ಗಯಾನಾ: ಜಮೈಕಾ ತಲ್ಲವಾಸ್ 3ನೇ ಬಾರಿಗೆ “ಕೆರಿಬಿಯನ್ ಪ್ರೀಮಿಯರ್ ಲೀಗ್’ ಚಾಂಪಿಯನ್ ಆಗಿ ಮೂಡಿಬಂದಿದೆ. ಇಲ್ಲಿನ “ಪ್ರೊವಿಡೆನ್ಸ್ ಸ್ಟೇಡಿಯಂ’ನಲ್ಲಿ ನಡೆದ ಫೈನಲ್‌ನಲ್ಲಿ ರೋವ¾ನ್ ಪೊವೆಲ್ ಪಡೆ ಬಾರ್ಬಡಾಸ್ ರಾಯಲ್ಸ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.
ಮೊದಲು ಬ್ಯಾಟಿಂಗ್ ನಡೆಸಿದ ಬಾರ್ಬಡಾಸ್ ಗಳಿಸಿದ ಮೊತ್ತ 7 ವಿಕೆಟಿಗೆ 161. ಬೆನ್ನಟ್ಟಿದ ಜಮೈಕಾ 16.1 ಓವರ್‌ಗಳಲ್ಲಿ ಎರಡೇ ವಿಕೆಟ್ ಕಳೆದುಕೊಂಡು 162 ರನ್ ಬಾರಿ ಸಿತು. ಇದಕ್ಕೂ ಮೊದಲು 2013 ಮತ್ತು 2016ರಲ್ಲಿ ಜಮೈಕಾ ಪ್ರಶಸ್ತಿ ಜಯಿಸಿತ್ತು.
ಆರಂಭಕಾರ ಬ್ರ್ಯಾಂಡನ್ ಕಿಂಗ್ ಜಮೈಕಾದ ಗೆಲುವಿನ ಕಿಂಗ್ ಆಗಿ ಮೂಡಿಬಂದರು. ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಅವರು 50 ಎಸೆತಗಳಿಂದ ಅಜೇಯ 83 ರನ್ ಬಾರಿಸಿದರು. ಸಿಡಿಸಿದ್ದು 13 ಫೋರ್ ಹಾಗೂ 2 ಸಿಕ್ಸರ್.
4ನೇ ಎಸೆತದಲ್ಲೇ ಆರಂಭಕಾರ ಕೆನ್ನರ್ ಲೂಯಿಸ್ (0) ಅವರ ವಿಕೆಟ್ ಕಿತ್ತ ಬಾರ್ಬಡಾಸ್‌ಗೆ ಕಿಂಗ್ ಮತ್ತು ಶಮರ್ ಬ್ರೂಕ್ಸ್ ಸವಾಲಾಗಿ ಕಾಡಿದರು. ಇವರಿಂದ ದ್ವಿತೀಯ ವಿಕೆಟಿಗೆ 86 ರನ್ ಒಟ್ಟುಗೂಡಿತು. ಬ್ರೂಕ್ಸ್ 47 ರನ್ ಹೊಡೆದರು (33 ಎಸೆತ, 6 ಬೌಂಡರಿ, 2 ಸಿಕ್ಸರ್).
ಬಾರ್ಬಡಾಸ್ ಆರಂಭ ಬಿರುಸಿ ನಿಂದಲೇ ಕೂಡಿತ್ತು. ರಖೀಮ್ ಕಾರ್ನ್ವಾಲ್ (36) ಮತ್ತು ನಾಯಕ ಕೈಲ್ ಮೇಯರ್ (29) ಭರ್ತಿ 6 ಓವರ್‌ಗಳಲ್ಲಿ 63 ರನ್ ರಾಶಿ ಹಾಕಿದರು. ಆದರೆ ಇದೇ ಲಯವನ್ನು ಕಾಯ್ದುಕೊಳ್ಳಲು ತಂಡಕ್ಕೆ ಸಾಧ್ಯವಾಗಲಿಲ್ಲ. ಫ್ಯಾಬಿಯನ್ ಅಲೆನ್ ಮತ್ತು ನಿಕೋಲ್ಸನ್ ಗಾರ್ಡನ್ ತಲಾ 3 ವಿಕೆಟ್ ಉರುಳಿಸಿ ಕಡಿವಾಣ ಹಾಕಿದರು. ಆಜಂ ಖಾನ್ ಅವರಿಂದ ಅರ್ಧ ಶತಕ ದಾಖಲಾಯಿತು.