ಭಾರತೀನಗರ: ಜಲಮಿಷನ್ ಯೋಜನೆಯಡಿ ಮೀಟರ್ ಅಳವಡಿಕೆ ವಿರೋಧಿಸಿ ಪ್ರಾಂತ ಕೃಷಿಕೂಲಿಕಾರರ ಸಂಘದ ಪದಾಧಿಕಾರಿಗಳು ಸಮೀಪದ ಎಸ್.ಐ.ಹೊನ್ನಲಗೆರೆ ಗ್ರಾಪಂಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಪ್ರಾಂತ ಕೃಷಿ ಕೂಲಿಕಾರರ ಸಂಘದ ಪದಾಧಿಕಾರಿಗಳು ಪಂಚಾಯಿತಿ ಕಚೇರಿಯಲ್ಲಿ ಜಮಾಯಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ನೂಸರ್ಗಿಕ ಸ್ವತ್ತು: ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಹನುಮೇಶ್ ಮಾತನಾಡಿ, ಜಲಜೀವನ್ ಮಿಷನ್ ಯೋಜನೆಯಡಿ ಪ್ರತಿಮನೆಗಳಿಗೆ ಮೀಟರ್ ಅಳವಡಿಸುವುದರಿಂದರೈತಾಪಿ ವರ್ಗದ ಜನರಿಗೆ ಆರ್ಥಿಕ ಸಂಕಷ್ಟಎದುರಾಗುತ್ತದೆ. ಪ್ರಕೃತಿಯಿಂದ ಸಿಗುವಂತಹನೀರಿಗೆ ನಾವು ಹಣಕೊಟ್ಟು ಕುಡಿಯುವಂತಹದುರ್ದೈವ ಬಂದೊದಗಿದೆ. ಇದು ಯಾರ ಸ್ವತ್ತುಅಲ್ಲ. ನೈಸರ್ಗಿಕ ಸಂಪತ್ತಿನಿಂದ ನೀರು ಗುತ್ತಿದೆ. ಇದಕ್ಕೆ ಯಾವ ಮೀಟರ್ ಅಳವಡಿಕೆ ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜೀವನಕ್ಕೆ ನೆರವಾಗಿ: ಉದ್ಯೋಗ ಖಾತರಿ ಯೋಜನೆಯಡಿ ಕೂಲಿಕಾರರಿಗೆ ವರ್ಷಕ್ಕೆ 200 ದಿನ ಕೆಲಸ ನೀಡಬೇಕು. 600 ರೂ.ಕೂಲಿನೀಡಬೇಕು. ಈಗ ಕೇವಲ 50 ದಿನ ಮಾತ್ರಕೆಲಸ ನೀಡಲಾಗಿದೆ. ಕೂಡಲೇ ಇನ್ನುಳಿದದಿನಗಳಲ್ಲಿ ಕೂಲಿಕಾರರ ಕೆಲಸ ನೀಡಿ ಅವರಬದುಕಿಗೆ ನೆರವಾಗಬೇಕೆಂದು ಒತ್ತಾಯ ಪಡಿಸಿದರು.
ಸರ್ಕಾರ ಅರ್ಹ ಫಲಾನುಭವಿಗಳಿಗೆ ವಸತಿ ಹಂಚಬೇಕೆಂದು ಪಂಚಾಯಿತಿಗಳಿಗೆ ಸೂಚನೆ ನೀಡಿದರೂ ಸಹ ಆಡಳಿತ ಮಂಡಳಿ ಉಳ್ಳವರಿಗೆ ವಸತಿ ಹಂಚಿಕೆ ಮಾಡಿರುವುದು ಎಷ್ಟರ ಮಟ್ಟಿಗೆಸರಿ ಎಂದು ಪ್ರಶ್ನಿಸಿದರು. ಕೂಡಲೇ ಅರ್ಹ ಫಲಾನು ಭವಿಗಳಿಗೆ ವಸತಿ ಹಂಚಿಕೆ ಮಾಡಬೇಕೆಂದು ಆಗ್ರ ಹಿಸಿದರು. ಇದಕ್ಕೂ ಮೊದಲು ಗ್ರಾಮದ ಮುಖ್ಯ ರಸ್ತೆಯಲ್ಲಿಪಂಚಾಯಿತಿ ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಮೆರವಣಿಗೆ ನಡೆಸಿದರು.
ಇದೇ ವೇಳೆ ಕೃಷಿ ಕೂಲಿಕಾರರ ಸಂಘದಹಾಗಲಹಳ್ಳಿ ಘಟಕದ ಅಧ್ಯಕ್ಷೆ ಪ್ರೇಮಮ್ಮ,ಕಾರ್ಯದರ್ಶಿ ಪ್ರಕಾಶ್, ಮಹದೇವು,ಮಣಿಯಮ್ಮ, ಶಶಿಕಲಾ, ಸವಿತಾ, ಸುಜಾತ,ಕೆಂಪಮ್ಮ, ರಶ್ಮಿ, ಶೀಲಾ, ಪುಪ್ಪಾವತಿ, ದಿವ್ಯಾ ಸೇರಿದಂತೆ ಇತರರಿದ್ದರು.