ಹೊನ್ನಾವರ: ಉತ್ತರ ಕನ್ನಡ ಜಿಲ್ಲಾ ಪೊಲೀಸ್‌ಭಟ್ಕಳ ಉಪವಿಭಾಗ ಹೊನ್ನಾವರ ವೃತ್ತ ವತಿಯಿಂದ ಹೊನ್ನಾವರ ಪ್ರತಿಭೋದಯ ಸಬಾಭವನದಲ್ಲಿ ಹೊನ್ನಾವರ ತಾಲೂಕಿನ ದೇವಾಲಯಗಳ ಭದ್ರತೆ ಕುರಿತು ಜನಜಾಗೃತಿ ಸಭೆ ನಡೆಯಿತು.
ಸಿಪಿಐ ಶ್ರೀಧರ ನಾಯ್ಕ ಮಾತನಾಡಿ,ಇತ್ತೀಚೆಗೆ ಹೊರ ಜಿಲ್ಲೆಗಳಲ್ಲಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಹಲವಾರು ತಾಲೂಕುಗಳ ದೇವಾಲಯಗಳಲ್ಲಿ ಕಳ್ಳತನಗಳುನಡೆಯುತ್ತಿದ್ದರಿಂದ ದೇವಸ್ಥಾನಗಳ ಭದ್ರತೆ ದೃಷ್ಟಿಯಿಂದ ಕಡ್ಡಾಯವಾಗಿ ಪಾಲಿಸಲೇ ಬೇಕಾದ ಹಲವು ಸೂಚನೆಗಳನ್ನ ನೀಡಿದರು.ದೇವಾಲಯಗಳಲ್ಲಿ ಕಡ್ಡಾಯವಾಗಿ ಸಿ.ಸಿ.ಟಿವಿ ಅಳವಡಿಸಬೇಕು. ಅವುಗಳನ್ನು ಸುರಕ್ಷಿತ ಸ್ಥಳದಲ್ಲಿ ಇಡಬೇಕು. ದೇವಾಲಯದ ಬೆಲೆ ಬಾಳುವ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಬ್ಯಾಂಕ್ ಲಾಕರ್‌ನಲ್ಲಿ ಇಡಲು ಕ್ರಮ ಕೈಗೊಳ್ಳಬೇಕು. ದೇವಾಲಯಕ್ಕೆ ಭದ್ರವಾದ ಬಾಗಿಲು ಕಿಟಕಿಗಳನ್ನು ಅಳವಡಿಸಿ ಕಬ್ಬಿಣದ ಗ್ರಿಲ್ ಗೇಟ್‌ಗಳನ್ನು ಅಳವಡಿಸಬೇಕು.
ದೇವಾಲಯದ ಭದ್ರತೆಗಾಗಿ ಕಾವಲುಗಾರರನ್ನ ನೇಮಿಸಿಕೊಳ್ಳಬೇಕು ಇಲ್ಲವಾದಲ್ಲಿ ಗ್ರಾಮದಯುವಕರ ತಂಡ ರಚಿಸಿ ಸರದಿ ಪ್ರಕಾರ ರಾತ್ರಿ ವೇಳೆ ದೇವಸ್ಥಾನದ ಭದ್ರತೆ ನೋಡಿಕೊಳ್ಳುವಂತೆ ಮಾಡುವುದು. ದೇವಾಲಯದ ಹುಂಡಿಗಳಲ್ಲಿ ಹೆಚ್ಚು ಹಣ ಶೇಖರಣೆ ಆಗದಂತೆನೋಡಿಕೊಳ್ಳಬೇಕು. ಕಾವಲಿಗೆ ನೇಮಕ ಆದವರು ರಾತ್ರಿ ವೇಳೆ ಟಾರ್ಚ್ ಮೂಲಕ ಸುತ್ತಲಿನ ದೇವಾಲಯದ ಸುತ್ತಲಿನ ಪ್ರದೇಶ ಪರಶೀಲಿಸಬೇಕು. ದೇವಸ್ಥಾನದಲ್ಲಿ ಸೈರನ್ ವ್ಯವಸ್ಥೆ ಅಳವಡಿಸಬೇಕು. ದೇವಾಲಯದ ಬಳಿ ಯಾರೇ ಅನುಮಾನಾಸ್ಪದ ವ್ಯಕ್ತಿಗಳು ಅಥವಾ ವಾಹನಗಳು ಕಂಡು ಬಂದಲ್ಲಿ ಕೂಡಲೆ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಮತ್ತು ದೇವಾಲಯದ ಭದ್ರತೆ ದೃಷ್ಟಿಯಿಂದ ಪೊಲೀಸರು ಕಾಲಾಕಾಲಕ್ಕೆ ನೀಡುವ ಸಲಹೆ ಸೂಚನೆಗಳನ್ನ ಪಾಲಿಸಬೇಕು ಎಂದರು.
ಎಎಸ್‌ಪಿ ನಿಖೀಲ್ ಬುಳ್ಳಾವರ ಮಾತನಾಡಿ, ಹೊನ್ನಾವರ ಕಾಸರಕೊಡಿನಲ್ಲಿ ದೇವಾಲಯ ಕಳುವಾಗಿದೆ. ಅಲ್ಲದೆ ಕರಾವಳಿ ಭಾಗದ ಹೈವೇ ಹತ್ತಿರದಲ್ಲಿ ಹೆಚ್ಚಿನ ದೇವಾಲಯಗಳಲ್ಲಿ ಕಳ್ಳತನವಾಗಿದೆ. ಹೀಗಾಗಿ ದೇವಾಲಯಕ್ಕೆ ಸಂಬಂಧಪಟ್ಟವರು ಪೊಲೀಸ್ ಇಲಾಖೆ ಸೂಚನೆಗಳನ್ನ ಪಾಲಿಸಿ ಸಹಕರಿಸಬೇಕೆಂದು ಆಗ್ರಹಿಸಿದರು.
ಭಟ್ಕಳ ಎಎಸ್‌ಪಿ ನಿಖೀಲ್, ಹೊನ್ನಾವರ ಸಿಪಿಐ ಶ್ರೀಧರ, ಪಿಎಸ್‌ಐ ಶಶಿಕುಮಾರ, ಮಂಕಿ ಪಿಎಸ್‌ಐ ಪಿ.ಬಿ. ಕೊಣ್ಣೂರ, ಪಿಎಸ್‌ಐ ಸಾವಿತ್ರಿ ನಾಯಕ್ ಉಪಸ್ಥಿತರಿದ್ದರು.