Advertisement

ಮಹಿಳೆಯರಿಗೆ ಹಿಂಸೆ: ದಿಲ್ಲಿ, ಹೈದರಾಬಾದ್‌, ಜೈಪುರ ಅಗ್ರ

11:46 AM Dec 04, 2017 | Team Udayavani |

ಜೈಪುರ : ಗಂಡ ಹಾಗೂ ಆತನ ಸಂಬಂಧಿಕರು ವಿವಾಹಿತ ಮಹಿಳೆಯರ ಮೇಲೆ ತೋರಿದ ಗರಿಷ್ಠ ಪ್ರಕರಣಗಳು ವರದಿಯಾಗಿರುವ ಉನ್ನತ ಮೂರು ನಗರಗಳಲ್ಲಿ “ಪಿಂಕ್‌ ಸಿಟಿ’ ಜೈಪುರ ಒಂದೆಂಬ ಕುಖ್ಯಾತಿಯನ್ನು  ಪಡೆದಿದೆ.

Advertisement

ಮಹಿಳೆಯರ ಮೇಲೆ ದೌರ್ಜನ್ಯ ತೋರುವ ಗರಿಷ್ಠ ಪ್ರಕರಣಗಳು ವರದಿಯಾಗಿರುವ ಜೈಪುರದ ಜತೆಗೆ ಸ್ಥಾನ ಪಡೆದಿರುವ ಇತರೆರಡು ನಗರಗಳೆಂದರೆ ದಿಲ್ಲಿ ಮತ್ತು ಹೈದರಾಬಾದ್‌ ಎಂದು ನ್ಯಾಶನಲ್‌ ಕ್ರೈಮ್‌ ರೆಕಾರ್ಡ್ಸ್‌ ಬ್ಯೂರೋ (ಎನ್‌ಸಿಆರ್‌ಬಿ) ಬಹಿರಂಗ ಪಡಿಸಿದೆ.

ಈ ಮೂರು ನಗರಗಳಲ್ಲಿ ಒಟ್ಟಾಗಿ ದಾಖಲಾಗಿರುವ ಮಹಿಳೆಯರ ಮೇಲೆ ನಡೆದಿರುವ  ದೌರ್ಜನ್ಯ ಪ್ರಕರಣಗಳ ಸಂಖ್ಯೆ 12,218. ಇವುಗಳಲ್ಲಿ ಜೈಪುರ 1,008, ದಿಲ್ಲಿ 3,645, ಮತ್ತು ಹೈದರಾಬಾದ್‌ ನಲ್ಲಿ 1,311 ಕೇಸುಗಳು ದಾಖಲಾಗಿವೆ. 

ಈ ಮೂರು ನಗರಗಳಲ್ಲಿ 2016ರಲ್ಲಿ ದಾಖಲಾಗಿರುವ ಆರ್ಥಿಕ ಅಪರಾಧಗಳ ಪ್ರಕರಣಗಳು 30,734. 

Advertisement

Udayavani is now on Telegram. Click here to join our channel and stay updated with the latest news.

Next