Advertisement

ಜೇಸಿಐ ಕಡಬ ಕದಂಬ ಘಟಕದ ವತಿಯಿಂದ ರಾಷ್ಟ್ರೀಯ ಭಾವೈಕ್ಯ ದಿನಾಚರಣೆ

03:45 PM Feb 03, 2018 | Team Udayavani |

ಕಡಬ: ರಾಷ್ಟ್ರೀಯ ಭಾವೈಕ್ಯ ದಿನಾಚರಣೆಯ ಪ್ರಯುಕ್ತ ಭಾರತೀಯ ಜೇಸಿಸ್‌ನ ಸೂಚನೆ ಅನ್ವಯ ಜೇಸಿಐ ಕಡಬ ಕದಂಬ ಘಟಕವು ಕಡಬ ಪರಿಸರದ ವಿವಿಧ ಶಾಲೆಗಳಲ್ಲಿ ಶುಕ್ರವಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಬೋಧಕರು, ಬೋಧಕೇತರ ಸಿಬಂದಿ ಹಾಗೂ ಸಾರ್ವಜನಿಕರು ಸಹಿತ ಒಟ್ಟು 2612 ಮಂದಿ ರಾಷ್ಟ್ರೀಯ ಭಾವೈಕ್ಯದ ಪ್ರಮಾಣವಚನ ಸ್ವೀಕರಿಸಿದರು.

Advertisement

ಕಡಬ ಸ. ಪದವಿ ಪೂರ್ವ ಕಾಲೇಜು
ಇಲ್ಲಿನ ವಿದ್ಯಾರ್ಥಿಗಳಿಗೆ ಜೇಸಿ ಪದಾಧಿಕಾರಿ ರವಿಚಂದ್ರ ಪಡುಬೆಟ್ಟು ಪ್ರಮಾಣವಚನ ಬೋಧಿಸಿದರು. ಜೇಸಿ ಪೂರ್ವಾಧ್ಯಕ್ಷರಾದ ಅಶೋಕ್‌ಕುಮಾರ್‌ ಪಿ., ಜಯರಾಮ ಆರ್ತಿಲ, ಪದಾಧಿಕಾರಿಗಳಾದ ತಿರುಮಲೇಶ್‌ ಭಟ್‌ ಹೊಸ್ಮಠ, ಅಬ್ದುಲ್‌ ರಹಿಮಾನ್‌, ರವಿಚಂದ್ರ ಪಡುಬೆಟ್ಟು, ಜಯರಾಮ ಮೂರಾಜೆ, ಪ್ರಕಾಶ್‌ ಎನ್‌.ಕೆ., ಕಾಶೀನಾಥ ಗೋಗಟೆ ಹಾಗೂ ಡಾ|ರಾಮ ಪ್ರಕಾಶ್‌ ಉಪಸ್ಥಿತರಿದ್ದರು. ಉಪನ್ಯಾಸಕ ವಾಸುದೇವ ಗೌಡ ಕೋಲ್ಪೆ ಸ್ವಾಗತಿಸಿ, ಹರಿಶಂಕರ್‌ ಕೆ.ಎಂ. ವಂದಿಸಿದರು.

ಕಡಬ ಸರಕಾರಿ ಪ್ರೌಢಶಾಲೆ
ಇಲ್ಲಿನ ವಿದ್ಯಾರ್ಥಿಗಳಿಗೆ ಜೇಸಿ ಪೂರ್ವಾಧ್ಯಕ್ಷ ಜಯರಾಮ ಆರ್ತಿಲ ಪ್ರಮಾಣವಚನ ಬೋಧಿಸಿದರು. ಜೇಸಿ ಪೂರ್ವಾಧ್ಯಕ್ಷ ಅಶೋಕ್‌ಕುಮಾರ್‌ ಪಿ., ಪದಾಧಿಕಾರಿಗಳಾದ ತಿರುಮಲೇಶ್‌ ಭಟ್‌ ಹೊಸ್ಮಠ, ಅಬ್ದುಲ್‌ ರಹಿಮಾನ್‌, ರವಿಚಂದ್ರ ಪಡುಬೆಟ್ಟು, ಜಯರಾಮ ಮೂರಾಜೆ, ಪ್ರಕಾಶ್‌ ಎನ್‌.ಕೆ., ಕಾಶೀನಾಥ ಗೋಗಟೆ ಹಾಗೂ ಡಾ| ರಾಮಪ್ರಕಾಶ್‌ ಉಪಸ್ಥಿತರಿದ್ದರು. ಉಪ ಪ್ರಾಂಶುಪಾಲೆ ವೇದಾವತಿ ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕ ಲೋಕೇಶ್‌ ವಂದಿಸಿದರು.

ಸೈಂಟ್‌ ಜೋಕಿಮ್ಸ್‌ ಪ.ಪೂ. ಕಾಲೇಜು
ಪ.ಪೂ. ಕಾಲೇಜು ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜೇಸಿ ಪೂರ್ವಾಧ್ಯಕ್ಷ ಫಯಾಝ್ ಪ್ರಮಾಣ ವಚನ ಬೋಧಿಸಿದರು. ಪ್ರೌಢಶಾಲಾ ಮುಖ್ಯಶಿಕ್ಷಕಿ ಸುಪ್ರೀತಾ ಶಾಜಿ ಸ್ವಾಗತಿಸಿ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕಿರಣ್‌ಕುಮಾರ್‌ ವಂದಿಸಿದರು.

ಸೈಂಟ್‌ ಆ್ಯನ್ಸ್‌ ಆಂ.ಮಾ. ಪ್ರೌಢಶಾಲೆ
ಜೇಸಿ ಪೂರ್ವಾಧ್ಯಕ್ಷ ದಿನೇಶ್‌ ಆಚಾರ್ಯ ಪ್ರಮಾಣ ವಚನ ಬೋಧಿಸಿದರು. ಶಿಕ್ಷಕಿ ಹರಿಣಾಕ್ಷಿ ಸ್ವಾಗತಿಸಿ, ಮುಖ್ಯಶಿಕ್ಷಕಿ ದಕ್ಷಾ ಕುಮಾರಿ ವಂದಿಸಿದರು.

Advertisement

ನೂಜಿಬಾಳ್ತಿಲದ ಬೆಥನಿ ಪ.ಪೂ.ಕಾಲೇಜು
ಇಲ್ಲಿನ ಪ. ಪೂ. ಕಾಲೇಜು ಹಾಗೂ ಪ್ರೌಢಶಾಲೆಯಲ್ಲಿ ಜೇಸಿ ಅಧ್ಯಕ್ಷ ವೆಂಕಟೇಶ್‌ ಪಾಡ್ಲ ಪ್ರಮಾಣವಚನ ಬೋಧಿಸಿದರು. ಜೇಸಿ ಪೂರ್ವಾಧ್ಯಕ್ಷ ಹರೀಶ್‌ ಬೆದ್ರಾಜೆ ಉಪಸ್ಥಿತರಿದ್ದರು. ಪ್ರಾಂಶುಪಾಲ ಜಾರ್ಜ್‌ ಟಿ.ಎಸ್‌. ಸ್ವಾಗತಿಸಿ, ಶಿಕ್ಷಕ ಸುಬ್ರಹ್ಮಣ್ಯ ಭಟ್‌ ವಂದಿಸಿದರು.

ಮರ್ದಾಳ ಸೈಂಟ್‌ ಮೇರಿಸ್‌ ಪ್ರೌಢಶಾಲೆ
ಇಲ್ಲಿನ ವಿದ್ಯಾರ್ಥಿಗಳಿಗೆ ಜೇಸಿ ಪೂರ್ವಾಧ್ಯಕ್ಷ ಮಂಜುನಾಥ ಮರ್ದಾಳ ಪ್ರಮಾಣವಚನ ಬೋಧಿಸಿದರು. ಜಾಫಿರ್‌ ಮಹ್ಮದ್‌ ಉಪಸ್ಥಿತರಿದ್ದರು. ಮುಖ್ಯಶಿಕ್ಷಕ ಈಶೋ ಫಿಲಿಪ್‌ ಸ್ವಾಗತಿಸಿ, ವಂದಿಸಿದರು. 

ಕಡಬದ ಏಮ್ಸ್‌ ಪದವಿ ಕಾಲೇಜು
ಇಲ್ಲಿನ ವಿದ್ಯಾರ್ಥಿಗಳಿಗೆ ಜೇಸಿ ನಿಕಟಪೂರ್ವಾಧ್ಯಕ್ಷ ತಸ್ಲಿಮ್ ಮರ್ದಾಳ ಪ್ರಮಾಣವಚನ ಬೋಧಿಸಿದರು. ಜೇಸಿ ಪದಾಧಿಕಾರಿ ದಿವಾಕರ ಮುಂಡಾಲ ಉಪಸ್ಥಿತರಿದ್ದರು. ಉಪನ್ಯಾಸಕ ಮಹ್ಮದ್‌ ಶಕೀರ್‌ ಸ್ವಾಗತಿಸಿ, ವಂದಿಸಿದರು.

ಬೆಥನಿ ಜೀವನಜ್ಯೋತಿ ವಿಶೇಷ ಶಾಲೆ
ಇಲ್ಲಿನ ಬೋಧಕ ಮತ್ತು ಬೋಧಕೇತರ ವೃಂದ, ಸಾರ್ವಜನಿಕರಿಗೆ ಜೇಸಿ ಅಧ್ಯಕ್ಷ ವೆಂಕಟೇಶ್‌ ಪಾಡ್ಲ ಪ್ರಮಾಣವಚನ ಬೋಧಿಸಿದರು. ಶಾಲೆಯ ನಿರ್ದೇಶಕ ವಂ| ವಿಜೋಯ್‌, ಮೋಹನ ಕೋಡಿಂಬಾಳ, ತಸ್ಲಿಮ್ ಮರ್ದಾಳ, ಪದಾಧಿಕಾರಿ ಪ್ರಶಾಂತ್‌ ಪಂಜೋಡಿ, ಮೇದಪ್ಪ ಡೆಪ್ಪುಣಿ, ತಾ.ಪಂ. ಸದಸ್ಯ ಗಣೇಶ್‌ ಕೈಕುರೆ, ಗಂಗಾಧರ ಗೌಡ ಪಂಜೋಡಿ ಉಪಸ್ಥಿತರಿದ್ದರು. ಜೇಸಿ ಪೂರ್ವಾಧ್ಯಕ್ಷ ಜಯರಾಮ ಆರ್ತಿಲ ಸ್ವಾಗತಿಸಿ, ಶಾಲಾ ಮುಖ್ಯಶಿಕ್ಷಕಿ ಶೈಲಾ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next