Advertisement

ಪ್ರಶ್ನೆ ಪತ್ರಿಕೆ ಲೀಕ್‌: ಜಮ್ಮು ವಿವಿ ಇಂಗ್ಲಿಷ್‌ ಪರೀಕ್ಷೆ ಮುಂದಕ್ಕೆ

05:01 PM Apr 02, 2018 | Team Udayavani |

ಜಮ್ಮು : ಜಮ್ಮು ವಿಶ್ವವಿದ್ಯಾಲಯ ಮೂರನೇ ವರ್ಷದ ಪದವಿ ಶಿಕ್ಷಣದ ಇಂಗ್ಲಿಷ್‌ ಪರೀಕ್ಷೆಯನ್ನು ಪ್ರಶ್ನೆ ಪತ್ರಿಕೆ ಸೋರಿಕೆಯಾದ ಕಾರಣಕ್ಕೆ ಮುಂದಕ್ಕೆ ಹಾಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

“2018ರ ಎಪ್ರಿಲ್‌ 2ರಂದು ನಡೆಯಬೇಕಿದ್ದ ವಾರ್ಷಿಕ ನಮೂನೆಯ ಪಾರ್ಟ್‌ 3 ತರಗತಿಯ ಇಂಗ್ಲಿಷ್‌ ಬಿ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಎಲ್ಲ ಸಂಬಂಧಿತರಿಗೆ ಈಮೂಲಕ ತಿಳಿಸುತ್ತಿದ್ದೇವೆ’ ಎಂದು ವಿಶ್ವವಿದ್ಯಾಲಯವು ತನ್ನ ವೆಬ್‌ಸೈಟಿನಲ್ಲಿ ಪ್ರಕಟಿಸಿದೆ. 

ಪ್ರಶ್ನೆ ಪತ್ರಿಕೆ ಸೋರಿ ಹೋಗಿರುವ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ; ಹೊಸ ಪರೀಕ್ಷಾ ದಿನಾಂಕವನ್ನು ಸದ್ಯದಲ್ಲೇ ಪ್ರಕಟಿಸಲಾಗುವುದು ಎಂದು ವಿಶ್ವವಿದ್ಯಾಲಯದ ಅಧಿಕಾರಿ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next