Advertisement

ಮತ್ತೆ ಗಾಯಾಳಾದ ಜಿಮ್ಮಿ: ಸರಣಿಯಿಂದ ಹೊರಬಿದ್ದ ಆಂಡರ್ಸನ್

10:10 AM Jan 10, 2020 | Team Udayavani |

ಲಂಡನ್: ಇಂಗ್ಲೆಂಡ್ ತಂಡದ ಅನುಭವಿ ವೇಗಿ ಜೇಮ್ಸ್ ಆಂಡರ್ಸನ್ ಗಾಯಾಳಾಗಿದ್ದಾರೆ. ಹೀಗಾಗಿ ಪ್ರಸಕ್ತ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಮುಂದಿನ ಪಂದ್ಯಗಳಿಂದ ಜಿಮ್ಮಿ ಹೊರಬಿದ್ದಿದ್ಧಾರೆ.

Advertisement

ಆಂಡರ್ಸನ್ ಅವರು ಎಡ ಪಕ್ಕೆಲು ನೋವಿಗೆ ಒಳಗಾಗಿದ್ದು, ಎರಡು ಟೆಸ್ಟ್ ಪಂದ್ಯಗಳು ಬಾಕಿ ಉಳಿದಿರುವಂತೆಯೇ ಹೊರಬಿದ್ದಿದ್ದಾರೆ.

ಕೇಪ್ ಟೌನ್ ನಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದ ಅಂತಿಮ ದಿನದ ವೇಳೆ ಆಂಡರ್ಸನ್ ಗಾಯಾಳಾಗಿದ್ದರು. ಹೀಗಾಗಿ ಅಂತಿಮ ದಿನದ ಕೇವಲ ಎಂಟು ಓವರ್ ಅಷ್ಟೇ ಬೌಲಿಂಗ್ ನಡೆಸಿದ್ದರು.

37 ವರ್ಷದ ಜೇಮ್ಸ್ ಆಂಡರ್ಸನ್ ದ್ವಿತೀಯ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಐದು ವಿಕೆಟ್ ಪಡೆದು ಮಿಂಚಿದ್ದರು. ಆದರೆ ಈಗ ಗಾಯಾಳಾಗಿ ಸರಣಿಯಿಂದಲೇ ಹೊರಬಿದ್ದಿರುವುದು ಇಂಗ್ಲೆಂಡ್ ಗೆ ಆಘಾತ ಉಂಟುಮಾಡಿದೆ.

ಮೊದಲ ಪಂದ್ಯವನ್ನು ದಕ್ಷಿಣ ಆಫ್ರಿಕಾ ಗೆದ್ದಿದ್ದರೆ, ಎರಡನೇ ಪಂದ್ಯವನ್ನುಇಂಗ್ಲೆಂಡ್ 189 ರನ್ ಗಳಿಂದ ಗೆದ್ದುಕೊಂಡಿತ್ತು.

Advertisement

ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಮೂರನೇ ಪಂದ್ಯ ಜನವರಿ 16ರಂದು ಆರಂಭವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next