Advertisement

Jamaica: ನಗ್ನವಾಗಿ ಲಗ್ನವಾದ 29 ಜೋಡಿ

10:52 PM Nov 12, 2024 | Team Udayavani |

ಕಿಂಗ್ಸ್‌ಟನ್‌: ಮದುವೆಯೆಂದರೆ ಬಣ್ಣಬಣ್ಣದ ದಿರಿಸು, ಆಭರಣಗಳಲ್ಲಿ ಮುಳುಗೇಳುವುದನ್ನು ಸಮಾಜ ರೂಢಿಸಿಕೊಂಡಿದೆ. ಆದರೆ ಇದರ ನಡುವೆ ಜಮೈಕಾದ ರೆಸಾರ್ಟ್‌ವೊಂದರಲ್ಲಿ ಬರೋಬ್ಬರಿ 29 ಜೋಡಿಗಳು ಮೈಮೇಲೆ ತುಂಡುಡುಗೆಯೂ ಇಲ್ಲದೆ ಮದುವೆ ಮಾಡಿಕೊಂಡಿವೆ.

Advertisement

ಮದುವೆಯಾದ ಜೋಡಿಗಳಷ್ಟೇ ಅಲ್ಲದೇ ಮದುವೆಯಲ್ಲಿ ಭಾಗಿಯಾದ ಅತಿಥಿಗಳೂ ನಗ್ನವಾಗಿಯೇ ಭಾಗಿಯಾಗಿದ್ದರು. ಹೆಡೋನಿಸಂ ರೆಸಾರ್ಟ್‌ ಪ್ರತಿ ವರ್ಷ 3 ದಿನಗಳ ನಗ್ನ ದಿನವನ್ನು ಆಚರಿಸಲಿದ್ದು, ಈ ಸಮಯದಲ್ಲಿ ಎಲ್ಲರೂ ನಗ್ನವಾಗಿಯೇ ಇಲ್ಲಿ ಭಾಗಿಯಾಗುತ್ತಾರೆ.

2003ರಿಂದ ಇದನ್ನು ನಡೆಸಲಾಗುತ್ತಿದ್ದು, ಪ್ರಕೃತಿಯ ಜತೆ ಮನುಷ್ಯನ ಸಹಜ ಬದುಕನ್ನು ಗೊತ್ತು ಮಾಡಿಸುವುದಕ್ಕೋಸ್ಕರ ಇದನ್ನು ಮಾಡಲಾಗುತ್ತಿದೆ ಎಂದು ರೆಸಾರ್ಟ್‌ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next