Advertisement
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಈ ಬೆಳವಣಿಗೆಯಿಂದಾಗಿ ಕಾಶ್ಮೀರದ ಸ್ಥಿತಿ ಮತ್ತಷ್ಟು ಹದಗೆಡಬಹುದು ಹಾಗೂ ಅಣ್ವಸ್ತ್ರಹೊಂದಿರುವ ಎರಡು ದೇಶಗಳ ಮಧ್ಯೆ ಇನ್ನಷ್ಟು ವೈರತ್ವಕ್ಕೆ ಕಾರಣವಾಗಬಹುದು ಎಂದಿದ್ದಾರೆ. ಪಾಕ್‌ನ ವಿದೇಶಾಂಗ ಕಾರ್ಯದರ್ಶಿ, ಭಾರತ ಅಂತಾರಾಷ್ಟ್ರೀಯ ಒಪ್ಪಂದ ಮತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳನ್ನು ಬದಿಗೆ ಸರಿಸಿದೆ ಎಂದು ಆರೋಪಿಸಿದ್ದಾರೆ.
ಸಂಖ್ಯಾಬಲದ ಆಧಾರದಲ್ಲಿ ಎನ್‌ಡಿಎ ಸರ್ಕಾರಕ್ಕೆ, ಇಂಥದ್ದೊಂದು ನಿರ್ಧಾರ ತೆಗೆದುಕೊಳ್ಳುವುದು ಕಷ್ಟದ ಸ್ಥಿತಿಯೇ ಆಗಿತ್ತು. ಆದರೆ, ಕಳೆದ 10 ದಿನದಲ್ಲಿ
ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ತ್ರಿವಳಿ ತಲಾಖ್, ಆರ್‌ಟಿಐ ಮಸೂದೆಗಳ ಪಾಸ್ ಮಾಡಿಸಿಕೊಂಡಿದೆ. ಬಿಜೆಡಿ, ಎಐಎಡಿಎಂಕೆ, ವೈಎಸ್‌ಆರ್ ಕಾಂಗ್ರೆಸ್,
ಟಿಆರ್‌ಎಸ್‌ನಂಥ ಪಕ್ಷಗಳ ಬೆಂಬಲ ಸಿಕ್ಕಿದ್ದರಿಂದ ಕೇಂದ್ರಕ್ಕೆ ಆತ್ಮವಿಶ್ವಾಸ ಬಂದಿತ್ತು. ಹೀಗಾಗಿಯೇ ಜಮ್ಮು ಕಾಶ್ಮೀರದ ಬಗ್ಗೆ ನಿರ್ಧಾರ ತೆಗೆದುಕೊಂಡು ಲೋಕಸಭೆಗೂ ಮುನ್ನವೇ ರಾಜ್ಯಸಭೆಯಲ್ಲಿ ಮಂಡನೆ ಮಾಡಿ ಪಾಸ್ ಮಾಡಿಸಿಕೊಂಡಿದೆ.