Advertisement

ವಾಲದೊಡ್ಡಿಗೆ “ಜನಪದ ಲೋಕ’ಪ್ರಶಸ್ತಿ

06:57 PM Mar 06, 2021 | Team Udayavani |

ಬೀದರ: ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ವತಿಯಿಂದ ಕೊಡಮಾಡುವ “ಜನಪದ ಲೋಕ ಪ್ರಶಸ್ತಿ’ಗೆ ತಾಲೂಕಿನ ವಾಲದೊಡ್ಡಿ ಗ್ರಾಮದ ಹಿರಿಯ ಜನಪದ ಕಲಾವಿದ ಶಂಭುಲಿಂಗ ವಾಲದೊಡ್ಡಿ ಭಾಜನರಾಗಿದ್ದಾರೆ.

Advertisement

ಜನಪದ ಕ್ಷೇತ್ರದ ಜೀವಮಾನ ಸಾಧನೆಗಾಗಿ ವಾಲದೊಡ್ಡಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ಪ್ರಶಸ್ತಿ 10 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ. ಮಾ.13 ರಂದು ರಾಮನಗರ ಸಮೀಪದ ಜಾನಪದ ಲೋಕದಲ್ಲಿ ನಡೆಯುವ “ಪ್ರವಾಸಿ ಜಾನಪದ ಲೋಕೋತ್ಸವ’ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪರಿಷತ್ತಿನ ರಾಜ್ಯಾಧ್ಯಕ್ಷ ಟಿ.ತಿಮ್ಮೇಗೌಡ ತಿಳಿಸಿದ್ದಾರೆ.

ಪ್ರಶಸ್ತಿಗೆ ಭಾಜನರಾಗಿರುವ ವಾಲದೊಡ್ಡಿ ಅವರಿಗೆ ಜಿಲ್ಲಾ ಮತ್ತು ತಾಲೂಕು ಪರಿಷತ್‌ ಪ್ರಮುಖರಾದ ಡಾ| ಜಗನ್ನಾಥ ಹೆಬ್ಟಾಳೆ, ಪ್ರೊ| ಎಸ್‌ ಬಿ. ಬಿರಾದಾರ, ನಿಜಲಿಂಗಪ್ಪ ತಗಾರೆ, ಡಾ| ಮಲ್ಲಮ್ಮ ಸಂತಾಜಿ, ಡಾ| ಸುನಿತಾ ಕೂಡ್ಲಿಕರ್‌, ಡಾ| ಧನಲಕ್ಷ್ಮೀಪಾಟೀಲ, ಡಾ| ಮಹಾನಂದ ಮಡಕಿ, ಡಾ| ರಾಜಕುಮಾರ ಹೆಬ್ಟಾಳೆ, ಎಸ್‌.ಬಿ. ಕುಚಬಾಳ, ಪ್ರಕಾಶ ಕನ್ನಾಳೆ, ರಾಜಕುಮಾರ ಮಡಕಿ, ಶರದ್‌ ನಾರಾಯಣಪೇಟಕರ್‌, ಡಾ| ಬಸವರಾಜ ಸ್ವಾಮಿ, ಸಂಜೀವಕುಮಾರ ಜುಮ್ಮಾ, ಅಶೋಕ ಮೈನಾಳೆ ಹರ್ಷ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next