Advertisement

ಜಮ್ಮುಕಾಶ್ಮೀರದಲ್ಲಿ ಡ್ರೋನ್ ಹೊಡೆದುರುಳಿಸಿದ ಪೊಲೀಸರು: ಸುಧಾರಿತ ಎಲ್ ಇಡಿ ಸ್ಪೋಟಕ ಪತ್ತೆ

08:49 AM Jul 23, 2021 | Team Udayavani |

ಜಮ್ಮುಕಾಶ್ಮೀರ: ಜಮ್ಮು ಜಿಲ್ಲೆಯ ಅಕ್ನೂರ್ ಪ್ರದೇಶದಲ್ಲಿ (ಅಂತರಾಷ್ಟ್ರೀಯ ಗಡಿಯಿಂದ 8 ಕಿ. ಮೀ ಒಳಗೆ) ಸಂಶಯಾತ್ಮಕವಾಗಿ ಹಾರಾಟ ನಡೆಸುತ್ತಿದ್ದ ಡ್ರೋನ್ ಒಂದನ್ನು ಪೊಲೀಸರು ಹೊಡೆದುರುಳಿಸಿದ್ದಾರೆ.

Advertisement

ಈ ಡ್ರೋನ್ ನಲ್ಲಿ 5 ಕೆಜಿ ಸುಧಾರಿತ ಎಲ್ ಇಡಿ ಸ್ಪೋಟಕಗಳಿದ್ದವು ಎಂದು ಜಮ್ಮು ಕಾಶ‍್ಮೀರ ಪೊಲೀಸರು ತಿಳಿಸಿದ್ದಾರೆ. ಡ್ರೋನ್ ಚಟುವಟಿಕೆಯ ಹಿಂದೆ ಭಯೋತ್ಪಾದಕ ಸಂಘಟನೆ  ಲಷ್ಕರ್-ಎ-ತೈಬಾದ (ಎಲ್‌ಇಟಿ) ಕೈವಾಡ ಇದೆಯೇ ಮತ್ತು ಭಯೋತ್ಪಾದಕ ದಾಳಿಗೆ ಸಂಚನ್ನು ರೂಪಿಸುತ್ತಿದೆಯೇ ಎಂದು ಏಜೆನ್ಸಿಗಳು ತನಿಖೆ ನಡೆಸುತ್ತಿವೆ ವರದಿಯಾಗಿದೆ.

ಈ ಹಿಂದೆಯೂ ಹಲವು ಬಾರಿ ಜಮ್ಮು ಕಾಶ್ಮೀರ ಗಡಿಯಲ್ಲಿ ಡ್ರೋನ್ ಗಳು ಪತ್ತೆಯಾಗಿದ್ದವು. ಈ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರದ ಡಿಜಿಪಿ ದಿಲ್ ಬಾಗ್ ಸಿಂಗ್, ಭಯೋತ್ಪಾದಕ ಸಂಘಟನೆಗಳು ನಿರಂತರವಾಗಿ ಡ್ರೋನ್‌ಗಳನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸಲು ಪ್ರಯತ್ನಿಸುತ್ತಿವೆ. ಅದ್ದರಿಂದ ಹೆಚ್ಚಿನ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next