Advertisement
ಪತ್ರಕರ್ತನ ನಾಪತ್ತೆ ಬಗ್ಗೆ 2 ವಾರಗಳ ಕಾಲ ನಿರಾಕರಣೆಯ ನಿಲುವನ್ನೇ ಮುಂದುವರಿಸಿಕೊಂಡು ಬಂದಿದ್ದ ಸೌದಿ ಅರೇಬಿಯಾ ಬುಧವಾರ ಖಶೋಗ್ಗಿ ಹತ್ಯೆಯಾಗಿ ರುವ ಬಗ್ಗೆ ಧ್ವನಿಮುದ್ರಿಕೆಯ ದಾಖಲೆಗಳಿವೆ ಎಂದು ಟರ್ಕಿಯ ಪತ್ರಿಕೆ ವರದಿ ಮೂರು ದಿನಗಳು ಕಳೆದ ಬಳಿಕ ಈ ತಪ್ಪೊಪ್ಪಿಗೆ ನೀಡಿದೆ. ರಾಯಭಾರ ಕಚೇರಿಯಲ್ಲಿ ಖಶೋಗ್ಗಿ ಜತೆಗಿನ ಚರ್ಚೆ ಕೈ ಮೀರಿ ಹೋದ ಬಳಿಕ ಅವರು ಇಲ್ಲವಾದರು ಎಂದಷ್ಟೇ ಸೌದಿಯ ಅಟಾರ್ನಿ ಜನರಲ್ ಶೇಖ್ ಸೌದ್ ಅಲ್-ಮೊಜೇಬ್ ಮಾಹಿತಿ ನೀಡಿದ್ದಾರೆ. ಪತ್ರಕರ್ತ ಜಮಾಲ್ ಖಶೋಗ್ಗಿ ಕೊಲೆ ಆಗಿರುವುದು ಅಮೆರಿಕ-ಸೌದಿ ಅರೇಬಿಯಾ ನಡುವೆ ಬಿಕ್ಕಟ್ಟಿಗೆ ಕಾರಣವಾಗಲಿದೆ ಎಂದು ಹೇಳಲಾಗುತ್ತಿದೆ.
Advertisement
ಪತ್ರಕರ್ತ ಖಶೋಗ್ಗಿ ಕೊಲೆ ನಿಜ
08:36 AM Oct 21, 2018 | |
Advertisement
Udayavani is now on Telegram. Click here to join our channel and stay updated with the latest news.