Advertisement
ಜಮ್ಮು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ದೋಡಾದಲ್ಲಿ ಪ್ರಚಾರ ರ್ಯಾಲಿಯನ್ನುದ್ದೇ ಶಿಸಿ ಮಾತನಾಡಿದ ಅವರು, ಈ 3 ಕುಟುಂಬಗಳು ಅವರ ಮನೆಯ ಮಕ್ಕಳಿಗೆ ಮಾತ್ರ ಅವಕಾಶ ನೀಡುತ್ತಿ ದ್ದಾರೆ. ಅಧಿಕಾರವನ್ನು ತಮ್ಮಲ್ಲೇ ಉಳಿಸಿಕೊಳ್ಳುವುದ ಕ್ಕಾಗಿ ಪರ್ಯಾಯ ನಾಯಕತ್ವ ಬೆಳೆಯಲು ಅವರು ಅವಕಾಶ ನೀಡಿಲ್ಲ ಎಂದು ಗುಡುಗಿದ್ದಾರೆ. ಅಲ್ಲದೇ ಎನ್ಸಿ, ಪಿಡಿಪಿ, ಕಾಂಗ್ರೆಸ್ 370ನೇ ವಿಧಿಯನ್ನು ಮರಳಿ ತರಲು ಯತ್ನಿಸುತ್ತಿವೆ. ಅವರು ಮೀಸಲಾತಿಯನ್ನು ಕಿತ್ತುಕೊಂಡು, ಹಿಂದಿನ ಭಯದ ವಾತಾವರಣ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ನೀವು ಇದಕ್ಕೆ ಅವಕಾಶ ಕೊಡುತ್ತೀರಾ ಎಂದು ಜನರನ್ನು ಪ್ರಶ್ನಿಸಿದ್ದು, ಇದಕ್ಕೆ ಅವಕಾಶ ಕೊಡಬೇಡಿ ಎಂದು ಹೇಳಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆ ಕೊನೆಯ ಉಸಿರಾಡುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಭಯೋತ್ಪಾದನೆಯನ್ನು ನಿಗ್ರಹಿಸಲು ಸಕಲ ಕ್ರಮ ಕೈಗೊಳ್ಳಲಾಗುತ್ತದೆ. ಈ ಮೊದಲು ಆಡಳಿತ ನಡೆಸಿದ ಪಕ್ಷಗಳು, ಜನರ ಹಾದಿ ತಪ್ಪಿಸಿ ಅಧಿಕಾರವನ್ನು ಅನುಭವಿಸಿದ್ದಾರೆ ಎಂದು ಆರೋಪಿಸಿದರು. 42 ವರ್ಷ ಬಳಿಕ ಮೊದಲ ಬಾರಿಗೆ ಪ್ರಧಾನಿ ಭೇಟಿ
ದೋಡಾ ಜಿಲ್ಲೆಗೆ 1982ರಲ್ಲಿ ಆಗ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರು ಭೇಟಿ ನೀಡಿದ್ದರು. ಆ ಬಳಿಕ ಯಾವ ಪ್ರಧಾನಿಯೂ ಜಿಲ್ಲೆಗೆ ಭೇಟಿ ನೀಡಿರಲಿಲ್ಲ. ಚುನಾವಣ ಪ್ರಚಾರಕ್ಕಾಗಿ ಮೋದಿ ಯವರು ಶನಿವಾರ ಭೇಟಿ ನೀಡಿದ್ದಾರೆ. ಹೀಗಾಗಿ 42 ವರ್ಷಗಳ ಬಳಿಕ ಅಲ್ಲಿಗೆ ಪ್ರಧಾನಿ ಭೇಟಿ ನೀಡಿದ್ದಾರೆ.
Related Articles
ಬಿಜೆಪಿ ಅಧಿಕಾರಕ್ಕೆ ಬಂದರೆ ಯುವಕರಿಗೆ ನಾಯಕತ್ವದ ಜವಾಬ್ದಾರಿ ನೀಡಲಿದೆ. ಕಾಶ್ಮೀರದಲ್ಲಿ ಈವರೆಗೆ ಆಡಳಿತ ನಡೆಸಿರುವ ಕುಟುಂಬಗಳು ಯುವಕರಿಗೆ ಹೆಚ್ಚಿನ ಅವಕಾಶ ನೀಡಿಲ್ಲ. ತಮ್ಮ ಮನೆ ಮಕ್ಕಳನ್ನು ಮಾತ್ರ ಬೆಳೆಸಿದ್ದಾರೆ. ಇದರಿಂದಾಗಿ ರಾಜ್ಯದ ಬಹುತೇಕ ಯುವಕರಿಗೆ ಮೋಸವಾಗಿದೆ ಎಂದರು.
Advertisement
“ಜಮ್ಮು-ಕಾಶ್ಮೀರದಲ್ಲಿ ಬಿಜೆಪಿ ಭದ್ರತೆ ಕುಗ್ಗಿಸಿದೆ. ಹೀಗಾಗಿಯೇ ಉಗ್ರ ದಾಳಿಗಳು ನಡೆಯುತ್ತಿವೆ. 370ನೇ ವಿಧಿ ತೆಗೆದು 5 ವರ್ಷವಾದರೂ ದಾಳಿ ನಡೆಯುತ್ತಿವೆ.” – ಒಮರ್ ಅಬ್ದುಲ್ಲಾ, ಎನ್ಸಿ ಉಪಾಧ್ಯಕ್ಷ