Advertisement

ಜಾನಪದ ಕಲೆ ಉಳಿವಿಗಾಗಿ ಸಾಕಮ್ಮ ಶ್ರಮ

01:18 PM Mar 13, 2021 | Team Udayavani |

ಕೆ.ಆರ್‌.ಪೇಟೆ: ನಶಿಸುತ್ತಿರುವ ಜಾನಪದ ಮತ್ತು ಸೋಬಾನೆ ಪದಗಳನ್ನು ಪೋಷಿಸುತ್ತಿರುವ ಚೈತನ್ಯದ ಚಿಲುಮೆ ಬೋಳಮಾರನಹಳ್ಳಿ ಸಾಕಮ್ಮ.

Advertisement

ತಾಲೂಕಿನ ಕಿಕ್ಕೇರಿ ಹೋಬಳಿ ಬೋಳಮಾರನಹಳ್ಳಿ ಗ್ರಾಮದಅವಿಭಕ್ತ ಕುಟುಂಬದ ಲಿಂಗೇಗೌಡ ಮತ್ತು ನಂಜಮ್ಮದಂಪತಿಗಳ 3ನೇ ಹೆಣ್ಣು ಮಗಳಾಗಿ 1934ರಲ್ಲಿ ಜನಿಸಿ, 4ನೇ ತರಗತಿವರೆಗೆ ಶಿಕ್ಷಣ ಪಡೆದಿದ್ದು, 1952ರಲ್ಲಿಶಂಭೂಗೌಡ ಅವರನ್ನು ಮದುವೆಯಾಗಿ ಒಬ್ಬ ಮಗ ಒಬ್ಬ ಮಗಳಿಗೆ ಮದುವೆ ಮಾಡಿ ಮೊಮ್ಮಕ್ಕಳೊಂದಿಗೆ ಇರುವ ಸಾಕಮ್ಮ, ತಮ್ಮ ಪತಿ ತೀರಿಕೊಂಡ ಮೇಲೆ ಬದುಕಿನ ಉತ್ಸಾಹ ಉಳಿಸಿಕೊಳ್ಳಲು ಜಾನಪದ ಕಲೆ ಉಳಿಸುವಲ್ಲಿ ಮುಂದಾಗಿದ್ದಾರೆ.

ಮೊದಲ ಮಳೆರಾಯನ ಹಾಡು: ತಮ್ಮ ತಾಯಿ ನಂಜಮ್ಮ ಅವರಿಂದ ಜಾನಪದ ಹಾಡು, ರಾಗಿ ಬೀಸುವ ಹಾಡು, ದೇವರ ನಾಮ, ಒಗಟು ಸೋಬಾನೆ,ಅರಿಶಿಣ ಹಚ್ಚುವ ಹಾಡು, ಪುರಂದರ, ಕನಕದಾಸರ ಹಾಡು, ತತ್ವ ಪದ, ಜೋಗುಳಹಾಡನ್ನು ಅಭ್ಯಾಸ ಮಾಡಿ ಕಲಿತರು. ಮೊದಲು ಬೋಳಮಾರನಹಳ್ಳಿ ಗ್ರಾಮದಲ್ಲಿ ಮದುವೆ ಮನೆಯಲ್ಲಿ 1945-46ರಲ್ಲಿ ಮಳೆ ಇಲ್ಲದ ಬಗ್ಗೆ “ಬಾರಪ್ಪ ಮಳೆಯೇನಿಂತ ನೀರೇ ಹರಿಯೇ’ ಎಂಬ ಮಳೆರಾಯನ ಹಾಡನ್ನು ಅಂದಿನ ಕಾಲದಲ್ಲಿ ಹಾಡಿ ತಮ್ಮ ಪ್ರಥಮ ಪ್ರಯತ್ನ ಆರಂಭಿಸಿದರು.

 ಸಾವಿರಕ್ಕೂ ಹೆಚ್ಚು ಹಾಡು: ಮೊದಲು 1 ವರ್ಷದಲ್ಲಿ 15-20 ಕಡೆ ಹಳ್ಳಿ ಹಳ್ಳಿಗಳಿಗೆ ಕಾಲ್ನಡಿಗೆಯಲ್ಲಿ ಹೋಗಿ ಸೋಬಾನೆ ಹಾಡು, ಮಳೆರಾಯನ ದೇವರ ಹಾಡು, ಮನೆಯ ಶುಭ ಕಾರ್ಯದಲ್ಲಿ ಆರಾಧನೆ, ದಿಬ್ಬಣದ ಹಾಡು, ತತ್ವಪದ ಹಾಡಿರಂಜಿಸಿ ಮನಸ್ಸಿಗೆ ತೃಪ್ತಿ ನೀಡುತ್ತಿದ್ದರು. ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ಕಾಯಿ, ಎಲೆ, ಅಡಕೆ, ಬಾಳೆಹಣ್ಣು ಪಡೆದುಕೇವಲ ಆತ್ಮ ತೃಪ್ತಿಗಾಗಿ ಹಾಡುತ್ತಿದ್ದರು.ಇವರ ಸಂಗಡ ಕಾವೇರಮ್ಮ, ನಂಜಮ್ಮ, ಲಕ್ಷ್ಮಮ್ಮದನಿಗೂಡಿಸುತ್ತಿದ್ದಾರೆ. ಏಕನಾದ, ದಮಡಿ, ತಾಳವಿಟಿಕೆ ಉಪಯೋಗಿಸಿ ಹಾಡನ್ನು ಹಾಡುವಸಾಕಮ್ಮ, ದಿನದಲ್ಲಿ 10 ರಿಂದ 12 ಗಂಟೆ ಕಾಲ ಹಾಡನ್ನು ಹಾಡುವ ಶಕ್ತಿ ಪಡೆದಿದ್ದಾರೆ. ಒಂದು ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಪುಸ್ತಕ, ಓದು, ಬರಹ ಇಲ್ಲದೇ ತಮ್ಮ ನೆನಪಿನ ಜ್ಞಾನದಿಂದಲೇ ಹಾಡುವ ಇವರ ಸಾಧನೆ ಅದ್ಬುತ.

ಜಾನಪದ ಲೋಕ ಪ್ರಶಸ್ತಿಗೆ ಆಯ್ಕೆ: 87 ವರ್ಷ ವಯಸ್ಸಾಗಿದ್ದರೂ ಜಾನಪದ ಸಾಹಿತ್ಯಕ್ಕೆ ತನ್ನದೇ ಕೊಡುಗೆ ನೀಡುತ್ತಾ ಬದುಕುಸವೆಸುತ್ತಿರುವ ಇವರಿಗೆ ಕರ್ನಾಟಕ ಜಾನಪದ ಪರಿಷತ್‌, ಜಾನಪದ ಲೋಕ, ರಾಮನಗರ ಜಿಲ್ಲೆ, ಇವರು ಇದೇ 13ನೇ ತಾರೀಖೀನಂದು ಜಾನಪದ ಲೋಕ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

Advertisement

ಶುಭ ಹಾರೈಕೆ: ಇವರ ಸಾಧನೆ ಮಹಿಳೆಯರು ಮತ್ತು ಮಕ್ಕಳಲ್ಲಿ ಜಾನಪದ ಮತ್ತು ಸೋಬಾನೆ ಪದಗಳ ಬೆಳವಣಿಗೆಗೆ ಪ್ರೇರಣೆ ನೀಡಲಿ, ಇವರ ಬದುಕು ಹಸನಾಗಿ ಜಾನಪದ ಲೋಕ ಇನ್ನಷ್ಟು ಸಮೃದ್ಧವಾಗಿ ಬೆಳೆಯಲಿ ಎಂಬುದು ಜಾನಪದ ಆಸಕ್ತರ ಶುಭ ಹಾರೈಕೆ.

ಒಲಿದು ಬಂದ ಪ್ರಶಸ್ತಿಗಳು :

ಮೈಸೂರು, ಬೆಂಗಳೂರು ಆಕಾಶವಾಣಿಯಲ್ಲಿ ದಸರಾ ಕಾರ್ಯಕ್ರಮ, ಸಂಘ, ಸಂಸ್ಥೆ, ಗಣಪತಿ ಸ್ಥಾನ ಮಂಟಪದಲ್ಲಿ ಹಾಡಿ ಜಾನಪದ ಸೋಬಾನೆ ಹಾಡುಗಾರ್ತಿ ಎಂದು ಬಿರುದು ಪಡೆದಿದ್ದಾರೆ. ಭೈರವೇಶ್ವರ ಜಾನಪದ ಗೀತ ಗಾಯನ ಮೇಳ 1987ರಲ್ಲಿ ನೆಹರು ಯುವ ಕೇಂದ್ರಮಂಡ್ಯ, 1986ರಲ್ಲಿ ಮಂಡ್ಯ ಜಿಲ್ಲಾ ಜಾನಪದ ಪರಿಷತ್‌ ಮದ್ದೂರು, 1986ರಲ್ಲಿ ಚನ್ನರಾಯಪಟ್ಟಣದಲ್ಲಿ ನಡೆದಹಾಸನ ಜಿಲ್ಲಾ ಹೊಯ್ಸಳ ವೈಭವ ಜಾನಪದ ಕಲಾಮೇಳದಲ್ಲಿ ಒಗಟುಗಳ ಸ್ಪರ್ಧೆಯಲ್ಲಿ ಶ್ರೇಷ್ಠ ಪ್ರಶಸ್ತಿ, 1990, 1991ರಲ್ಲಿ ಆಕಾಶವಾಣಿ ಪ್ರಶಸ್ತಿ 1993ರಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಮಡಿಕೇರಿಯಲ್ಲಿ ನಡೆದ ರಾಜ್ಯಮಟ್ಟದ ಜಾನಪದ ಕಲಾ ಸಮ್ಮೇಳನ ಪ್ರಶಸ್ತಿ, ಕೊಡಗು ಸಾಂಸ್ಕೃತಿಕ ಉತ್ಸವದಲ್ಲಿ ತತ್ವ ಪದಗಳ ಹಾಡಿಗಾಗಿ ಪ್ರಶಸ್ತಿ ಇನ್ನೂ ಹಲವು ಪ್ರಶಸ್ತಿಗಳು ಇವರ ಕಲಾ ಪ್ರೀತಿಗೆ ಸಂದಿವೆ.

 

ಅಪ್ಪನಹಳ್ಳಿ ಅರುಣ್‌

Advertisement

Udayavani is now on Telegram. Click here to join our channel and stay updated with the latest news.

Next