Advertisement

ಜಮ್ಮು: ಕದನ ವಿರಾಮ ಉಲ್ಲಂಘಿಸಿದ ಪಾಕ್‌ ಯೋಧರಿಗೆ ಗುಂಡಿನ ಉತ್ತರ

12:06 PM Sep 07, 2022 | Team Udayavani |

ಜಮ್ಮು: ಜಮ್ಮುವಿಗೆ ಹೊಂದಿಕೊಂಡು ಇರುವ ಅಂತಾರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ಗುಂಡು ಹಾರಿಸಿದೆ. 2020ರ ಫೆಬ್ರವರಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಕದನ ವಿರಾಮ ಮುಂದುವರಿಸುವುದನ್ನು ಒಪ್ಪಿಕೊಂಡ ನಂತರದ ಮೊದಲ ಘಟನೆ ಇದಾಗಿದೆ.

Advertisement

ಗುಂಡು ಹಾರಾಟದಿಂದ ಜೀವ ಹಾನಿ ಉಂಟಾಗಿಲ್ಲ. ಬಿಎಸ್‌ಎಫ್ ವತಿಯಿಂದಲೂ ಪಾಕ್‌ ಸೈನಿಕರ ಕಿಡಿಗೇಡಿತನಕ್ಕೆ ತಕ್ಕ ಪ್ರತ್ಯುತ್ತರ ನೀಡಲಾಗಿದೆ. ಕದನ ವಿರಾಮ ಜಾರಿಗೆ ಬಂದ ನಂತರ ಗಡಿ ಪ್ರದೇಶದಲ್ಲಿನ ರೈತರಿಗೆ ಕೊಂಚ ನಿರಾಳವಾಗಿದೆ.

ಅಧಿಕಾರಿಗಳ ಸಭೆ: ಗುಂಡು ಹಾರಾಟದ ಬಳಿಕ ಬಿಎಸ್‌ಎಫ್ ಮತ್ತು ಪಾಕಿಸ್ತಾನ ರೇಂಜರ್ಸ್‌ ಅಧಿಕಾರಿಗಳ ನಡುವೆ ಗಡಿಯಲ್ಲಿ ಸಭೆ ನಡೆಯಿತು. ಅದರಲ್ಲಿ ಕದನ ವಿರಾಮ ನಿಯಮಗಳನ್ನು ಪರಸ್ಪರ ಗೌರವಿಸಿ, ಪಾಲಿಸುವ ಬಗ್ಗೆ ಒಪ್ಪಿಕೊಳ್ಳಲಾಗಿದೆ ಎಂದು ಬಿಎಸ್‌ಎಫ್ನ ಉಪ ಮಹಾನಿರ್ದೇಶಕ ಎಸ್‌.ಪಿ.ಎಸ್‌.ಸಂಧು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next