Advertisement

ಪಕ್ಷದ ಹಿಂಬಾಲಕರಿಗೆ ಮಾತ್ರ ಸೌಲಭ್ಯ

12:53 PM Feb 01, 2022 | Team Udayavani |

ಗುಂಡ್ಲುಪೇಟೆ: ಗಂಗಾ ಕಲ್ಯಾಣ ಯೋಜನೆಯಡಿ ಬೋರ್‌ ವೆಲ್‌ ಕೊರೆಸಲು4 ಬಾರಿ ಅರ್ಜಿ ಸಲ್ಲಿಸಿದ್ದರೂ ಕೇವಲರಾಜಕೀಯ ಪಕ್ಷದ ಹಿಂಬಾಲಕರಿಗೆ ಸೌಲಭ್ಸಿಗುತ್ತಿದೆ. ಇದು ನೈಜ ಫ‌ಲಾನುಭವಿಗಳಿಗೆ ತಲುಪುತ್ತಿಲ್ಲ. ಪ್ರತಿ ಸಂದರ್ಭದಲ್ಲೂಹೀಗಾದರೆ ನಾವು ಯಾರು ಬಳಿಹೋಗುವುದು ಎಂದು ಬಾಚಹಳ್ಳಿಯ ರೈಮುಖಂಡ ಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

Advertisement

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶಾಸಕ ಸಿ.ಎಸ್‌.ನಿರಂಜನಕುಮಾರ್‌ ನೇತೃತ್ವದಲ್ಲಿನಡೆದ ಜನ ಸಂಪರ್ಕ ಸಭೆಯಲ್ಲಿ ಅಳಲತೋಡಿಕೊಂಡ ರೈತ ಮುಖಂಡ ಸ್ವಾಮಿ, ಗ್ರಾಮ ಮಟ್ಟದಲ್ಲಿ ನಮಗೆ ಮತ ನೀಡಿದವರಿಗೆ ಗಂಗಾ ಕಲ್ಯಾಣ ಯೋಜನೆಯಡಿ ಬೋರ್‌ವೆಲ್‌ ಮಂಜೂರಾತಿ ಮಾಡುತ್ತೇವೆ ಎಂದುರಾಜಾರೋಷವಾಗಿ ಹೇಳುತ್ತಾರೆ. ಹಾಗಾದರೆಇದು ಕೇವಲ ಪಕ್ಷದ ಕಾರ್ಯಕರ್ತರಿಗೆಇರುವ ಸೌಲಭ್ಯವೇ ಎಂದು ಪ್ರಶ್ನಿಸಿದರು.

ಈ ವೇಳೆ ಪ್ರತಿಕ್ರಿಯಿಸಿದ ಶಾಸಕರು,ವರ್ಷಕ್ಕೆ ಕೇವಲ 8 ಜನರಿಗೆ ಮಾತ್ರ ಗಂಗಾಕಲ್ಯಾಣ ಯೋಜನೆಯಡಿ ಸೌಲಭ್ಯಪಡೆಯಲು ಅವಕಾಶವಿದೆ. ಆದರೆ 3 ಸಾವಿರಅರ್ಜಿ ಬರುತ್ತಿದೆ. ಆದ್ದರಿಂದ ಮುಂದಿನವರ್ಷ ಅರ್ಜಿ ಹಾಕಿ. ಪರಿಶೀಲಿಸಿ ಕ್ರಮ ವಹಿಸುವುದಾಗಿ ತಿಳಿಸಿದರು.

ಮೂಖಹಳ್ಳಿಯ ಜನರು ಹೊಂಗಹಳ್ಳಿಗೆ ಹೋಗಿ ನ್ಯಾಯಬೆಲೆ ಪಡಿತರ ತರಬೇಕಾಗಿದೆ.ಮೂಖಹಳ್ಳಿಯಲ್ಲೇ ಪಡಿತರ ನೀಡಲು ಕ್ರಮ ವಹಿಸಬೇಕೆಂದು ಸ್ಥಳೀಯರು ಮನವಿ ಮಾಡಿದರು. ಈ ವೇಳೆ ಮಾತನಾಡಿದ ಶಾಸಕರು, ಎಲ್ಲೆಲ್ಲಿ ನ್ಯಾಯಬೆಲೆ ಅಂಗಡಿಅವಶ್ಯಕತೆ ಇದಿಯೋ ಅವುಗಳ ಪಟ್ಟಿ ಸಿದ್ಧಪಡಿಸಿ, ಅದನ್ನು ಸಂಬಂಧಪಟ್ಟ ಸಚಿವರಜೊತೆಗೆ ಮಂಜೂರು ಮಾಡಿಸಲುಪ್ರಯತ್ನಿಸುವುದಾಗಿ ಅಧಿಕಾರಿಗಳಿಗೆ ಸೂಚಿಸಿದರು.

ಲೋನ್‌ ನೀಡಲು ಬ್ಯಾಂಕ್‌ ಮ್ಯಾನೇಜರ್‌ ಕಳೆದ 6 ತಿಂಗಳಿಂದಲೂ ಇಂದು-ನಾಳೆಎಂದು ಅಲೆಸುತ್ತಿದ್ದಾರೆ. ಈ ಬಗ್ಗೆ ಕ್ರಮ ವಹಿಸುವಂತೆ ಬಾಚಹಳ್ಳಿ ಸ್ವ ಸಹಾಯ ಸಂಘದಮಹಿಳೆಯರು ಕೋರಿದರು. ಶಾಸಕರುಪ್ರತಿಕ್ರಿಯಿಸಿ ಮ್ಯಾನೇಜರ್‌ ಜೊತೆ ಚರ್ಚಿಸುವುದಾಗಿ ತಿಳಿಸಿದರು.

Advertisement

ಹೊಸಪುರ ಕೆರೆ ಕೋಡಿ ಒಡೆದಿರುವ ಪಕ್ಕದಲ್ಲಿ ನೀರು ಪೋಲಾಗಿ ಹರಿಯುತ್ತಿದ್ದು, ಹಲವು ರೈತರ ಜಮೀನುಗಳಲ್ಲಿ ಬೆಳೆ ನಾಶವಾಗಿದೆ ಎಂದು ಗ್ರಾಪಂ ಸದಸ್ಯಸಿದ್ದರಾಜು ದೂರಿದರು. ಈ ಬಗ್ಗೆ ಕೂಡಲೇ ಕ್ರಮ ವಹಿಸುವಂತೆ ಶಾಸಕ ನಿರಂಜನ್‌ಕುಮಾರ್‌ ಅಧಿಕಾರಿಗಳಿಗೆ ಸೂಚಿಸಿದರು. ಈ ವೇಳೆ ತಹಶೀಲ್ದಾರ್‌ ಸಿ.ಜಿ.ರವಿಶಂಕರ್‌, ಅಕ್ಷರ ದಾಸೋಹದ ಮಂಜಣ್ಣ, ಪುರಸಭೆ ಮುಖ್ಯಾಧಿಕಾರಿ ಹೇಮಂತ್‌ ರಾಜ್‌, ಸೆಸ್ಕ್ನ ಸಿದ್ದಲಿಂಗಪ್ಪ, ಪಿಡೊಬ್ಲ್ಯೂಡಿ ಎಇಇ ರವಿಕುಮಾರ್‌, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರವೀಣ್‌, ತೋಟಗಾರಿಗೆ ಇಲಾಖೆ ಸಹಾಯಕ ನಿರ್ದೇಶಕ ರಾಜು, ಸರ್ವೇಇಲಾಖೆ ರಮೇಶ್‌ ನಾಯಕ, ಪಶು ಪಾಲನಾಇಲಾಖೆ ಸಹಾಯಕ ನಿರ್ದೇಶಕ ಮೋಹನ್‌ಕುಮಾರ್‌, ಕಂದಾಯ ಅಧಿಕಾರಿರಾಜಕುಮಾರ್‌, ಶ್ರೀನಿವಾಸ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಸೌಲಭ್ಯ ಪಡೆಯಲು ನಾಡ ಕಚೇರಿಗೆ ಅಲೆದಾಟ :  ಮನೆ ಮಂಜೂರಾತಿ, ಸಾಗುವಳಿ, ವಂಶವೃಕ್ಷ ನೀಡಲು ಬೇಗೂರು ನಾಡ ಕಚೇರಿಯಲ್ಲಿಕಾಲಹರಣ ಮಾಡಲಾಗುತ್ತಿದೆ. ವಿನಾ ಕಾರಣ ಅಲೆದಾಡಿಸಲಾಗುತ್ತಿದೆ. ಆರ್‌ಟಿಸಿ ತಿದ್ದು ಪಡಿ, ಜಮೀನು ಸರ್ವೆ ಸೇರಿದಂತೆ ಇನ್ನಿತ ಹಲವು ವಿಚಾರಗಳು ಮುನ್ನಲೆಗೆ ಬಂದವು. ಸಾರ್ವಜನಿಕರ ಸಮಸ್ಯೆ ಆಲಿಸಿದ ನಂತರ ಮಾತನಾಡಿದ ಶಾಸಕರು, ಅಧಿಕಾರಿ ನಿರ್ಲಕ್ಷ್ಯ ಧೊರಣೆ ಅನುಸರಿಸದೆ ಕಾನೂನಿನ ಅನುಸಾರ ಕೆಲಸ ಮಾಡಬೇಕು. ಇದರಿಂದ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next