಟ್ ಕೊಡುತ್ತಾರೆ ಎಂದು ಅನ್ಸಾರಿ ಹುಚ್ಚರಾಗಿ, ಅಳುತ್ತಾ ಕುಳಿತಿದ್ದಾನೆ ಎಂದರಲ್ಲದೇ 2028ರ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದಲ್ಲಿ ರಾಘವೇಂದ್ರ ಹಿಟ್ನಾಳರನ್ನು ಠೇವಣಿ ಇಲ್ಲದಂತೆ ಮಾಡುವೆ ಎಂದರು.
ಬಸವರಾಜ ರಾಯರೆಡ್ಡಿ ಜೂನ್‌ನಲ್ಲಿ ಮಂತ್ರಿಯಾಗಲು ಕನಸು ಕಂಡಿದ್ದಾರೆ ಎಂದರು.