Advertisement

Jamakhandi: ಸಮಾಜ ಒಡೆಯುವವರಿಂದ ಸಂಘಟನೆ ಸಾಧ್ಯವೆ?: ಭೀಮಶಿ

05:36 PM Sep 25, 2023 | Team Udayavani |

ಜಮಖಂಡಿ: ತೇರದಾಳ ಶಾಸಕ ಸಿದ್ದು ಸವದಿ ಪಂಚಮಸಾಲಿ ಸಮಾಜವನ್ನು ಟೀಕಿಸುವ ಮೂಲಕ ಸಮಾಜ ಒಡೆಯುವ ಕೆಲಸದಲ್ಲಿ ತೊಡಗಿದ್ದಾರೆ. 2ಎ ಮೀಸಲಾತಿ ಹೋರಾಟಕ್ಕೆ ಬೆಂಬಲ ನೀಡದೆ ಮುರುಗೇಶ ನಿರಾಣಿ ಅವರ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ರಬಕವಿ-ಬನಹಟ್ಟಿ ತಾಲೂಕು ಪಂಚಮಸಾಲಿ ಸಮಾಜ ಅಧ್ಯಕ್ಷ ಭೀಮಶಿ ಮಗದುಮ್ಮ ಹೇಳಿದರು.

Advertisement

ನಗರದ ತಾಲೂಕಾ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ಹಾಗೂ ರಾಣಿಚನ್ನಮ್ಮ ಸಹಕಾರಿ ಸಂಘ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಂಘ-ಸಂಸ್ಥೆಗಳಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶ್ರೀಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಹೋರಾಟ 22 ಕಿ.ಮೀ. ಪಾದಯಾತ್ರೆಯಲ್ಲಿ ಮೀಸಲಾತಿ ಬಗ್ಗೆ ಮಾತನಾಡದೆ ಕೇವಲ ಮುರುಗೇಶ ನಿರಾಣಿ ಅವರ ಬಗ್ಗೆ ಟೀಕಿಸುವ ಕೆಲಸ ಮಾಡಿದ್ದಾರೆ. ಸಮಾಜದ ಮುಖಂಡರ ಕಾಲು ಎಳೆಯುವ ಕೆಲಸ ಬಿಟ್ಟರೆ ಅವರಿಗೆ ಯಾವ ಕೆಲಸ ಇಲ್ಲವಾಗಿದೆ. ಸಮಾಜದ ಸ್ವಸ್ಥ ಹಾಳು ಮಾಡುವ ಬದಲಾಗಿ ಸಮಾಜ ಗಟ್ಟಿಗೊಳಿಸಿ ಪಂಚಮಸಾಲಿ ಸಮಾಜದ ಬೃಹತ್‌ ಸಮಾವೇಶ ಮಾಡಿ ತೋರಿಸಲಿ ಸವಾಲು ಹಾಕಿದರು. ಮುರಗೇಶ ನಿರಾಣಿ ಪಂಚಮಸಾಲಿ ಮೂರು ಪೀಠಗಳಿಗೆ ಸಹಾಯ, ಸಹಕಾರ ನೀಡಿ ಸಮಾಜ ಕಟ್ಟುವ ಕೆಲಸದಲ್ಲಿ ತೊಡಗಿದ್ದಾರೆ  ಎಂದರು. ಸಂಗಮೇಶ ನಿರಾಣಿ ಮಾತನಾಡಿ, ಪಂಚಮಸಾಲಿ ಸಮಾಜ ರಾಜ್ಯಕ್ಕೆ ದೊಡ್ಡ ಕೊಡುಗೆ ನೀಡುವ ಸಮಾಜವಾಗಿದೆ.

ಜಮಖಂಡಿ ತಾಲೂಕಿನಲ್ಲಿ 20 ವರ್ಷಗಳಿಂದ ಸಂಘಟನೆಯೊಂದಿಗೆ ಸಮಾಜ ಒಂದುಗೂಡಿಸುವ ಕೆಲಸ ಮಾಡಿದೆ. ಕಡುಬಡತನದ ಸಮಾಜ ಕೃಷ್ಣಾ ನದಿಯಿಂದ ಭೂಮಿಗಳು ನೀರಾವರಿ ಹೊಂದಿದ್ದು ಪ್ರತಿಯೊಬ್ಬರು ಶ್ರೀಮಂತರು ಆಗಿದ್ದಾರೆ. ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಮುರುಗೇಶ ನಿರಾಣಿ 1 ಕೋಟಿ ವಂತಿಕೆ ಮತ್ತು ರಾಜ್ಯ ಸರಕಾರದಿಂದ 3 ಕೋಟಿ ಅನುದಾನ ನೀಡಿದ್ದಾರೆ.

ಪ್ರತಿಯೊಬ್ಬರು ಸಮಾಜವನ್ನು ಕಟ್ಟುವ ಕೆಲಸ ಮಾಡಬೇಕು. ಸಮಾಜ ಮುಖಂಡರು ಚನ್ನಮ್ಮ ಪ್ರಾ ಧಿಕಾರದ ಶಾಲೆ ಶೀಘ್ರ ಆರಂಭಿಸಬೇಕು ಎಂದರು. ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಪಿ.ಎನ್‌.ಪಾಟೀಲ ಮಾತನಾಡಿ, ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಅವರ ಸಹೋದರ ಏಗಪ್ಪ ಸಮಾಜವನ್ನು ಹಾಳು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

Advertisement

ಬಿ.ಎಸ್‌.ಸಿಂಧೂರ, ಸುನೀತಾ ಬಳಗಾರ ಮಾತನಾಡಿದರು, ವೇದಿಕೆಯಲ್ಲಿ ಧರಿದೇವರ ಮಠದ ಲಕ್ಷ್ಮಣ ಮುತ್ಯಾ, ಸಂಗಮೇಶ ಬಿರಾದರ, ಶ್ರೀಶೈಲ ದಲಾಲ, ರಾಮಣ್ಣ ಹಿಪ್ಪರಗಿ, ಸಿ.ಪಿ.ಜನವಾಡ, ಅಪ್ಪಾಸಾಬ ಚೌಗಲಾ, ಕೆ.ಕೆ. ತುಪ್ಪದ, ಎಲ್‌.ಕೆ.ಉದಪುಡಿ, ಮಲ್ಲಕಾರ್ಜುನ ಹೊಳಿಗಿ, ರವಿ ಯಡಹಳ್ಳಿ, ಸುಭಾಸ ಲಗಳಿ, ಭರಮಪ್ಪ ಉಳ್ಳಾಗಡ್ಡಿ, ಸಿದ್ದಪ್ಪ ಗೌಡಪನ್ನವರ, ಡಿ.ಬಿ.ಜೋಗದಂಡೆ, ವಿಲಾಸ ನಡುವಿನಮನಿ, ಎ,ಎಸ್‌,ಜನವಾಡ, ಜಯಶ್ರೀ ಕಾಡಗಿ, ಸಂಗಮೇಶ ಕೌಜಲಗಿ, ಪ್ರಭು ಜನವಾಡ, ಸಂಗಪ್ಪ ಸಂತಿ, ಪ್ರಕಾಶ ಪಾಟೀಲ, ಬಸನಗೌಡ ಪಾಟೀಲ, ಕಾಡಪ್ಪ ಗಡಾದ ಸಹಿತ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next