Advertisement

ಕಾಶ್ಮೀರ: ಸಿಆರ್‌ಪಿಎಫ್ ಯೋಧನನ್ನು ಹತ್ಯೆಗೈದಿದ್ದ ಉಗ್ರ ಸಹಿತ ಇಬ್ಬರ ಬಂಧನ

01:21 PM Mar 13, 2022 | Team Udayavani |

ಶ್ರೀನಗರ: ದಕ್ಷಿಣ ಕಾಶ್ಮೀರದಲ್ಲಿ ಶನಿವಾರ ಕರ್ತವ್ಯ ನಿರತ ಸಿಆರ್‌ಪಿಎಫ್ ಯೋಧರೊಬ್ಬರನ್ನು ಹತ್ಯೆಗೈದು ಪರಾರಿಯಾಗಿದ್ದ ಉಗ್ರನನ್ನು ಬಂಧಿಸಲಾಗಿದೆ ಎಂದು ಕಾಶ್ಮೀರದ ಪೊಲೀಸ್ ಮಹಾ ನಿರೀಕ್ಷಕ ವಿಜಯ್ ಕುಮಾರ್ ಮಾಹಿತಿ ನೀಡಿದ್ದಾರೆ.

Advertisement

ಆರೋಪಿಯಿಂದ ಅಪರಾಧ ಕೃತ್ಯಕ್ಕೆ ಬಳಸಿದ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಕಾಶ್ಮೀರ ಐಜಿಪಿ ತಿಳಿಸಿದ್ದಾರೆ.

“ನಾವು ಸಿಆರ್‌ಪಿಎಫ್ ಸಿಬ್ಬಂದಿಯ ಹಂತಕನನ್ನು ಬಂಧಿಸಿದ್ದೇವೆ. ಆತನಿಂದ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ. ಭಯೋತ್ಪಾದಕ ಅಪರಾಧದ ಸಂದರ್ಭದಲ್ಲಿ ಅವನೊಂದಿಗೆ ಸಹಕರಿಸಿದ ಇನ್ನೊಬ್ಬ ಭೂಗತವಾಗಿದ್ದ ಉಗ್ರ ಸಂಘಟನೆಯ ಬೆಂಬಲಿಗನನ್ನೂ ಸಹ ಬಂಧಿಸಲಾಗಿದೆ. ಲಷ್ಕರ್-ಎ-ತೊಯ್ಬಾ ಕಮಾಂಡರ್ ಅಬಿದ್ ನಿರ್ದೇಶನದ ಮೇರೆಗೆ ಈ ಅಪರಾಧ ಎಸಗಲಾಗಿದೆ” ಎಂದು ಐಜಿಪಿ ತಿಳಿಸಿದ್ದಾರೆ.

ಶನಿವಾರ, ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಸಿಆರ್‌ಪಿಎಫ್ ಯೋಧ, ಶೋಪಿಯಾನ್ ನಿವಾಸಿ ಮುಖ್ತಾರ್ ಅಹ್ಮದ್ ದೋಹಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅವರು ಸಾವನ್ನಪ್ಪಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next