ಜೈಪುರ: ಭಾರತದಲ್ಲಿ ಬೀದಿ ಬದಿಯ ಆಹಾರ (Street Food) ಯಾವಾಗಲೂ ಆಕರ್ಷಣೆಯ ಮತ್ತು ಜನಪ್ರಿಯತೆಯ ಪಡೆದಿರುತ್ತದೆ. ಆದರೆ ಕೆಲವೊಮ್ಮೆ ನಾವೂ ಕೂಡಾ ಇಂತಹ ಬೀದಿಬದಿಯ ವ್ಯಾಪಾರಿಗಳನ್ನು ಗುರುತಿಸುತ್ತೇವೆ. ಈ ವ್ಯಕ್ತಿಗಳ ಯಶೋಗಾಥೆ ಎಲ್ಲರ ಮನಮುಟ್ಟುವ ಮೂಲಕ ವೈರಲ್ ಆಗುತ್ತದೆ.
ಇದನ್ನೂ ಓದಿ:IPL 2023: ಐಪಿಎಲ್ ನಲ್ಲಿ ಅಂಪೈರ್ ಗಳ ನಿರ್ಧಾರಗಳು…; ಅಸಮಾಧಾನ ಹೊರಹಾಕಿದ ಅಶ್ವಿನ್
ಕಡಿಮೆ ಬೆಲೆಗೆ ಊಟ, ಉಪಹಾರವನ್ನು ನೀಡುವ ಇವರಿಗೆ ಜೀವನ ನಿರ್ವಹಣೆಯೇ ಮುಖ್ಯ ಉದ್ದೇಶವಾಗಿತ್ತದೆ. ಆದರೆ ಜೈಪುರದ ಈ ದಂಪತಿಗೆ ಆದಾಯಕ್ಕಿಂತ ಹೆಚ್ಚಾಗಿ ಜನಸೇವೆಯೇ ಪ್ರಮುಖ ಆದ್ಯತೆಯಾಗಿದೆ.
ಕೇವಲ 30 ರೂಪಾಯಿಗೆ 10 ಪೂರಿ ಭಾಜಿ ಊಟ!
Related Articles
ಜೈಪುರದ ರಸ್ತೆ ಬದಿಯಲ್ಲಿ ಅಂಗಡಿಯನ್ನು ಇಟ್ಟುಕೊಂಡಿರುವ ದಂಪತಿ ಕೇವಲ 30 ರೂಪಾಯಿಗೆ ಪೂರಿ ಭಾಜಿ ಊಟ ನೀಡುತ್ತಿದ್ದಾರೆ. ಅರೇ ಇದರಲ್ಲಿ ವಿಶೇಷವೇನಿದೆ ಎಂದು ಹುಬ್ಬೇರಿಸಬೇಡಿ. ಯಾಕೆ ಗೊತ್ತಾ, 10 ಪೂರಿ ಭಾಜಿ ಊಟಕ್ಕೆ ಕೇವಲ 30 ರೂಪಾಯಿ!
ಈ ವಿಡಿಯೋವನ್ನು “Fooies.aao” ಫೇಸ್ ಬುಕ್ ನಲ್ಲಿ ಶೇರ್ ಮಾಡಿದ್ದು, ಕಠಿಣ ಪರಿಶ್ರಮದ ದಂಪತಿ-ಕೇವಲ 30 ರೂಪಾಯಿಗೆ ಪೂರಿ ಸಬ್ಜಿ ಮಾರಾಟ ಮಾಡುತ್ತಿದ್ದಾರೆ ಎಂದು ಕ್ಯಾಪ್ಶನ್ ಬರೆಯಲಾಗಿದೆ.
“ಬೆಳಗ್ಗೆ 7-30ರಿಂದ ಕೆಲಸ ಮಾಡಲು ಆರಂಭಿಸಿ, ಮಧ್ಯಾಹ್ನ 2ಗಂಟೆವರೆಗೆ ಕಾರ್ಯನಿರ್ವಹಿಸುವುದಾಗಿ ದಂಪತಿ ತಿಳಿಸಿದ್ದಾರೆ. ಗ್ರಾಹಕರಿಗೆ 10 ಪೂರಿ ಜತೆಗೆ ಭಾಜಿ ಅಥವಾ ಬಟಾಣಿ ಗಸಿ, ಟೊಮ್ಯಾಟೋ, ಬೆಳ್ಳುಳ್ಳಿ ಚಟ್ನಿ ನೀಡಲಾಗುತ್ತದೆ. ಆದರೆ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ.
ಗ್ರಾಹಕರು ಬಂದ ನಂತರವೇ ಗರಿ, ಗರಿ ಪೂರಿಯನ್ನು ಎಣ್ಣೆಯಲ್ಲಿ ಕರಿದು ಕೊಡುವುದು ದಂಪತಿಯ ವಿಶೇಷತೆಯಾಗಿದೆ. ಆ ಕಾರಣದಿಂದಲೇ ಗ್ರಾಹಕರು ಜೈಪುರ್ ಸ್ಟ್ರೀಟ್ ಪುಡ್ ಅಂಗಡಿ ಸಮೀಪ ಸಾಲುಗಟ್ಟಿ ನಿಂತಿರುತ್ತಾರಂತೆ. ನೀವೂ ಒಮ್ಮೆ ಇಲ್ಲಿಗೆ ಭೇಟಿ ನೀಡಿ, ಖಂಡಿತ ನಿಮಗೆ ಖುಷಿಯಾಗುತ್ತೆ ಎಂದು ಫೇಸ್ ಬುಕ್ ನಲ್ಲಿ ಸಲಹೆ ನೀಡಿದ್ದಾರೆ.
ವಿಡಿಯೋ ಫೇಸ್ ಬುಕ್ ನಲ್ಲಿ ವೈರಲ್ ಆಗಿದ್ದು, ಈವರೆಗೆ 926Kಗಿಂತಲೂ ಅಧಿಕ ವೀಕ್ಷಣೆ ಪಡೆದಿದ್ದು, 5 ಸಾವಿರಕ್ಕಿಂತ ಹೆಚ್ಚು ಮಂದಿ ಲೈಕ್ಸ್ ಮಾಡಿದ್ದಾರೆ. ರುಚಿಕರವಾದ, ಮಿತಬೆಲೆಯ ಊಟವನ್ನು ನೀಡುತ್ತಿರುವ ದಂಪತಿಯ ಕಾರ್ಯಕ್ಕೆ ಹಲವಾರು ಮಂದಿ ಶ್ಲಾಘಿಸಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
“ಅವರು ಒಳ್ಳೆಯ ಕೆಲಸವನ್ನೇ ಮಾಡುತ್ತಿದ್ದಾರೆ. ಕೇವಲ 30ರೂಪಾಯಿಗೆ ಹೊಟ್ಟೆ ತುಂಬಾ ನೀಡುತ್ತಿರುವ ಈ ದಂಪತಿ ಗ್ರಾಹಕರ ಪಾಲಿಗೆ ದೇವರು” ಎಂದು ಫೇಸ್ ಬುಕ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.