Advertisement
ಶಾಸಕರು ಮಾತನಾಡಿ, ನೀರಾವರಿ ಇಲಾಖೆ ಬೆಳಗಾವಿ ವಿಭಾಗೀಯ ಆಯುಕ್ತರಿಗೆ ಏ. 4ರಂದು ಮಧ್ಯಾಹ್ನ 2 ಗಂಟೆಗೆ 0.03 ಟಿಎಂಸಿ ನೀರು ಬಿಡುವಂತೆ ನಿರ್ದೇಶನ ನೀಡಿತ್ತು. ಆದರೆ, ಇದುವರೆಗೆ ನೀರು ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು. ಹಿಪ್ಪರಗಿಯ ಸಹಾಯಕ ಅಭಿಯಂತರರು ನೀರು ಬಿಡಲು ಹಿಂದೇಟು ಹಾಕುತ್ತಿದ್ದಾರೆ. ಹಿಪ್ಪರಗಿ ಜಲಾಶಯದಿಂದ ನೀರು ಬಿಡುಗಡೆ ಮಾಡುವಂತೆ ಆಗ್ರಹಿಸಿದರು.
ನಾಲ್ಕು ದಿನದಲ್ಲಿ ಹಿಪ್ಪರಗಿ ಜಲಾಶಯದಿಂದ ಚಿಕ್ಕಪಡಸಲಗಿ ಬ್ಯಾರೇಜ್‌ಗೆ ನೀರು ಹರಿಯಲಿದೆ ಎಂದು ಡಿಸಿಎಂ ಕಾರಜೋಳ, ಶಾಸಕರಿಗೆ ಭರವಸೆ ನೀಡಿದರು.