Advertisement

Jammu-Kashmir 370ನೇ ವಿಧಿ ರದ್ದತಿ ಬಳಿಕ ಕಣಿವೆಗೆ ಘನತೆ: ಪ್ರಧಾನಿ

12:56 AM Aug 06, 2024 | Team Udayavani |

ಶ್ರೀನಗರ: ಜಮ್ಮು-ಕಾಶ್ಮೀರಕ್ಕೆ ನೀಡಲಾ ಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿ ಸುವ ಐತಿಹಾಸಿಕ ನಿರ್ಣಯದ ಮೂಲಕ ಕಣಿವೆಯ ಮಹಿಳೆಯರು, ಯುವಜನತೆ, ಹಿಂದುಳಿದವರು ಮತ್ತು ಬುಡಕಟ್ಟು ಜನಾಂಗಕ್ಕೆ ಭದ್ರತೆ, ಘನತೆ ಹಾಗೂ ಅವಕಾಶಗಳು ಒದಗಿಸಿಕೊಡ ಲಾಗಿದೆ ಎಂದು ಪ್ರಧಾನಿ ಮೋದಿ ಟ್ವೀಟ್‌ ಮಾಡಿದ್ದಾರೆ. ವಿಶೇಷ ಸ್ಥಾನಮಾನ ರದ್ದಾಗಿ ಸೋಮ ವಾ ರಕ್ಕೆ 5 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಪ್ರಧಾನಿ ಈ ಟ್ವೀಟ್‌ ಮಾಡಿದ್ದಾರೆ.

Advertisement

ಇತ್ತ 370ನೇ ವಿಧಿ ರದ್ದು ನಿರ್ಧಾರ ದಿಂದ ಬಿಜೆಪಿ ಕಾಶ್ಮೀರಿಯತ್‌ಗೆ ಗೌರವ ವನ್ನೂ ನೀಡಿಲ್ಲ, ಇತ್ತ, ಜಮೂØರಿಯತ್‌ ಅನ್ನೂ (ಪ್ರಜಾಪ್ರಭುತ್ವ) ಎತ್ತಿ ಹಿಡಿಯಲಿಲ್ಲ ಎಂದು ಎಐಸಿಸಿ ಅಧ್ಯಕ್ಷ ಖರ್ಗೆ ಟ್ವೀಟ್‌ ಮಾಡಿ ಕಿಡಿಕಾರಿದ್ದಾರೆ. ವಿಧಿ ರದ್ದು ನಿರ್ಧಾರವನ್ನು ವಿರೋಧಿಸಿದ್ದ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ನನ್ನನ್ನು ಗೃಹಬಂಧನದಲ್ಲಿಟ್ಟು, ನನ್ನ ಕಚೇರಿಯನ್ನು ಆಡಳಿತ ಮುಚ್ಚಿಸಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಏತ ನ್ಮಧ್ಯೆ ಯಾವುದೇ ಅಹಿತಕರ ಘಟನೆಗಳು ಕಣಿವೆಯಲ್ಲಿ ಜರುಗದಂತೆ ಎಚ್ಚರಿಕೆ ವಹಿಸಲು ಸೋಮವಾರ ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next