Advertisement

Jaipur Express Train: ಗುಂಡಿನ ದಾಳಿ ನಡೆಸಿ ನಾಲ್ವರನ್ನು ಹತ್ಯೆಗೈದ ರೈಲ್ವೆ ಪೊಲೀಸ್ ವಜಾ

08:34 AM Aug 17, 2023 | sudhir |

ಮುಂಬೈ: ಜುಲೈ 31 ರಂದು ಜೈಪುರ-ಮುಂಬೈ ಸೆಂಟ್ರಲ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ನಲ್ಲಿ ಹಿರಿಯ ಸಹೋದ್ಯೋಗಿ ಮತ್ತು ಮೂವರು ಪ್ರಯಾಣಿಕರನ್ನು ಗುಂಡಿಕ್ಕಿ ಕೊಂಡಿದ್ದ ಆರ್‌ಪಿಎಫ್ ಕಾನ್‌ಸ್ಟೆಬಲ್ ಚೇತನ್ ಸಿಂಗ್ ಚೌಧರಿ (33) ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ.

Advertisement

ಮುಂಬೈ ಸೆಂಟ್ರಲ್‌ನ ಆರ್‌ಪಿಎಫ್ ಹಿರಿಯ ವಿಭಾಗೀಯ ಭದ್ರತಾ ಆಯುಕ್ತರು ಚೌಧರಿ ಅವರನ್ನು ವಜಾಗೊಳಿಸುವ ಆದೇಶವನ್ನು ಹೊರಡಿಸಿದ್ದಾರೆ.

ಆರೋಪಿ ಚೇತನ್ ಸಿಂಗ್ ತನ್ನ ಮೇಲಧಿಕಾರಿ, ಎಎಸ್‌ಐ ಟಿಕಾರಾಂ ಮೀನಾ ಮತ್ತು ಇತರ ಮೂವರು ಪ್ರಯಾಣಿಕರನ್ನು ಗುಂಡಿಕ್ಕಿ ಹತ್ಯೆಗೈದಿದ್ದರು, ಘಟನೆಗೆ ಸಂಬಂಧಿಸಿ ಚೇತನ್ ಸಿಂಗ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ನಡುವೆ ಆರ್‌ಪಿಎಫ್ ಹಿರಿಯ ವಿಭಾಗೀಯ ಭದ್ರತಾ ಆಯುಕ್ತರು ಚೇತನ್ ಸಿಂಗ್ ಚೌಧರಿ ಅವರನ್ನು ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: CM Amrita Nagarothana Yojana: ಆದೇಶಪತ್ರ ನೀಡಿ 5 ತಿಂಗಳು ಕಳೆದರೂ ಬಿಡಿಗಾಸೂ ಬಂದಿಲ್ಲ !

Advertisement

Udayavani is now on Telegram. Click here to join our channel and stay updated with the latest news.

Next