Advertisement

ಜಮ್ಮು: ಸೆಕ್ಷನ್‌ 144 ಹಿಂತೆಗೆತ; ಶನಿವಾರದಿಂದ ಶಾಲೆ-ಕಾಲೇಜು ಶುರು

09:56 AM Aug 10, 2019 | Team Udayavani |

ಜಮ್ಮು: 370 ವಿಧಿ ರದ್ದತಿಗೆ ಮೊದಲು ಜಮ್ಮು ಮತ್ತು ಕಾಶ್ಮೀರದಲ್ಲಿ ಮುನ್ನೆಚ್ಚರಿಕೆಯಾಗಿ ವ್ಯಾಪಕ ಬಂದೋಬಸ್ತ್ ಮಾಡಲಾಗಿದ್ದು ಕರ್ಫ್ಯೂ ಕೂಡ ಹಾಕಲಾಗಿತ್ತು. ಇದೀಗ ಪರಿಸ್ಥಿತಿ ಶಾಂತಿಯುತವಾಗಿರುವ ಹಿನ್ನೆಲೆಯಲ್ಲಿ ಶುಕ್ರವಾರ ಜಮ್ಮುವಿನಲ್ಲಿ 144ಸೆಕ್ಷನ್‌ ತೆರವು ಮಾಡಲಾಗಿದೆ. ಜಮ್ಮು ನಗರ ವ್ಯಾಪ್ತಿಯಲ್ಲಿ ಇದನ್ನು ಅನ್ವಯಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಇದರಿಂದ ಶನಿವಾರದಿಂದ ಶಾಲಾ-ಕಾಲೇಜುಗಳು ಎಂದಿನಂತೆ ಆರಂಭಗೊಳ್ಳಲಿದೆ.

Advertisement

ಆದಾಗ್ಯೂ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಭದ್ರತಾ ಪಡೆಗಳು ಸ್ಥಳದಲ್ಲೇ ಕಣ್ಗಾವಲು ಇರಿಸಲಿವೆ ಎಂದು ಹೆಚ್ಚುವರಿ ಪೊಲೀಸ್‌ ನಿರ್ದೇಶಕರು ಹೇಳಿದ್ದಾರೆ.

ಉಧಂಪುರದಲ್ಲಿ ಸಾಮಾನ್ಯ ಸ್ಥಿತಿ: ಉಧಂಪುರದಲ್ಲೂ 144 ಸೆಕ್ಷನ್‌ ಇದ್ದರೂ ಮಾರುಕಟ್ಟೆಗಳು ಶುಕ್ರವಾರ ತೆರೆದಿದ್ದವು. ಈದ್‌ ಹಬ್ಬದ ಹಿನ್ನೆಲೆಯಲ್ಲಿ ಜನರು ಖರೀದಿಗೆ ಬಂದಿದ್ದರು. ಬೆಳಗ್ಗೆ 11ರಿಂದ ಸಂಜೆ 5ರವರೆಗೆ ಅಂಗಡಿಗಳು ತೆರೆದಿದ್ದವು. ವಾಹನಗಳೂ ಸಂಚರಿಸುತ್ತಿದ್ದವು. ಕೆಲವೊಂದು ಭಾಗಗಳಿಂದ 144 ಸೆಕ್ಷನ್‌ ತೆಗೆಯಲಾಗುತ್ತಿದ್ದು, ಹಂತ ಹಂತವಾಗಿ ಸೆಕ್ಷನ್‌ ತೆಗೆಯಲಾಗುತ್ತಿದೆ ಎಂದು ಉಪ ಜಿಲ್ಲಾಧಿಕಾರಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next