Advertisement

ಹಿಮವರ್ಷ: ಕಾಶ್ಮೀರದಲ್ಲಿ ವಿಮಾನ ಸಂಚಾರಕ್ಕೂ ಅಡ್ಡಿ

10:24 PM Jan 08, 2022 | Shreeram Nayak |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಹಲವೆಡೆ ಶುಕ್ರವಾರದಿಂದ ಭಾರೀ ಪ್ರಮಾಣದಲ್ಲಿ ಹಿಮವರ್ಷ ಸುರಿಯುತ್ತಿದ್ದು, ಶನಿವಾರ ಕಾಶ್ಮೀರದಲ್ಲಿ ವಿಮಾನ ಸಂಚಾರಕ್ಕೆ ಅಡ್ಡಿಯಾಗಿದೆ. 10ಕ್ಕೂ ಅಧಿಕ ವಿಮಾನಗಳ ಸಂಚಾರ ರದ್ದು ಮಾಡಲಾಗಿದ್ದರೆ, ಹಲವು ವಿಮಾನಗಳು ಗಂಟೆಗಳ ಕಾಲ ವಿಳಂಬವಾಗಿದೆ.

Advertisement

ಶ್ರೀನಗರದಲ್ಲಿ 4 ಇಂಚು ಹಿಮವರ್ಷವಾಗಿದೆ. ಗುಲ್ಮಾರ್ಗ್‌ನಲ್ಲಿ ಸುಮಾರು ಒಂದು ಅಡಿಯಷ್ಟು, ಕಾಜಿಗುಂದ್‌ ನಗರದಲ್ಲಿ 8 ಇಂಚು ಮತ್ತು ಶೋಪಿಯಾನ್‌ನಲ್ಲಿ 15 ಇಂಚು ಹಿಮವರ್ಷವಾಗಿರುವುದಾಗಿ ವರದಿಯಾಗಿದೆ. ಕೆಲ ಪ್ರದೇಶಗಳಲ್ಲಿ ಮಳೆಯೂ ಆಗಿರುವುದಾಗಿ ತಿಳಿಸಲಾಗಿದೆ. ಹಿಮವರ್ಷದಿಂದಾಗಿ ಕೇಂದ್ರಾಡಳಿತ ಪ್ರದೇಶದಾದ್ಯಂತ ವಿದ್ಯುತ್‌ ವ್ಯತ್ಯಯ, ಬ್ರಾಡ್‌ಬ್ಯಾಂಡ್‌ ಸಮಸ್ಯೆಯೂ ಉಂಟಾಗಿದೆ.

ಇದನ್ನೂ ಓದಿ:ನಾಯಿಯ ಬರ್ತ್‌ಡೇ ಪಾರ್ಟಿಗೆ ಬರೋಬ್ಬರಿ 7 ಲಕ್ಷ ರೂ. ಖರ್ಚು ಮಾಡಿದ ಕುಟುಂಬ!

ಇದೇ ವೇಳೆ ರಿಯಾಸಿ ಜಿಲ್ಲೆಯ ಮಾತಾ ವೈಷ್ಣೋದೇವಿ ದೇಗು ಲದಲ್ಲಿ ಸೀಸನ್‌ನ ಮೊದಲ ಹಿಮ ಮಳೆಯಾಗಿದೆ. ಇದರಿಂದಾಗಿ ಜಮ್ಮು-ಶ್ರೀನಗರ ಹೆದ್ದಾರಿ ಹಿಮಾವೃತವಾಗಿದ್ದು, ವಾಹನ ಸಂಚಾರಕ್ಕೆ ತಡೆಯುಂಟಾಗಿದೆ. ಬನೀಹಾಲ್‌-ಬಾರಾಮುಲ್ಲಾ ನಡುವಿನ ರೈಲನ್ನು ಸ್ಥಗಿತಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next