Advertisement
ಬಳಿಕ ಮಾತನಾಡಿದ ಸಚಿವರು, ಸ್ತಬ್ಧಚಿತ್ರದ ಕುರಿತು ಪ್ರಧಾನಿ ಹಾಗೂ ಕೇಂದ್ರ ಸರಕಾರದ ಕುರಿತು ಕೇರಳದ ಕಮ್ಯೂನಿಸ್ಟ್ ಸರಕಾರ ಸೇರಿದಂತೆ ರಾಜ್ಯದ ಕಾಂಗ್ರೆಸ್ ಮುಖಂಡರು ಮಾಡಿರುವ ಅಪಾದನೆಗಳು ಸಂಪೂರ್ಣ ಸುಳ್ಳು ಎಂಬುದನ್ನು ಮನವರಿಕೆ ಮಾಡುವ ನಿಟ್ಟಿನಲ್ಲಿ ಹಿರಿಯ ನಾಯಕ ಜನಾರ್ದನ ಪೂಜಾರಿ ಅವರನ್ನು ಭೇಟಿಯಾಗಿ 15 ನಿಮಿಷಗಳ ಕಾಲ ಮಾತನಾಡಿದ್ದೇವೆ. ಗುರುಗಳು ಸ್ಥಾಪಿಸಿದ ಶಿವಗಿರಿ ಮಠವನ್ನು ಹಿಂದೆ ಕೇರಳ ಸರಕಾರ 5 ವರ್ಷಗಳ ಕಾಲ ಸ್ವಾಧೀನಕ್ಕೆ ತೆಗೆದುಕೊಂಡಿದ್ದು, ಬಳಿಕ ಸುಪ್ರೀಂ ಕೋರ್ಟಿನ ತೀರ್ಪಿನ ಹಿನ್ನೆಲೆಯಲ್ಲಿ ಶಿವಗಿರಿ ಮಠ ನಾರಾಯಣ ಗುರು ಟ್ರಸ್ಟ್ ಆಗಿ ಮುಂದುವರಿಯುತ್ತಿದೆ. 2015ರ ಡಿ. 15ಕ್ಕೆ ಪ್ರಧಾನಿಯವರು ಶಿವಗಿರಿಗೆ ಭೇಟಿ ಕೊಟ್ಟು ನಾರಾಯಣ ಗುರುಗಳ ಭಾವಚಿತ್ರ ಅನಾವರಣ, ಗುರುಗಳ ಕುರಿತು ಅವರು ಆಡಿ ರುವ ಮಾತುಗಳು, ಕೇಂದ್ರ ಪ್ರವಾ ಸೋದ್ಯಮ ಇಲಾಖೆಯಿಂದ 70 ಕೋ.ರೂ. ಬಿಡುಗಡೆ ಮಾಡಿ ಅಪೂರ್ವವಾಗಿರುವ ಕ್ಷೇತ್ರ ಆಗಬೇಕು ಎಂದಿರುವುದನ್ನು ಪೂಜಾರಿ ಅವರ ಗಮನಕ್ಕೆ ತಂದಿದ್ದೇವೆ ಎಂದರು.
Related Articles
Advertisement