Advertisement

ಚೆಸ್‌ ಒಲಿಂಪಿಯಾಡ್‌ ಜ್ಯೋತಿ ಹಸ್ತಾಂತರ

11:15 PM Jun 21, 2022 | Team Udayavani |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನಂಟ್‌ ಗವರ್ನರ್‌ ಮನೋಜ್‌ ಸಿನ್ಹ ಅವರು ಮಂಗಳವಾರ ಚೆಸ್‌ ಒಲಿಂಪಿಯಾಡ್‌ನ‌ ಜ್ಯೋತಿಯನ್ನು ಗ್ರ್ಯಾನ್‌ಮಾಸ್ಟರ್‌ ಪ್ರವೀಣ್‌ ತಿಪ್ಸೆ ಅವರಿಗೆ ಹಸ್ತಾಂತರಿಸಿದರು.

Advertisement

ಇದೇ ಮೊದಲ ಬಾರಿಯ ಚೆಸ್‌ ಒಲಿಂಪಿಯಾಡ್‌ನ‌ ಜ್ಯೋತಿ ರಿಲೇ ಓಟಕ್ಕೆ ಜೂ. 19ರಂದು ದಿಲ್ಲಿಯ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಸುರು ನಿಶಾನೆ ತೋರಿಸಿದ್ದರು. ತಮಿಳುನಾಡಿನ ಮಹಾಬಲಿಪುರಂನಲ್ಲಿ ಅಂತ್ಯಗೊಳ್ಳುವ ಮೊದಲು ಈ ರಿಲೇ 40 ದಿನಗಳ ಅಂತರದಲ್ಲಿ 75 ನಗರಗಳಲ್ಲಿ ಸಂಚರಿ ಸಲಿದೆ ಎಂದು ಚೆಸ್‌ ಒಲಿಂಪಿಯಾಡ್‌ನ‌ ಅಧಿಕೃತ ವಕ್ತಾರರು ತಿಳಿಸಿದ್ದಾರೆ.

ಚೆಸ್‌ ಒಲಿಂಪಿಯಾಡ್‌ ಜ್ಯೋತಿಯ ಆತಿಥ್ಯ ವಹಿಸಿರುವುದು ಜಮ್ಮು ಮತ್ತು ಕಾಶ್ಮೀರದ ಪ್ರತಿಯೊಬ್ಬ ಪ್ರಜೆಯ ಹೆಮ್ಮೆಯ ಕ್ಷಣವಾಗಿದೆ ಎಂದು ಮನೋಜ್‌ ಸಿನ್ಹ ತಿಳಿಸಿದರು. ಕಾಶ್ಮೀರ ದಿಂದ ಕನ್ಯಾಕುಮಾರಿಯವರೆಗೆ ತನ್ನ ಪ್ರಯಾಣದಲ್ಲಿ ಈ ಜ್ಯೋತಿಯು ಉತ್ತಮ ಕ್ರೀಡಾ ಮನೋಭಾವ, ಸಾಂ ಕ ಕೆಲಸ, ಶಾಂತಿ, ಸೌಹಾ ರ್ದತೆ ಮತ್ತು ಸಹೋದರತ್ವದ ಮೌಲ್ಯ ಗಳನ್ನು ಉತ್ತೇಜಿಸಲು ಜನರನ್ನು ಒಟ್ಟುಗೂಡಿ ಸಲಿದೆ ಎಂದವರು ಹೇಳಿದರು.

ಜುಲೈ 2ರಿಂದ ಶ್ರೀನಗರದಲ್ಲಿ ಆರಂಭವಾಗುವ ಕಾಶ್ಮೀರ ಓಪನ್‌ ಫಿಡೆ ರೇಟಿಂಗ್‌ ಚೆಸ್‌ ಕೂಟವನ್ನು ಯಶಸ್ವಿ ಗೊಳಿಸಲು ಚೆಸ್‌ ಅಸೋಸಿಯೇಶನ್‌ ಮತ್ತು ಜಮ್ಮು ಆ್ಯಂಡ್‌ ಕಾಶ್ಮೀರ ಕ್ರೀಡಾ ಕೌನ್ಸಿಲ್‌ ಎಲ್ಲ ಪ್ರಯತ್ನ ಮಾಡಲಿದೆ ಎಂದವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next