ಜಮಖಂಡಿ: ಜಿಲ್ಲೆಯಲ್ಲಿ ಬೀಳಗಿ ಶಾಸಕ ಮುರಗೇಶ ನಿರಾಣಿ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ. ನಿರಾಣಿ ಸಮೂಹ ಸಂಸ್ಥೆ ಕೈಗಾರಿಕೆ, ಶಿಕ್ಷಣ, ಆರೋಗ್ಯ ಹಾಗೂ ಸಹಕಾರಿ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದು, ಪ್ರತಿಯೊಬ್ಬರಿಗೂ ಸಹಾಯ, ಸಹಕಾರ ನೀಡಿದ್ದಾರೆ ಎಂದು ಶಾಸಕ ಆನಂದ ನ್ಯಾಮಗೌಡ ಹೇಳಿದರು.
ನಗರದ ಎಪಿಎಂಸಿ ಮಂಗಲ ಕಾರ್ಯಾಲಯದಲ್ಲಿ ಶುಕ್ರವಾರ ಜಮಖಂಡಿ ವಿಭಾಗೀಯ ಕಚೇರಿ ಉದ್ಘಾಟನೆ, ನೂತನ ಕಟ್ಟಡ ಭೂಮಿಪೂಜೆ, ಎಂಆರ್‌ಎನ್ ಆರೋಗ್ಯ ಯೋಜನೆ ಲೋಕಾರ್ಪಣೆ, ಹೆಲ್ತ್ ಕಾರ್ಡ್ ವಿತರಣೆ ಹಾಗೂ ಅರ್ಬನ್ ಬ್ಯಾಂಕ್ ನೂತನ ನಿರ್ದೇಶಕರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಬೀಳಗಿ ಶಾಸಕ ಮುರಗೇಶ ನಿರಾಣಿ ಮಾತನಾಡಿ, ವಿಷನ್ 2020ರೊಳಗೆ ವಿಜಯ ಸೌಹಾರ್ದ ಸಹಕಾರಿ ಸಂಸ್ಥೆ 100 ಶಾಖೆ ಮೂಲಕ 1 ಸಾವಿರ ಕೋಟಿ ಬಂಡವಾಳ ಸಂಗ್ರಹಿಸುವ ಗುರಿಯೊಂದಿಗೆ 1 ಲಕ್ಷ ರೈತರಿಗೆ ವಿಮೆ ಸೌಲಭ್ಯ ಹಾಗೂ 1500 ಕೋಟಿ ಮೌಲ್ಯದ ಹೆಲ್ತ್ ಕಾರ್ಡ್ ವಿತರಿಸುವ ಗುರಿ ಯೋಜನೆ ರೂಪಿಸಲಾಗಿದೆ. 20 ವರ್ಷದ ಹಿಂದೆ 500 ಟನ್ ಕಬ್ಬು ನುರಿಸುವ ಸಾಮರ್ಥ್ಯದ ಕಾರಖಾನೆ ಇಂದು ಪ್ರತಿನಿತ್ಯ 20 ಸಾವಿರ ಟನ್ ಕಬ್ಬನ್ನು ನುರಿಸಲಾಗುತ್ತಿದೆ. 4 ಕಾರ್ಖಾನೆಗಳಲ್ಲಿ 40 ಲಕ್ಷ ಟನ್ ಕಬ್ಬು ನುರಿಸುವ ಮೂಲಕ ಏಷ್ಯಾ ಖಂಡದಲ್ಲಿ ಹೆಗ್ಗಳಿಕೆ ಪಾತ್ರವಾಗಿದೆ. ನಿರಾಣಿ ಫೌಂಡೇಶನ್ ಮೂಲಕ ಕೈಗಾರಿಕೆ, ಶಿಕ್ಷಣ, ಆರೋಗ್ಯ ಹಾಗೂ ಸಹಕಾರಿ ಕ್ಷೇತ್ರದಲ್ಲಿ ಸೇವೆ ವಿಸ್ತರಿಸಿಕೊಂಡಿದೆ. ಜನರ, ರೈತರ ಆಶೀರ್ವಾದದೊಂದಿಗೆ ನಿರಾಣಿ ಸಮೂಹ ಸಂಸ್ಥೆ ಯಶಸ್ವಿಯಾಗಿ ಸಾಗುತ್ತಿದೆ. ಮುಧೋಳ, ಬಾಗಲಕೋಟೆಯಲ್ಲಿ ಸುಸಜ್ಜಿತ ಶಿಕ್ಷಣ ಸಂಸ್ಥೆ, ಕಳೆದ 4 ವರ್ಷದಲ್ಲಿ 80 ಸಾವಿರ ಜನರಿಗೆ ಉಚಿತ ಆರೋಗ್ಯ ತಪಾಸಣೆ, 18 ಸಾವಿರ ಜನರಿಗೆ ಉಚಿತ ಶಸ್ತ್ರಚಿಕಿತ್ಸೆ ಮಾಡಿಸಲಾಗಿದೆ. ವಿದ್ಯಾರ್ಥಿಗಳಿಗೆ ಐಎಎಸ್/ಕೆಎಎಸ್ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದ್ದು, ನೂರಾರು ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಂಡಿದ್ದಾರೆ ಎಂದರು.
ಮುಗಳಖೋಡದ ಜಿಗಡಾ ಮಠದ ಡಾ.ಮುರುಘರಾಜೇಂದ್ರ ಸ್ವಾಮಿಗಳು, ಡಾ.ಈಶ್ವರ ಮಂಟೂರ, ಕಮರಿಮಠದ ಸಿದ್ಧಲಿಂಗದೇವರು ಆಶೀರ್ವಚನ ನೀಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಜಿ.ಎಸ್. ನ್ಯಾಮಗೌಡ, ಬಿಎಲ್‌ಡಿಇ ಸಂಸ್ಥೆಯ ನಿರ್ದೇಶಕ ಅರುಣಕುಮಾರ ಶಹಾ, ವೈದ್ಯ ಡಾ. ವಿ.ಎಸ್. ಸಾಬೋದರ ಮಾತನಾಡಿದರು. ಕೃಷ್ಣಗೌಡ ಪಾಟೀಲ, ಫಕೀರಸಾಬ ಬಾಗವಾನ, ಉಮೇಶ ಮಹಾಬಳಶೆಟ್ಟಿ, ಬಸವರಾಜ ಕಲೂತಿ, ನಂದೆಪ್ಪ ದಡ್ಡಿಮನಿ, ಈರಣ್ಣ ಬಂಡಿಗಣಿ, ವೀರಪಯ್ಯ ಕಂಬಿ, ಮಾಮೂನ ಪಾರತನಳ್ಳಿ, ಅಪ್ಪಾಸಾಬ ಮನಗೂಳಿ, ರುದ್ರಯ್ಯ ಕರಡಿ, ರಾಹುಲ ಕಲೂತಿ, ಧರೆಪ್ಪ ತೇಲಿ, ಪ್ರದೀಪ ಮಹಾಲಿಂಗಪೂರಮಠ, ಶಿವಕುಮಾರ ಕುಳ್ಳೊಳ್ಳಿ, ವೈಶಾಲಿ ಗೊಂದಿ, ಶೋಭಾ ಅರಕೇರಿ, ಪ್ರಧಾನ ವ್ಯವಸ್ಥಾಪಕ ಜಿ.ಎಂ. ವೈದ್ಯ, ಎಂ.ಎಚ್. ಪತ್ತೆನ್ನವರ ಸಹಿತ ಹಲವರು ಇದ್ದರು.
ಇದೇ ಸಂದರ್ಭದಲ್ಲಿ ನೂತನ ಆಯ್ಕೆಗೊಂಡ ಅರ್ಬನ್ ಬ್ಯಾಂಕ್ ನಿರ್ದೇಶಕರನ್ನು ಸನ್ಮಾನಿಸಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು, ವೈದ್ಯರನ್ನು, ಅತ್ಯುತ್ತಮ ಗ್ರಾಹಕರನ್ನು ಸನ್ಮಾನಿಸಲಾಯಿತು. ನಗರಸಭೆ ಮಾಜಿ ಸದಸ್ಯ ಶ್ರೀನಿವಾಸ ಅಪರಂಜಿ ಸ್ವಾಗತಿಸಿ ಮಾತನಾಡಿದರು. ವೆಂಕಟೇಶ ಜಂಬಗಿ ನಿರೂಪಿಸಿದರು. ಪ್ರವೀಣ ಜನವಾಡ ವಂದಿಸಿದರು.