Advertisement

ಓಟಿಟಿಯಲ್ಲಿ ಬಿಡುಗಡೆಯಾಗಲಿದೆ “ಜೇಮ್ಸ್‌”

10:58 AM Apr 04, 2022 | Team Udayavani |

ನಟ ಪುನೀತ್​ ರಾಜ್​ಕುಮಾರ್ (Puneeth Rajkumar) ಹಾಗೂ ನಿರ್ದೇಶಕ ಚೇತನ್​ ಕುಮಾರ್ (Chetan Kumar) ಕಾಂಬಿನೇಷನ್​ನಲ್ಲಿ ಮೂಡಿಬಂದ ‘ಜೇಮ್ಸ್’ ಸಿನಿಮಾ (James Movie) ಪವರ್‌ ಸ್ಟಾರ್ ಅಭಿನಯಿಸಿರುವ ಜೇಮ್ಸ್‌ ಸಿನೆಮಾ ಅವರ ಹುಟ್ಟುಹಬ್ಬ (ಮಾ.17) ರಂದು ಬಿಡುಗಡೆಯಾಗಿತ್ತು.

Advertisement

ಪುನೀತ್‌ ಅಭಿನಯದ ಕೊನೆ ಸಿನೆಮಾಗೆ ಅಭಿಮಾನಿಗಳು ಚಿತ್ರಮಂದಿರಗಳಲ್ಲಿ ಕಟೌಟ್‌ ಗಳನ್ನು ನಿರ್ಮಿಸಿ ಭರ್ಜರಿ ಸ್ವಾಗತ ನೀಡಿದ್ದರು.  ಜೇಮ್ಸ್‌ ಕರ್ನಾಟಕ ಮಾತ್ರವಲ್ಲದೇ ವಿಶ್ವದಾದ್ಯಂತ ಬಿಡುಗಡೆಯಾಗಿತ್ತು.

ಇದೀಗ ಜೇಮ್ಸ್ ಮತ್ತೊಮ್ಮೆ ಸುದ್ದಿಯಾಗಿದ್ದು, ಪುನೀತ್‌ ಅಭಿನಯದ “ಜೇಮ್ಸ್‌” ಇದೇ ಏಪ್ರಿಲ್‌ 14 ರಂದು ಓಟಿಟಿಯಲ್ಲಿ ಬಿಡುಗಡೆಯಾಗಲಿದೆ. ಬಾಕ್ಸ್‌ ಆಫೀಸ್‌ ನಲ್ಲಿ ಭಾರಿ ಸದ್ದು ಮಾಡಿದ್ದ ಜೇಮ್ಸ್‌ ಸಿನೆಮಾ ಸೋನಿ ಲೈವ್ ನಲ್ಲಿ ಬಿಡುಗಡೆಯಾಗುತ್ತಿದೆ ಎಂಬ ಮಾಹಿತಿ ಲಭಿಸಿದೆ.

ಈ ಬಗ್ಗೆ ಸೋನಿ ಲೈವ್ ತನ್ನ ಟ್ವೀಟರ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಏಪ್ರಿಲ್‌ 14 ರಂದು ಜೇಮ್ಸ್‌ ರಿಲೀಸ್‌ ಅಗಲಿದೆ ಎಂಬುದನ್ನು ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next