Advertisement
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿಯ ಅತೀ ಚಿಕ್ಕ ಗ್ರಾಮ ಪಂಚಾಯ್ತಿ ಯಾದ ಮೋದೂರು ಗ್ರಾಪಂನಲ್ಲಿ ಕೇವಲ ಎಂಟು ಸದಸ್ಯರನ್ನು ಹೊಂದಿದ್ದು, ಗ್ರಾಪಂಗೆ ಮೋದೂರು, ಮೋದೂರು ಪಿ.ಕೊಪ್ಪಲು, ಮೋದೂ ರು ಎಂ.ಕೊಪ್ಪಲು ಹಾಗೂ ಸಣ್ಣೇನಹಳ್ಳಿ ಗ್ರಾಮಗಳು ಸೇರಿವೆ. ನರೇಗಾ ಯೋಜನೆಯಡಿ ಜಲಸಂರಕ್ಷಣೆ, ಎರೆಹುಳು ಗೊಬ್ಬರದ ತೊಟ್ಟಿ ನಿರ್ಮಾಣ ಸೇರಿದಂತೆ ಪರಿಸರ ಪೂರಕವಾದ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿರುವುದು ಗಮನಾರ್ಹ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯ ನಿರ್ದೇಶಕಿ ಶಿಲ್ಪನಾಗ್ ಅವರಿಂದ ಪಿಡಿಒ ಪ್ರಕಾಶ್ ಪಂಚಾಯ್ತಿ ಪರವಾಗಿ ಪ್ರಶಸ್ತಿ ಸ್ವೀಕರಿಸಿದರು.
Related Articles
Advertisement
ತಾಲೂಕಿನ ಮೊದಲ ಮಹಿಳಾ ಚಾಲಕಿ ಪದ್ಮಾ : ಕಸ ಸಂಗ್ರಹಣೆಯ ವಾಹನಕ್ಕೆ ತಾಲೂಕಿನಲ್ಲೇ ಮೊದಲೆಂಬಂತೆ ಸಣ್ಣೇನಹಳ್ಳಿ ಗ್ರಾಮದ ಪದ್ಮಾ ಚಾಲಕಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಹಾಗೂ ಜಲಜೀವನ್ ಮಿಷನ್ ಯೋಜನೆಯಡಿ ಸಣ್ಣೇನಹಳ್ಳಿ ಗ್ರಾಮದ ಪ್ರತಿಮನೆಗೂ ನಲ್ಲಿಗೆ ಮೀಟರ್ ಅಳವಡಿಕೆಯಲ್ಲೂ ಮೊದಲ ಸ್ಥಾನದಲ್ಲಿರುವುದು ಸಣ್ಣ ಗ್ರಾಪಂ ಆಗಿದ್ದರೂ ಜಲಸಂಜೀವಿನಿ ಕೀರ್ತಿಗೆ ಭಾಜನವಾಗಿದೆ.
ಜಲ ಸಂರಕ್ಷಣೆ ಸೇರಿದಂತೆ ಎಲ್ಲಾ ಯೋಜನೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡ ಪರಿಣಾಮ ಪಂಚಾಯ್ತಿಗೆ ಪ್ರಶಸ್ತಿ ಗಿಟ್ಟಿಸಿದ್ದು, ಜನಪ್ರತಿನಿಧಿಗಳ ಸಹಕಾರ, ಅಧಿಕಾರಿಗಳ ಬದ್ಧತೆಯ ಕಾರ್ಯದಿಂದ ಅಭಿವೃದ್ಧಿ ಸಾಧ್ಯವೆಂಬುದನ್ನು ಮೋದೂರು ಗ್ರಾಮ ಪಂಚಾಯ್ತಿ ಸಾಧಿಸಿ ತೋರಿಸಿದೆ. ●ಮನು ಬಿ.ಕೆ., ತಾಪಂ ಇಒ
ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಪ್ರತಿನಿಧಿಗಳು,ಗ್ರಾಮಸ್ಥರ ಸಹಕಾರ, ಜಿಪಂ ತಾಪಂ ಸೇರಿದಂತೆ ಎಲ್ಲಾ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಜಲಕ್ರಾಂತಿ, ಪರಿಸರ ಪೂರಕ ಕಾರ್ಯ ಕ್ರಮಗಳನ್ನು ಯಶಸ್ವಿಯಾಗಿಸಿರುವ ಹೆಮ್ಮೆ ಇದೆ. ಇದು ಪ್ರಶಸ್ತಿಗೆ ಪೂರಕವಾಗಿದೆ. ● ಕೆ.ಪ್ರಕಾಶ್, ಪಿಡಿಒ
-ಸಂಪತ್ ಕುಮಾರ್ ಹುಣಸೂರು