ಹೊಸದಿಲ್ಲಿ : ”ಹಲವು ಸಹಸ್ರ ಕೋಟಿ ರೂ. ವಂಚನೆ ಹಗರಣದ ಮುಖ್ಯ ಆರೋಪಿಯಾಗಿ ವಿದೇಶಕ್ಕೆ ಪಲಾಯನ ಮಾಡಿರುವ ಬಿಲಿಯಾಧಿಪತಿ ವಜ್ರಾಭರಣ ಉದ್ಯಮಿ ಮೆಹುಲ್ ಚೋಕ್ಸಿಯ ಪೇ ರೋಲ್ ನಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇತ್ಲಿ ಅವರ ಮಗಳು ಇದ್ದಳು; ಆ ಕಾರಣಕ್ಕಾಗಿಯೇ ಚೋಕ್ಸಿಗೆ ವಿದೇಶಕ್ಕೆ ಪಲಾಯನ ಮಾಡಲು ಬಿಡಲಾಯಿತು” ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಅರುಣ್ ಜೇತ್ಲಿ ವಿರುದ್ಧ ನೇರ ಆರೋಪಗಳ ದಾಳಿಯನ್ನು ಟ್ವಿಟರ್‌ನಲ್ಲಿ ಆರಂಭಿಸಿರುವ ರಾಹುಲ್
ಗಾಂಧಿ, ಜೇತ್ಲಿ ಅವರ ಪುತ್ರಿ ಮೆಹುಲ್ ಚೋಕ್ಸಿ ಅವರಿಂದ ಹಣ ಪಡೆಯುತ್ತಿದ್ದಳು ಎಂದು ಆರೋಪಿಸಿದರಲ್ಲದೆ ಈ ಇಡಿಯ ಹಗರಣವನ್ನು ಮಾಧ್ಯಮಗಳು ಮರೆಮಾಚಿದವು ಎಂದು ಆರೋಪಿಸಿದರು.
“ಮಹಾ ಚೋರ ಮೆಹುಲ್ ಚೋಕ್ಸಿಯ ಪೇ ರೋಲ್ ನಲ್ಲಿ ಅರುಣ್ ಜೇತ್ಲಿ ಪುತ್ರಿ ಇದ್ದಳು; ಹಾಗಾಗಿಯೇ ಚೋಕ್ಸಿಯ ಕಡತದ ಮೇಲೆ ಜೇತ್ಲಿ ಗಟ್ಟಿಯಾಗಿ ಕುಳಿತು ಆತನಿಗೆ ವಿದೇಶಕ್ಕೆ ಪಲಾಯನ ಮಾಡಲು ಬಿಟ್ಟರು. ಜೇತ್ಲಿ ಪುತ್ರಿ ತನ್ನ ಐಸಿಐಸಿಐ ಬ್ಯಾಂಕಿನ 12170500316 ನಂಬರ್‌ನ ಖಾತೆಗೆ ಹಣ ಪಡೆಯುತ್ತಿದ್ದಳು. ಆದರೆ ದುರದೃಷ್ಟಕರವಾಗಿ ಮಾಧ್ಯಮಗಳು ಈ ವಿಷಯವನ್ನೇ ಮರೆ ಮಾಚಿದವು; ಹಾಗಿದ್ದರೂ ಭಾರತದ ಜನರು ಇದನ್ನು ಮರೆಯಲಾರರು’ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.