Advertisement

ಜನಾರ್ದನ ಹೊಟೆಲ್‌ ದೋಸೆ ಸವಿದ ಸಿಎಂ

12:43 PM Jan 27, 2018 | Team Udayavani |

ಬೆಂಗಳೂರು: ಗಣರಾಜ್ಯೋತ್ಸವ ಕಾರ್ಯಕ್ರಗಳ ಒತ್ತಡದ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ, ನಗರದ ಪ್ರಸಿದ್ಧ ಜನಾರ್ದನ ಹೊಟೆಲ್‌ನಲ್ಲಿ ದೋಸೆ ಸವಿದರು. ಮಾಣೆಕ್‌ ಷಾ ಪರೇಡ್‌ ಮೈದಾನದ ಕಾರ್ಯಕ್ರಮ ಮುಗಿಸಿಕೊಂಡು ನೇರವಾಗಿ ಜನಾರ್ದನ ಹೊಟೆಲ್‌ಗೆ ತೆರಳಿದ ಸಿಎಂ, ಮಸಾಲೆ ದೋಸೆ ತಿಂದು ಚಹಾ ಕುಡಿದರು. ಸಚಿವ ಕೆ.ಜೆ.ಜಾರ್ಜ್‌ ಜತೆಗಿದ್ದರು.

Advertisement

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ಹಲವು ವರ್ಷಗಳಿಂದ ಈ ಹೊಟೆಲ್‌ಗೆ ಬರುತ್ತಿದ್ದೇನೆ ಎಂದರು. ಹೊಟೆಲ್‌ನ ಹಿರಿಯ ಸಿಬ್ಬಂದಿ, ಸಿದ್ದರಾಮಯ್ಯ ಅವರು ಹಿಂದೆ ಹೋಟೆಲ್‌ಗೆ ಬಂದು ಹೋಗುತ್ತಿದ್ದ ಬಗ್ಗೆ ಹಳೆಯ ನೆನಪುಗಳನ್ನು ಮೆಲಕು ಹಾಕಿದರು. ಮಕ್ಕಳು ಸೇರಿದಂತೆ ಹೊಟೆಲ್‌ಗೆ ಬಂದಿದ್ದ ಸಾರ್ವಜನಿಕರು ಸಿಎಂ ಜತೆ ಸೆಲ್ಫಿ ತೆಗೆದುಕೊಂಡು ಖುಷಿಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next