Advertisement

Article 370 ರದ್ದತಿಯ ನಂತರ ಜಮ್ಮು ಪ್ರಾಂತ್ಯದಲ್ಲಿ ಉಗ್ರ ಚಟುವಟಿಕೆಗಳ ಹೆಚ್ಚಳ!

04:11 PM Aug 21, 2023 | Team Udayavani |

ಜಮ್ಮು: 2019 ರ ಆಗಸ್ಟ್‌ನಲ್ಲಿ ಆರ್ಟಿಕಲ್ 370 ರದ್ದತಿಯ ನಂತರ, ಜಮ್ಮು ಪ್ರದೇಶದಲ್ಲಿ ಉಗ್ರರ ನೇಮಕಾತಿ ಸೇರಿದಂತೆ ಕೆಲವು ಭದ್ರತಾ ಸೂಚಕಗಳೊಂದಿಗೆ ಚಟುವಟಿಕೆಗಳಲ್ಲಿ ಹೆಚ್ಚಳ ಕಂಡುಬಂದಿದ್ದು, ಕಳೆದ ಸುಮಾರು ನಾಲ್ಕು ವರ್ಷಗಳಿಂದ ಮೇಲ್ಮುಖ ಪ್ರವೃತ್ತಿ ತೋರಿ ಬಂದಿದೆ ಎಂದು ಅಧಿಕೃತ ಮಾಹಿತಿ ಬಹಿರಂಗಪಡಿಸಿದೆ.

Advertisement

ಡೇಟಾ ಪ್ರಕಾರ, ಆಗಸ್ಟ್ 5, 2019 ಮತ್ತು ಜೂನ್ 16, 2023 ರ ನಡುವೆ ಜಮ್ಮು ವಿಭಾಗದಲ್ಲಿ 231 ಉಗ್ರರು ಮತ್ತು ಅವರ ಭೂಗತ ಕೆಲಸಗಾರರ (OGWs) ಬಂಧನವಾಗಿದೆ. ಅಕ್ಟೋಬರ್ 27, 2015-ಆಗಸ್ಟ್ 4, 2019 ನಡುವೆ ದಾಖಲಾದ ಬಂಧನಗಳಿಗಿಂತ ಶೇಕಡಾ 71 ರಷ್ಟು ಹೆಚ್ಚಾಗಿದೆ.

ಕೇಂದ್ರ ಸರಕಾರವು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ 370 ನೇ ವಿಧಿಯನ್ನು ರದ್ದುಗೊಳಿಸಿತ್ತು. ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ್ , ಲಡಾಖ್ ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿತ್ತು.

ಅಧಿಕೃತ ಮಾಹಿತಿಯ ಪ್ರಕಾರ, ಆರ್ಟಿಕಲ್ 370 ರದ್ದತಿಯ ನಂತರ ಜಮ್ಮು ಪ್ರದೇಶದಲ್ಲಿ ಎಂಟು ಗ್ರೆನೇಡ್ ಮತ್ತು 13 ಸುಧಾರಿತ ಸ್ಫೋಟಕ ಸಾಧನ (ಐಇಡಿ) ದಾಳಿಗಳನ್ನು ಮಾಡಲಾಗಿದೆ. ನಾಲ್ಕು ಗ್ರೆನೇಡ್ ಮತ್ತು ಏಳು ಐಇಡಿ ದಾಳಿಗಳನ್ನು ಅಕ್ಟೋಬರ್ 27, 2015 ರಿಂದ ಆಗಸ್ಟ್ 4, 2019 ರವರೆಗೆ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next