Advertisement

4ರಂದು ಜನಾಂದೋಲನ ಜಾಥಾ

01:15 PM Mar 01, 2022 | Team Udayavani |

ಲಿಂಗಸುಗೂರು: ಮಾ.4ರಂದು ಪಟ್ಟಣದಲ್ಲಿ ನಡೆಯುವ ಜನಾಂದೋಲನ ಜಾಥಾ ಯಶಸ್ವಿಗೊಳಿಸುವಂತೆ ಎಐಡಿವೈಒ ರಾಜ್ಯಾಧ್ಯಕ್ಷ ಶರಣಪ್ಪ ಉದ್ಬಾಳ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ 3 ಕೃಷಿ ಕಾಯ್ದೆ ವಾಪಸ್‌ ಪಡೆಯುವಂತೆ ಹಾಗೂ ಬೆಳೆಗಳಿಗೆ ಶಾಸನ ಬದ್ಧ ಕಾಯ್ದೆಗಾಗಿ ಆಗ್ರಹಿಸಿ ಬೀದರ ಜಿಲ್ಲೆಯ ಬಸವ ಕಲ್ಯಾಣದಿಂದ ಮಾ.1ರಿಂದ ಆರಂಭವಾಗಿ ಮಾ.14ರಂದು ಬೆಂಗಳೂರಿಗೆ ತಲುಪಲಿದೆ. ಈ ಜಾಥಾವು ಮಾ.4ರಂದು ಬೆಳಗ್ಗೆ 11ಕ್ಕೆ ಪಟ್ಟಣಕ್ಕೆ ಆಗಮಿಸಲಿದೆ.

ವಿವಿಧ ರೈತ ಮತ್ತು ಹೋರಾಟ ಪರ ಸಂಘಟನೆಗಳ ಜನಾಂದೋಲನ ಮಹಾಮೈತ್ರಿ ಸಂಘಟನೆಗಳಿಂದ ಜಾಥಾಗೆ ಸ್ವಾಗತಿಸಿ ಮೂಲಕ ಗಡಿಯಾರ ಚೌಕವರಿಗೆ ಪಾದಯಾತ್ರೆ ನಡೆಸಿ ಬಹಿರಂಗ ಸಭೆ ಮಾಡಲಾಗುವುದು. ಬಹಿರಂಗ ಸಭೆಯಲ್ಲಿ ಸಮಾಜಿಕ ಹೋರಾಟಗಾರ ಎಸ್‌.ಆರ್‌. ಹಿರೇಮಠ ಭಾಷಣ ಮಾಡುವವರು, ಬಹಿರಂಗ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಮನವಿ ಮಾಡಿದರು.

ಈ ರೈತ ಸಂಘದ ತಾಲೂಕು ಅಧ್ಯಕ್ಷ ನಿಂಗಪ್ಪ ನಾಯಕ, ತಿರುಪತಿ ಗೋನವಾರ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next