ನವದೆಹಲಿ: ದೆಹಲಿಯಲ್ಲಿ ಬಿಗಿ ಭದ್ರತೆ ಹೊಂದಿರುವ ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿನ ಇಸ್ರೇಲಿ ರಾಯಭಾರ ಕಚೇರಿ ಬಳಿ ಶುಕ್ರವಾರ ಸಂಜೆ ಸಂಭವಿಸಿದ ಐಇಡಿ ಸ್ಫೋಟ ತಾನೇ ನಡೆಸಿರುವುದಾಗಿ “ಜೈಶ್ ಉಲ್ ಹಿಂದ್” ಹೊಣೆ ಹೊತ್ತುಕೊಂಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಇದನ್ನೂ ಓದಿ:ಠಾಕ್ರೆ ತನ್ನ ಅಧಿಕಾರ ಉಳಿಸಿಕೊಳ್ಳಲು ಗಡಿ ವಿಚಾರಕ್ಕೆ ಬಂದಿದ್ದಾರೆ: ಲಕ್ಷ್ಮಣ ಸವದಿ
ಮೆಸೇಜ್ ಸರ್ವೀಸ್ ಟೆಲಿಗ್ರಾಂನಲ್ಲಿ ಸ್ಫೋಟದ ಹೊಣೆ ಹೊತ್ತ ಜೈಶ್ ಉಲ್ ಹಿಂದ್ ಸಂಘಟನೆಯ ಸಂದೇಶದ ಸ್ಕ್ರೀನ್ ಶಾಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವುದಾಗಿ ವರದಿ ವಿವರಿಸಿದೆ.
ಸ್ಫೋಟಕ್ಕೆ ಜೈಶ್ ಸಂಘಟನೆಯೇ ಕಾರಣ ಎಂದು ಈಗಾಗಲೇ ನಂಬಲು ಸಾಧ್ಯವಿಲ್ಲ. ಈ ಸ್ಫೋಟಕ್ಕೆ ಜೈಶ್ ಉಲ್ ಹಿಂದ್ ಸಂಘಟನೆಯೇ ಹೊಣೆಯೇ ಎಂಬ ಬಗ್ಗೆ ಸಾಕ್ಷ್ಯಾಧಾರ ಇರಬೇಕು ಎಂದಿರುವ ತನಿಖಾ ಸಂಸ್ಥೆಯ ಮೂಲಗಳು ಇದೊಂದು ತನಿಖೆಯ ಹಾದಿತಪ್ಪಿಸುವ ತಂತ್ರಗಾರಿಕೆಯಾಗಿದೆ ಎಂದು ಆರೋಪಿಸಿದೆ.
ಸ್ಫೋಟ ಸ್ಥಳದಲ್ಲಿ ಸುಟ್ಟುಹೋದ ಬ್ಯಾಟರಿ ತುಣುಕುಗಳನ್ನು ಸಂಗ್ರಹಿಸಲಾಗಿದ್ದು, ಇದರಿಂದ ಬಿಗಿ ಭದ್ರತೆಯ ಪ್ರದೇಶದಲ್ಲಿ ಯಾವ ಬಗೆಯ ಐಇಡಿ ಸ್ಫೋಟಿಸಿದ್ದಾರೆಂಬ ಮಾಹಿತಿ ಲಭ್ಯವಾಗಲಿದೆ ಎಂದು ವರದಿ ತಿಳಿಸಿದೆ.