Advertisement

ಜಮ್ಮು-ಕಾಶ್ಮೀರ: ಪಾಕಿಸ್ತಾನದ ಉಗ್ರ, ಜೈಶ್‌ ಕಮಾಂಡರ್‌ನ ಮನೆ ಧ್ವಂಸ

08:30 PM Dec 10, 2022 | Team Udayavani |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದ ರಾಜ್‌ಪೊರಾ ಎಂಬಲ್ಲಿ ಪಾಕಿಸ್ತಾನದ ಉಗ್ರ, ಜೈಶ್‌ ಕಮಾಂಡರ್‌ ಆಶಿಕ್‌ ನೆನ್‌ಗ್ರೂ ಎಂಬಾತನಿಗೆ ಸೇರಿದ ಮನೆಯನ್ನು ಕೆಡವಿ ಹಾಕಲಾಗಿದೆ.

Advertisement

ಕೇಂದ್ರಾಡಳಿತ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಬುಲ್ಡೋಜರ್‌ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಉಗ್ರನ ಮನೆ ನಿರ್ಮಿಸಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

2019ರಲ್ಲಿ ಆತ ಪಾಕಿಸ್ತಾನಕ್ಕೆ ತೆರಳಿದ್ದ. ಆತ ಹಲವು ಗುರುತರ ದಾಳಿ ಮತ್ತು ಬಾಂಬ್‌ ಸ್ಫೋಟ ಪ್ರಕರಣಗಳಲ್ಲಿ ಪೊಲೀಸರಿಗೆ ಹಾಗೂ ಭದ್ರತಾ ಪಡೆಗಳಿಗೆ ಬೇಕಾದವನಾಗಿದ್ದಾನೆ. ಕೆಲ ತಿಂಗಳ ಹಿಂದೆ ನೆನ್‌ಗ್ರೂ ಅವನ ಸಹೋದರ ಹತ್ಯೆಗೀಡಾಗಿದ್ದ.

ಉಗ್ರ ಸಂಘಟನೆಗಳ ನಡುವಿನ ವೈಷಮ್ಯದಿಂದಲಾಗಿ ಆತನನ್ನು ಕೊಲ್ಲಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next