Advertisement

ಜಾಲ್ಸೂರಿನಲ್ಲಿ ಕಸ ವಿಲೇವಾರಿ ಪೂರ್ಣ, ತೊಟ್ಟಿ ತೆರವು

12:28 PM Sep 05, 2018 | Team Udayavani |

ಜಾಲ್ಸೂರು: ಗ್ರಾಮದ ಪಂಚಾಯತ್‌ ವ್ಯಾಪ್ತಿಯ ರಸ್ತೆಗಳಲ್ಲಿ ತ್ಯಾಜ್ಯಗಳು ತುಂಬಿದ ತೊಟ್ಟಿಗಳನ್ನು ಕೊನೆಗೂ ತೆರವುಗೊಳಿಸಲಾಗಿದೆ. ಗ್ರಾ.ಪಂ. ವತಿಯಿಂದ ಶುಚಿತ್ವ ಕಾರ್ಯಆರಂಭಿಸಿ, ಕಸವನ್ನು ಬೇರೆ ಕಡೆಗೆ ಸಾಗಿಸಿದ್ದಾರೆ. ಆರು ತಿಂಗಳಿಂದ ತುಂಬಿರುವ ತೊಟ್ಟಿಯನ್ನು ಖಾಲಿ ಮಾಡಿಸಿಲ್ಲವಾದ್ದರಿಂದ ದುರ್ವಾಸನೆ ಬರಲು ಆರಂಭಿಸಿತ್ತು. ಇದರ ಬಗ್ಗೆ ಒಂದು ವಾರದ ಮುಂಚೆ ‘ಉದಯವಾಣಿ’ ಸುದಿನದಲ್ಲಿ ವಿಶೇಷ ವರದಿ ಪ್ರಕಟಿಸಲಾಗಿತ್ತು. ಇದಕ್ಕೆ ಸ್ಪಂದಿಸಿರುವ ಜಾಲ್ಸೂರು ಗ್ರಾ.ಪಂ. ತ್ಯಾಜ್ಯ ವಿಲೇವಾರಿ ಮಾಡಿದೆ.

Advertisement

ತೊಟ್ಟಿಯ ಸ್ಥಳ ಬದಲಾವಣೆ
ಕಾಸರಗೋಡು ಹೆದ್ದಾರಿಯ ಕಾಳಮನೆಗೆ ಹೋಗುವ ರಸ್ತೆ ಆರಂಭವಾಗುವ ಸ್ಥಳದಲ್ಲಿ ರಸ್ತೆ ಮಧ್ಯದಲ್ಲಿದ್ದ ಕಸದ ತೊಟ್ಟಿಯನ್ನು ಖಾಲಿ ಮಾಡಿಸಿ, ರಸ್ತೆ ಪಕ್ಕದ ಮರದ ಹತ್ತಿರ ಇಡಲಾಗಿದೆ. ಗ್ರಾ.ಪಂ. ಅಧ್ಯಕ್ಷೆ ಶಶಿಕಲಾ ವಿಶೇಷ ಮುತುವರ್ಜಿ ವಹಿಸಿ, ಕಸ ವಿಲೇವಾರಿಗೆ ಕ್ರಮ ಕೈಗೊಂಡಿದ್ದಾರೆ. ಸಾರ್ವಜನಿಕರೂ ಸರಿಯಾದ ಸಮಯದಲ್ಲಿ, ಸೂಕ್ತವಾಗಿ ಕಸ ವಿಲೇವಾರಿ ಮಾಡಿ ಗ್ರಾಮದ ಸ್ವಚ್ಛತೆಗೆ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next