ರಾಮನಗರ: ಜನನಿ ಸುರಕ್ಷಾ ಯೋಜನೆ ಅನುಷ್ಠಾನದಲ್ಲಿ ಜಿಲ್ಲೆ ಸಾಧನೆ ಮಾಡು ತ್ತಿದೆ ಎಂದು ಜಿಪಂ ಸಿಇಒ ಇಕ್ರಂ ಟ್ವೀಟ್ ಮಾಡಿದ್ದಾರೆ. ಯೋಜನೆ ಅನುಷ್ಠಾನದ ತಂಡಉತ್ಸಾಹ ಭರಿತರಾಗಿದ್ದರೆ ಏನೆಲ್ಲಾ ಸಾಧನೆ ಮಾಡಬಹುದು ಎಂಬುದಕ್ಕೆ ಈ ಅಂಕಿ-ಅಂಶಗಳೇ ಉದಾಹರಣೆ ಎಂದು ಪ್ರಶಂಸಿಸಿದ್ದಾರೆ.
2020-21ನೇ ಸಾಲಿಗೆ ನಿಗದಿಯಾಗಿದ್ದ ವಾರ್ಷಿಕ ನಿರೀಕ್ಷಿತ ಸಾಧನೆಯ ಭೌತಿಕ ಗುರಿ, ಪ್ರಸಕ್ತ ಸಾಲಿನ ಏಪ್ರಿಲ್ ನಿಂದ ಜುಲೈವರೆಗಿನ ಅಂಕಿ ಅಂಶ ಆಧರಿಸಿ ಮಾಹಿತಿ ನೀಡಿದ್ದಾರೆ. 2020-21ನೇ ಸಾಲಿಗೆ ನಿಗದಿಯಾಗಿರುವ ವಾರ್ಷಿಕ ನಿರೀಕ್ಷಿತ ಸಾಧನೆ ಮಟ್ಟ 10067, ಏಪ್ರಿಲ್‌ನಲ್ಲಿ ಜಿಲ್ಲೆಯಲ್ಲಿ 839 ಸಾಧನೆ, ಜುಲೈಅಂತ್ಯದ ವೇಳೆಗೆ 4699 ಸಾಧನೆ ಆಗಿದೆ. 4 ತಿಂಗಳ ಗುರಿ ಮೀರಿ ಜಿಲ್ಲೆಯಲ್ಲಿ ಶೇ.140 ಸಾಧನೆಯಾಗಿದೆ. ವಾರ್ಷಿಕ ಅವಧಿ ಗುರಿ ಪೈಕಿ ಜುಲೈ ಅಂತ್ಯದ ವೇಳೆಗೆ ಶೇ.47 ಸಾಧನೆಆಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ರಾಜ್ಯದ ಇತರೆ ಜಿಲ್ಲೆಗೆ ಹೋಲಿಸಿದರೆ ಜಿಲ್ಲೆ ಸಾಧನೆ ಪ್ರಥಮ. ವಾರ್ಷಿಕ ನಿರೀಕ್ಷಿತ ಪೈಕಿ ಶೇ.43 ಸಾಧನೆ ಮಾಡಿದ ಮೈಸೂರು 2ನೇ ಸ್ಥಾನ, ಶೇ.36 ಸಾಧನೆ ಮಾಡಿರುವ ಕೊಡಗು ತೃತೀಯ ಸ್ಥಾನದಲ್ಲಿದೆ. ವರ್ಷಾಂತ್ಯಕ್ಕೆ ಯೋಜನೆ ಗುರಿ ಮಟ್ಟುವುದಾಗಿ ತಿಳಿಸಿದ್ದಾರೆ.
ಹೆರಿಗೆಗೆ ಸಂಬಂಧಿಸಿದ ಎಲ್ಲಾ ವೆಚ್ಚ ಸರ್ಕಾರ ಭರಿಸುತ್ತೆ : ಹೆರಿಗೆ ವೇಳೆ ತಾಯಂದಿರು, ನವಜಾತ ಶಿಶುಗಳ ಮರಣ ಪ್ರಮಾಣ ತಪ್ಪಿಸಲು ಕೇಂದ್ರ ಸರ್ಕಾರ ಈ ಯೋಜನೆಯನ್ನು ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಕಾರ್ಯಕ್ರಮದಡಿ ಜಾರಿ ಮಾಡಿದೆ. ಈ ಯೋಜನೆ ಮೂಲಕ ಪ್ರಸೂತಿ ಪೂರ್ವ, ಪ್ರಸೂತಿ ವೇಳೆ ಮತ್ತು ಪ್ರಸೂತಿ ನಂತರದ ಆರೋಗ್ಯ ಸೇವೆ, ರೋಗದ ವಿರುದ್ಧ ರಕ್ಷಣೆಯನ್ನು ಉಚಿತ ಹಾಗೂ ಸಕಾಲದಲ್ಲಿ ದೊರಕಿಸಿಕೊಡಲಾಗುವುದು. ಈ ಯೋಜನೆ ಅನ್ವಯ ಸಾರ್ವಜನಿಕ ಸಂಸ್ಥೆಯಲ್ಲಿ ಹೆರಿಗೆಗೆ ಸಂಬಂಧಿಸಿದ ಎಲ್ಲಾ ವೆಚ್ಚಗಳನ್ನು ಸರ್ಕಾರವೇ ಭರಿಸುತ್ತದೆ. ಮಾತ್ರವಲ್ಲ, ಹೆಚ್ಚಿನ ವೈದ್ಯಕೀಯ ಸೇವೆ ಅಗತ್ಯವಿದ್ದರೆ ಮೇಲ್ದರ್ಜೆ ಆಸ್ಪತ್ರೆಗೆ ಕಳುಹಿಸುವುದು, ಅಲ್ಲಿ ಚಿಕಿತ್ಸೆಯನ್ನು ಸರ್ಕಾರವೇ ಭರಿಸುತ್ತದೆ. ಸಿಜೇರಿಯನ್ ಹೆರಿಗೆ ವೆಚ್ಚವನ್ನೂ ಸರ್ಕಾರವೇ ಭರಿಸುತ್ತಿದೆ.