ಜಮಖಂಡಿ: ತಾಲೂಕಿನ ಮುಖ್ಯ ಬೆಳೆ ಕಬ್ಬು ಆಗಿರುವುದರಿಂದ ಕಬ್ಬು ಬೆಳೆಯುವ ರೈತರು ಮಣ್ಣು ಮತ್ತು ನೀರು ಕಾಪಾಡಿಕೊಂಡು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಉತ್ತಮ ಕೃಷಿ ಕೈಗೊಂಡಲ್ಲಿ ಯಶಸ್ಸು ಖಚಿತ. ರೈತರು ಪ್ರತಿ ಬೆಳೆಗೆ ಹನಿ ನೀರಾವರಿ ಪದ್ದತಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಆನಂದ ನ್ಯಾಮಗೌಡ ಹೇಳಿದರು.
ಮರೇಗುದ್ದಿಯಲ್ಲಿ ನಡೆದ ಅಡವಿಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಸಾವಯವ ಕೃಷಿ ಪದ್ದತಿಗಳು ಮತ್ತು ಉತ್ಪನ್ನಗಳ ಮಾರುಕಟ್ಟೆ ಕುರಿತು ರೈತರ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೈತರು ಕೃಷಿ ಭೂಮಿ ಮಾರಾಟ ಮಾಡಿ ನಗರಗಳಿಗೆ ವಲಸೆ ಹೋಗುತ್ತಿರುವುದು ಸಾಮಾನ್ಯವಾಗಿದೆ. ಕೃಷಿ ಪರಂಪರೆ ಉಳಿಸಿಕೊಂಡು ಹೋಗುವ ಕೆಲಸ ನಡೆಯಬೇಕು ಎಂದರು.
ಉಪವಿಭಾಗದ ಉಪಕೃಷಿ ನಿರ್ದೇಶಕ ಎಲ್.ಐ. ರೂಡಗಿ, ವಿಜಯಪುರ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥ ಡಾ| ಆರ್‌ಬಿ. ಬೆಳ್ಳಿ ಮಾತನಾಡಿದರು.
ಮರೆಗುದ್ದಿ ಅಡವಿಮಠದ ಗುರುಪಾದ ಸ್ವಾಮೀಜಿ ಉದ್ಘಾಟಿಸಿದರು. ವಿಧಾನ ಪರಿಷತ್ ಮಾಜಿ ಸದಸ್ಯಜಿ.ಎಸ್.ನ್ಯಾಮಗೌಡ, ಸದಸಾಶಿವ ಮಲ್ಲಪ್ಪ ಬಂಗಿ, ಬಸವರಾಜ ನಾಗಪ್ಪ ಗಿರಿಗಾಂವಿ, ಮಹಾದೇವಿ ಅಡಿವೆಪ್ಪ ಕಿತ್ತೂರ, ಸುರೇಶ ಕನಕನ್ನವರ, ಲಕ್ಷ್ಮೀ ನ್ಯಾಮಗೌಡ ಅವರನ್ನು ಸನ್ಮಾನಿಸಲಾಯಿತು.
ಸಹಾಯಕ ಕೃಷಿ ಅಧಿಕಾರಿ ಎಂ.ಬಿ. ದೇಸಂಗಿ, ಕೆ.ಎಸ್ ಅನಂತಪುರ, ರುದ್ರಪ್ಪ ಝುಲಪಿ, ರಾಚಪ್ಪ ಹುನ್ನೂರ, ಶಿವನಗೌಡ ಪಾಟೀಲ, ಎಂ.ಸಿ. ರಾಮಗೊಂಡ, ಪ್ರಕಾಶ ರಾಮಗೊಂಡ, ಎಂ.ಆರ್. ಆಥಣಿ, ಬಸಪ್ಪ್ಪ ಬಾರಿಕಾಯಿ, ಎ.ಐ. ಹಲಗಣ್ಣವರ, ಯಮನಪ್ಪ ಗುಂಡಿ, ಮಲ್ಲಪ್ಪ ಕರಿಗೌಡರ ಇದ್ದರು.
ಸಂಗನಗೌಡ ಪಾಟೀಲ ಸ್ವಾಗತಿಸಿದರು ಆತ್ಮಯೋಜನೆ ತಾಲೂಕ ತಾಂತ್ರಿಕ ವ್ಯವಸ್ಥಾಪಕ ಕೆ.ಎ. ಜಮಖಂಡಿ ನಿರೂಪಿಸಿದರು. ಕೃಷಿ ಅಧಿಕಾರಿ ರವೀಂದ್ರ ತುಳಸಿಗೇರಿ ವಂದಿಸಿದರು.