Advertisement

Jaiswal: ಚಾಂಪಿಯನ್ಸ್‌ ಟ್ರೋಫಿಗೆ ಯಶಸ್ವಿ ಜೈಸ್ವಾಲ್;‌ ಇಂಗ್ಲೆಂಡ್‌ ಸರಣಿಯಲ್ಲೇ ಪದಾರ್ಪಣೆ?

06:25 PM Jan 07, 2025 | Team Udayavani |

ಮುಂಬೈ: ಫೆಬ್ರವರಿಯಲ್ಲಿ ಪಾಕಿಸ್ತಾನ ಮತ್ತು ದುಬೈನಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿ (ICC Champions Trophy) ಕೂಟಕ್ಕೆ ಮೊದಲು ಭಾರತ ತಂಡವು ತವರಿನಲ್ಲಿ ಇಂಗ್ಲೆಂಡ್‌ ವಿರುದ್ದ ಟಿ20 ಮತ್ತು ಏಕದಿನ ಸರಣಿ ಆಡಲಿದೆ. ಚಾಂಪಿಯನ್ಸ್‌ ಟ್ರೋಫಿಗೆ ಮೊದಲು ನಡೆಯುವ ಸರಣಿಯಾದ ಕಾರಣ ಇದು ಮಹತ್ವ ಪಡೆದುಕೊಂಡಿದೆ.

Advertisement

ಭಾರತ ತಂಡ ಇದೀಗ ಬದಲಾವಣೆಯ ಹಂತದಲ್ಲಿದೆ. ಹೀಗಾಗಿ ಯುವ ಆಟಗಾರರು ತಂಡಕ್ಕೆ ಪದಾರ್ಪಣೆ ಮಾಡುವ ಯೋಜನೆಯಲ್ಲಿದ್ದಾರೆ. ಟೀಂ ಇಂಡಿಯಾದ ಟಿ20 ಮತ್ತು ಟೆಸ್ಟ್‌ ತಂಡದಲ್ಲಿ ಆರಂಭಿಕರಾಗಿ ಆಡುವ ಯುವ ಆಟಗಾರ ಯಶಸ್ವಿ ಜೈಸ್ವಾಲ್‌ (Yashaswi Jaiswal) ಅವರು ಏಕದಿನ ಕ್ರಿಕೆಟ್‌ ಗೆ ಪದಾರ್ಪಣೆ ಮಾಡುವ ಕಾಲ ಸನ್ನಿಹಿತವಾಗುತ್ತಿದೆ ಎನ್ನುತ್ತಿದೆ ವರದಿ.

ವರದಿಗಳ ಪ್ರಕಾರ, ಚಾಂಪಿಯನ್ಸ್‌ ಟ್ರೋಫಿಯಲ್ಲಿ ಜೈಸ್ವಾಲ್ ಅವರು ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್‌ಗೆ ಬ್ಯಾಕಪ್ ಆರಂಭಿಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಆದರೆ ಇಂಗ್ಲೆಂಡ್ ಸರಣಿಯಲ್ಲಿ ಜೈಸ್ವಾಲ್‌ ಏಕದಿನ ಕ್ರಿಕೆಟ್‌ ಗೆ ಪದಾರ್ಪಣೆ ಮಾಡಲಿದ್ದಾರೆ.

ಇತ್ತೀಚೆಗೆ ಮುಗಿದ ಬಾರ್ಡರ್‌ ಗಾವಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ಯಶಸ್ವಿ ಜೈಸ್ವಾಲ್‌ ಉತ್ತಮ ಪ್ರದರ್ಶನ ನೀಡಿದ್ದರು. ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದ್ದ ಜೈಸ್ವಾಲ್‌ ಈ ಸರಣಿಯಲ್ಲಿ ಭಾರತದ ಪರ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟರ್‌ ಆಗಿದ್ದರು.

Advertisement

ಎಡಗೈ ಬ್ಯಾಟರ್‌ ಆಗಿರುವುದು ಜೈಸ್ವಾಲ್‌ ಗೆ ಹೆಚ್ಚಿನ ಲಾಭ ತರುತ್ತಿದೆ. ಎಡ-ಬಲ ಬ್ಯಾಟರ್‌ ಗಳ ಕಾಂಬಿನೇಶನ್‌ ನಲ್ಲಿ ಮುಂದಿನ ದಿನಗಳಲ್ಲಿ ತಂಡ ಕಟ್ಟಲು ಬಿಸಿಸಿಐ ಚಿಂತಿಸುತ್ತಿದೆ.

ಆಯ್ಕೆದಾರರು ಜೈಸ್ವಾಲ್ ಅವರನ್ನು ನಾಯಕ ರೋಹಿತ್ ಶರ್ಮಾ ಅವರ ದೀರ್ಘಾವಧಿಯ ಉತ್ತರಾಧಿಕಾರಿ ಎಂದು ಪರಿಗಣಿಸುತ್ತಾರೆ ಎಂದು ವರದಿಯಾಗಿದೆ. ಸ್ಥಿರ ಪ್ರದರ್ಶನ, ಪರಿಸ್ಥಿತಿಗೆ ತಕ್ಕಂತೆ ವೇಗವಾಗಿ ಅಥವಾ ಆಂಕರ್‌ ಮಾಡುವ ಅವರ ಸಾಮರ್ಥ್ಯ ಜೈಸ್ವಾಲ್‌ ಅವರಿಗೆ ಹೆಚ್ಚಿನ ಬಲ ನೀಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next