Advertisement

ಜನರಿಗೆ ಮೋದಿ ತಪ್ಪು ಮಾಹಿತಿ

04:06 PM Apr 08, 2019 | |

ಜಾಲಹಳ್ಳಿ: ನರೇಂದ್ರ ಮೋದಿ ಇನ್ನೂ ಹತ್ತು ಬಾರಿ ಪ್ರಧಾನಿಯಾದರೂ ದೇಶ ಅಭಿವೃಧಿœ ಆಗದು, ಬದಲಾಗದು ಎಂದು ರಾಜ್ಯ ಅರಣ್ಯ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

Advertisement

ಇಲ್ಲಿನ ತೇರಿನಪಟ್ಟಿ ಮೈದಾನದಲ್ಲಿ ಶನಿವಾರ ನಡೆದ ಕಾಂಗ್ರೆಸ್‌-ಜೆಡಿಎಸ್‌ ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಧಾನಿ ಮೋದಿ ಕಾಂಗ್ರೆಸ್‌ ಪಕ್ಷ 70 ವರ್ಷ ಆಡಳಿತ ನಡೆಸಿದರೂ ದೇಶ ಅಭಿವೃದ್ಧಿ ಆಗಿಲ್ಲ ಎಂದು ಸುಳ್ಳು ಹೇಳಿ ಜನರ ದಾರಿ ತಪ್ಪಿಸುತ್ತಿದ್ದಾರೆ. ಹಾಗಾದರೆ ಮೋದಿ ಅಧಿಕಾರಕ್ಕೆ ಬರುವ ಮುಂಚೆಯೇ ದೇಶದಲ್ಲಿ ರೈಲು, ರಾಕೆಟ್‌, ಜಲಾಶಯಗಳು, ರಸ್ತೆಗಳು ಇರಲಿಲ್ಲವೇ ಎಂದು ಸತೀಶ ಜಾರಕಿಹೊಳಿ ಪ್ರಶ್ನಿಸಿದ ಅವರು, ಮೋದಿ ಅಧಿಕಾರಕ್ಕೆ ಬರುವ ಮುಂಚೆಯೇ ದೇಶದಲ್ಲಿ ರಾಕೆಟ್‌ ಗಳನ್ನು ಉಡಾಯಿಸಲಾಗಿದೆ. ಸೇನಾ ವ್ಯವಸ್ಥೆಯೂ ಬಲಿಷ್ಠವಾಗಿತ್ತು ಎಂದರು.

ವಿದೇಶದಲ್ಲಿನ ಕಪ್ಪು ಹಣ ತರುತ್ತೇನೆ, ಜನಧನ ಖಾತೆಗಳಿಗೆ 15 ಲಕ್ಷ ಹಣ ಹಾಕುತ್ತೇನೆ ಎಂದು ಮೋದಿ ಹೇಳಿದ್ದರು. ಯಾರ ಖಾತೆಗೆ ಎಷ್ಟು ಹಣ ಜಮಾ ಆಗಿದೆ, ಕಪ್ಪು ಹಣ ಎಷ್ಟು ತಂದಿದ್ದಾರೆ ಎಂಬುದನ್ನು ಹೇಳಿ ಎಂದು ಆಗ್ರಹಿಸಿದರು. ಪ್ರಧಾನಿ ಮೋದಿ ತಾವು ನೀಡಿದ ಭರವಸೆಗಳ ಬಗ್ಗೆ ಮಾತನಾಡುತ್ತಿಲ್ಲ. ರಾಮಮಂದಿರ, ಏರ್‌ಸ್ಟ್ರೆಕ್, ರಾಕೆಟ್‌ ಉಡಾವಣೆಯಂತಹ ಭಾವನಾತ್ಮಕ ವಿಷಯಗಳನ್ನು ಇಟ್ಟುಕೊಂಡು ವೋಟು ಕೇಳುತ್ತಿದ್ದಾರೆ. ಇದರ ಬಗ್ಗೆ ಪಕ್ಷದ ಕಾರ್ಯಕರ್ತರು ಜನರಿಗೆ ತಿಳಿಹೇಳಬೇಕು ಎಂದರು. ಹೈದರಾಬಾದ್‌-ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ 371ಜೆ ಕಲಂ ಜಾರಿಗೊಳಿಸುವಲ್ಲಿ ಈ ಭಾಗದ ಮಲ್ಲಿಕಾರ್ಜುನ ಖರ್ಗೆ ಜತೆಗೆ ಸಂಸದ ಬಿ.ವಿ. ನಾಯಕರ ಪಾತ್ರವೂ ಪ್ರಮುಖವಾಗಿದೆ. ಸುಳ್ಳು ಹೇಳಿ ಮತ ಪಡೆಯುವ ಅವಶ್ಯಕತೆ ನಮಗಿಲ್ಲ. ಜನತೆಗೆ ಸತ್ಯವನ್ನು ತಿಳಿಸಿ ಮತ ಪಡೆಯೋಣ ಎಂದರು.

ಕೇಂದ್ರದಲ್ಲಿ ಕಾಂಗ್ರೆಸ್‌ ಸರ್ಕಾರ ಇದ್ದಾಗ ಆಧಾರ್‌ ಕಾರ್ಡ್‌, ಜಿಎಸ್ಟಿ ಜಾರಿಗೆ ವಿರೋಧಿಸಿದ್ದ ಬಿಜೆಪಿಯುವರು ಇಂದು ಆಧಾರ್‌ ಕಾರ್ಡ್‌
ಮತ್ತು ಜಿಎಸ್ಟಿಯಿಂದ ಅನುಕೂಲ ಇದೆ ಎಂದು ಹೇಳುತ್ತಿದ್ದಾರೆ. ಇಂಥವರ ಕೈಯಲ್ಲಿ ನಮ್ಮ ದೇಶವನ್ನು ಕೊಡಬಾರದು. ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವಂತಹ ಸರ್ಕಾರ ಬೇಕಾಗಿದೆ ಎಂದರು. ಕಳೆದ ಚುನಾವಣೆಯಲ್ಲಿ ಬಿ.ವಿ. ನಾಯಕರು ಅತ್ಯಲ್ಪ ಮತಗಳಿಂದ ಗೆಲುವು ಸಾಧಿಸಿದ್ದರು. ಕಾರ್ಯಕರ್ತರು ಈ ಬಾರಿ ಹೆಚ್ಚಿನ ಶ್ರಮ ವಹಿಸಿ ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಅವರನ್ನು ಗೆಲ್ಲಿಸಬೇಕೆಂದು ಕೋರಿದರು.

ಕಾಂಗ್ರೆಸ್‌ ಅಭ್ಯರ್ಥಿ ಬಿ.ವಿ. ನಾಯಕ ಮಾತನಾಡಿ, ನರೇಂದ್ರ ಮೋದಿ ನೀಡಿದ ಭರವಸೆ ಈಡೇರಿಸುವಲ್ಲಿ ವಿಫಲವಾಗಿದ್ದಾರೆ. ದೇಶಕ್ಕೆ ಕಾಂಗ್ರೆಸ್‌ ಕೊಡುಗೆ ಏನೂ ಇಲ್ಲ ಎಂದು ಅವರು ಟೀಕಿಸುತ್ತಿದ್ದಾರೆ. ಕಾಂಗ್ರೆಸ್‌ ಪಕ್ಷ ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದೆ ಎಂಬುದನ್ನು ತಿಳಿಯದವರ ಕೈಯಲ್ಲಿ ದೇಶ ಸಿಲುಕಿದೆ. ಈ ಬಗ್ಗೆ ಕಾರ್ಯಕರ್ತರು ಜನತೆಗೆ ತಿಳಿಹೇಳಬೇಕಿದೆ ಎಂದರು.

Advertisement

ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಡಳಿತದ ಸರ್ಕಾರ ಹಾಗೂ ಈಗಿನ ಸಮ್ಮಿಶ್ರ ಸರ್ಕಾರ ರೈತರ ಸಾಲ ಮನ್ನಾ, ಕ್ಷೀರಭಾಗ್ಯ, ಅನ್ನಭಾಗ್ಯದಂತಹ ಜನಪರವಾದ ಕಾರ್ಯಕ್ರಮ ಜಾರಿಗೊಳಿಸಿವೆ.
ರಾಜಕಾರಣವನ್ನು ಕೆಲವರು ವ್ಯಾಪಾರ, ಗುತ್ತಿಗೆದಾರಿಕೆಗೆ ಬಳಸಿಕೊಳ್ಳುತ್ತಿದ್ದಾರೆ. ಅಂಥವರಿಂದ ಅಭಿವೃದ್ಧಿ ನಿರೀಕ್ಷಿಸಲಾಗದು. ರಾಜಕಾರಣವನ್ನು ಸಮಾಜಸೇವೆಯನ್ನಾಗಿ ಭಾವಿಸುವವರಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು. ಕಾಂಗ್ರೆಸ್‌ ಬ್ಲಾಕ್‌ ಅಧ್ಯಕ್ಷ ಆದನಗೌಡ ಬುಂಕಲದೊಡ್ಡಿ, ಶರಣಗೌಡ ಗಣೇಕಲ್‌, ಲಿಂಗಸುಗೂರು ತಾಲೂಕು ಅಧ್ಯಕ್ಷ ಶರಣಪ್ಪ ಮೇಟಿ, ಆರ್‌ಡಿಸಿಸಿ ನಿರ್ದೇಶಕ ರಾಜಶೇಖರ ನಾಯಕ, ಜೆಡಿಎಸ್‌ ಮುಖಂಡ ವೆಂಕಟೇಶ ಪೂಜಾರಿ, ಲಕ್ಕಪ್ಪ ಚಿಂಚೋಡಿ, ಮುಖಂಡರಾದ ಯಲ್ಲಪ್ಪ ಚಪ್ಪಳಿಕೆ, ತಾಪಂ ಸದಸ್ಯ ಗೋವಿಂದರಾಜ ನಾಯಕ, ಭೂತಪ್ಪ ದೇವರಮನಿ, ವೇಣುಗೋಪಾಲಗೌಡ ವಾಸುದೇವ
ನಾಯಕ ಇತರರು ಇದ್ದರು.

ಸಂಸದ ಬಿ.ವಿ. ನಾಯಕರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಶಾಸಕ ಶಿವನಗೌಡ ತಾವು ಯಾರಿಂದ ಬೆಳೆದಿದ್ದು ಎಂಬುದನ್ನು ಅರಿತು ಮಾತನಾಡಲಿ.
ರಾಮಣ್ಣ ಇರಬಗೇರಾ,
ಕಾಂಗ್ರೆಸ್‌ ಜಿಲ್ಲಾಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next