Advertisement

ಜಲಮೂಲ ರಕ್ಷಣೆಗೆ ತಿಮ್ಮಕ್ಕ ಮನವಿ

12:12 PM Mar 27, 2017 | Team Udayavani |

ಮಹದೇವಪುರ: ಸಮಾಜದ ಸುಸ್ಥಿರ ಸಮಗ್ರ ಅಭಿವೃದ್ಧಿಗೆ ನೀರು ಅತ್ಯಾವಶ್ಯಕ. ಆದ್ದರಿಂದ ಜಲ ಸಂಪನ್ಮೂಲದ ಸಂರಕ್ಷಣೆ ಹಾಗೂ ಪೋಷಣೆ ಅತಿ ಮುಖ್ಯ ಎಂದು ಸಾಲು ಮರದ ತಿಮ್ಮಕ್ಕ ಹೇಳಿದರು.

Advertisement

ವಿಶ್ವ ನೀರಿನ ದಿನಾಚರಣೆಯ ಅಂಗವಾಗಿ “ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್‌’, “ವಾಟರ್‌ ಏಡ್‌ ಇಂಡಿಯಾ’, “ಮಿಡಿತ ಪೌಂಡೇಷನ್‌’ ಸಂಯುಕ್ತಾಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡಿದ ಅವರು, “ನೀರಿನ ಮಿತ ಬಳಕೆ ಮತ್ತು ತ್ಯಾಜ್ಯ ನೀರಿನ ಮರುಬಳಕೆ ನಮ್ಮೆಲ್ಲರ ಹೊಣೆಯಾಗಿದೆ. ಇದನ್ನು ಪ್ರತಿಯೊಬ್ಬರೂ ಪಾಲಿಸಬೇಕು,” ಎಂದರು.

“ನೀರಿನ ಅಸಮರ್ಪಕ ಬಳಕೆ ಹಾಗೂ ಅಂತರ್ಜಲದ ದುರ್ಬಳಕೆಯಿಂದಾಗಿ ûಾಮ ತಲೆದೋರಿದೆ. ಆದ್ದರಿಂದ ನೀರನ್ನು ಅತ್ಯಂತ ಜಾಗರೂಕವಾಗಿ, ಮಿತವಾಗಿ ಬಳಸಿ ಮುಂದಿನ ಪೀಳಿಗೆಗೆ ಉಳಿಸಬೇಕು,” ಎಂದು ಸಲಹೆ ನೀಡಿದರು. “ಬೆಂಗಳೂರಿನ ಕೆರೆಗಳು ಕಲುಷಿತ ನೀರಿನಿಂದ ಮಲಿನಗೊಂಡಿವೆ. ಸರ್ಕಾರ ಈ ಬಗ್ಗೆ ಕೂಡಲೇ ಎಚ್ಚೆತ್ತುಕೊಳ್ಳಬೇಕು,” ಎಂದು ಕಿವಿಮಾತು ಹೇಳಿದರು. 

ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್‌ನ ಸಂಸ್ಥಾಪಕ ಡಾ.ಡೆನ್ನಿಸ್‌, ವಾಟರ್‌ ಏಡ್‌ ಇಂಡಿಯಾದ ಸದಸ್ಯೆ ತೇಜಸ್ವಿ, ವನಶ್ರೀ ಪ್ರಶಸ್ತಿ ಪುರಸ್ಕೃತ ಉಮೇಶ್‌, ಸಮಾಜ ಸೇವಕ ಜಯಪ್ರಕಾಶ್‌, ಮಿಡಿತ ಪೌಂಡೇಶನ್‌ನ ಸಂಸ್ಥಾಪಕ ಪರಿಸರ ಮಂಜುನಾಥ್‌, ಕೆರೆ ಹೋರಾಟಗಾರ ವೆಂಕಟೇಶ್‌, ವಿಷ್ಣು ಸೇನಾ ಸಂಘಟನೆಯ ಸದಸ್ಯರು ಸೇರಿದಂತೆ ಹಲವರು ಹಾಜರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next