Advertisement

“ಜನಗಣಮನ’ಗೆಲ್ಲುತ್ತಿದೆ ಪಿಯಾನೊ ರಾಷ್ಟ್ರಗೀತೆ

09:41 AM Aug 06, 2018 | |

*ಮುಂಬಯಿಯ ಗೀತೆ ರಚನೆಕಾರ ಶಯಾನ್‌ ಇಟಾಲಿಯನ್‌ ವಿಭಿನ್ನ ಪ್ರಯತ್ನ
*ಯೂಟ್ಯೂಬ್‌ನಲ್ಲಿ ಒಂದೇ ವಾರದಲ್ಲಿ 28 ಲಕ್ಷ ವೀಕ್ಷಣೆ ಕಂಡ ಹೆಗ್ಗಳಿಕೆ ಪಡೆದ ವಿಡಿಯೋ

Advertisement

ಮುಂಬಯಿ: ಮುಂಬೈ ಮೂಲದ ಗೀತೆ ರಚನೆಕಾರ ಹಾಗೂ ಪಿಯಾನೊ ವಾದಕ ಶಯಾನ್‌ ಇಟಾಲಿಯಾ ಅವರು ಪಿಯಾನೋದಲ್ಲಿ ನುಡಿಸಿರುವ ಭಾರತದ ರಾಷ್ಟ್ರಗೀತೆ ಇದೀಗ ಅಂತರ್ಜಾಲದಲ್ಲಿ ವೈರಲ್‌ ಆಗಿದೆ.  #IWillStandForThis  ಎಂಬ ಹ್ಯಾಶ್‌ಟ್ಯಾಗ್‌ನಡಿ ಯೂ ಟ್ಯೂಬ್‌ನಲ್ಲಿ ವಾರದ ಹಿಂದೆ ಅಪ್‌ಲೋಡ್‌ ಆದ ಈ ವೀಡಿಯೋ, ಒಂದೇ ವಾರದಲ್ಲಿ 28 ಲಕ್ಷ ವೀಕ್ಷಣೆ ಕಂಡಿದೆ. ಈ ಹಾಡಿಗಾಗಿ, ದೊಡ್ಡ ದೊಡ್ಡ ಸಂಗೀತ ಕಛೇರಿಗಳಲ್ಲಿ ಮಾತ್ರ ಬಳಸಲ್ಪಡುವ “ಸ್ಟೇನ್‌ವೇ ಮಾಡೆಲ್‌ ಡಿ’ ಮಾದರಿಯ ಪಿಯಾನೋ ಉಪಯೋಗಿ ಸಿರುವುದು ಈ ಸಂಗೀತ ರೂಪದ “ಜನ ಗಣಮನ’ವನ್ನು ಮತ್ತಷ್ಟು ಹೃದ್ಯವಾಗಿಸಿದೆ. 

ಈ ಬಾರಿಯ ಸ್ವಾತಂತ್ರೊತ್ಸವ 71ನೇ ಆಚರಣೆಯಾಗಿರುವುದರಿಂದ ಈ ವೀಡಿಯೋಗೆ 71 ಲಕ್ಷ ವೀಕ್ಷಣೆ ಲಭ್ಯ ವಾಗಲಿ ಎಂಬುದು ಶಯಾನ್‌ ಅವರ ಆಶಯವಂತೆ. ಸದ್ಯಕ್ಕೆ ದಿನವೊಂದಕ್ಕೆ ಸರಾಸರಿ 50 ಲಕ್ಷದಷ್ಟು ವೀಕ್ಷಣೆ ಆಗು ತ್ತಿದೆ. ಸ್ವಾತಂತ್ರೊéàತ್ಸವಕ್ಕೆ ಇನ್ನೊಂದು ವಾರ ಬಾಕಿಯಿದ್ದು, ಅಷ್ಟರಲ್ಲಿ ಗುರಿ ಮುಟ್ಟುವ ನಿರೀಕ್ಷೆಯಲ್ಲಿ ಅವರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next