Advertisement

ಜೈನಾಪುರ ಕೆರೆ ಭರ್ತಿ; ರೈತರ ಮುಖದಲ್ಲಿ ಮಂದಹಾಸ

12:10 PM Sep 30, 2019 | Suhan S |

ಚಿಕ್ಕೋಡಿ: ಮಹಾರಾಷ್ಟ್ರದ ಕೊಂಕಣ ಭಾಗ ಮತ್ತು ರಾಜ್ಯದ ಗಡಿ ಭಾಗದಲ್ಲಿ ಸುರಿದ ಭಾರಿ ಮಳೆಯಿಂದ ನದಿ ಭಾಗದ ಜನರ ಬದುಕು ಕಸಿದುಕೊಂಡರೇ ಬರದ ನಾಡಿನ ಜೀವಸೆಲೆಯಾಗಿರುವ ಐತಿಹಾಸಿಕ ಕೆರೆಗಳು ಇಂದು ತುಂಬಿ ಮಡ್ಡಿ ಭಾಗದ ರೈತರ ಬಾಳಲ್ಲಿ ಹೊಸ ಆಶಾಭಾವ ಮೂಡಿಸಿವೆ.

Advertisement

ಚಿಕ್ಕೋಡಿ ತಾಲೂಕಿನಲ್ಲಿ ಕಳೆದ ಹಲವು ವರ್ಷಗಳಿಂದ ಸಮರ್ಪಕ ಮಳೆಯಾಗದೇ ರೈತರು ತೀವ್ರ ಬರಗಾಲದ ಹೊಡೆತಕ್ಕೆ ಸಿಕ್ಕು ಸಂಕಷ್ಟ ಪಡುತ್ತಿದ್ದರು. ಆದರೆ ಕಳೆದ ಎರಡು ತಿಂಗಳ ಹಿಂದೆಯಷ್ಟೇ ಸುರಿದ ಧಾರಾಕಾರ ಮಳೆಯಿಂದ ಬರದ ನಾಡಿನಲ್ಲಿ ಹಸಿರಿಕರಣ ಕಂಗೊಳ್ಳಿಸುತ್ತಿದೆ. ನೆರೆಯ ಮಹಾರಾಷ್ಟ್ರದ ಕೊಂಕಣ ಭಾಗದ ಸಮೀಪ ಇರುವ ರಾಜ್ಯದ ಗಡಿ ಭಾಗದಲ್ಲಿ ಕಳೆದ ಎರಡು ತಿಂಗಳ ಹಿಂದೆಯಷ್ಟೇ ಬಿಡುವಿಲ್ಲದೇ ಸುರಿದ ಮಳೆಯಿಂದ ಚಿಕ್ಕೋಡಿ ತಾಲೂಕಿನ ಜೈನಾಪುರ, ವಡ್ರಾಳ, ಮಜಲಟ್ಟಿ, ಮುಗಳಿ, ನಾಯಿಂಗ್ಲಜ, ಚಿಕ್ಕೋಡಿ, ಚಿಂಚಣಿ ಮುಂತಾದ ಕೆರೆಗಳು ತುಂಬಿವೆ.

ಅತಿಯಾದ ಮಳೆಯಿಂದ ಅತಿವೃಷ್ಟಿ: ಸಮರ್ಪಕ ಮಳೆ ಸುರಿಯಬೇಕೆಂದು ಪ್ರತಿ ವರ್ಷ ಬರಗಾಲ ಪೀಡಿತ ಚಿಕ್ಕೋಡಿ ತಾಲೂಕಿನ ಕರೋಶಿ ಮತ್ತು ನಾಗರಮುನ್ನೋಳ್ಳಿ ಜಿಪಂ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಹತ್ತಾರೂ ಹಳ್ಳಿಯ ಜನರು ದೇವರ ಮೋರೆ ಹೋಗಿ ಬೇಡಿಕೊಳ್ಳುತ್ತಿದ್ದರು. ಆದರೆ ಪ್ರಸಕ್ತ ವರ್ಷದಲ್ಲಿ ನೀರಿಕ್ಷಿತ ಪ್ರಮಾಣದಕ್ಕಿಂತಲೂ ಹೆಚ್ಚಿನ ಮಳೆ ಸುರಿದು ರೈತರು ಬೆಳೆದ ಮುಂಗಾರು ಬೆಳೆಗಳನ್ನು ನಾಶ ಮಾಡಿದೆ. ಮುಂಗಾರಿನಲ್ಲಿ ಬಿತ್ತನೆ ಮಾಡಿದ ಗೋವಿನಜೋಳ, ಹೆಸರು, ಜೋಳ, ತೊಗರಿ, ಶೇಂಗಾ ಮುಂತಾದ ಬೆಳೆಗಳು ಅತಿವೃಷ್ಟಿಯಿಂದ ಹಾನಿಯಾಗಿದೆ. ಒಂದು ಬೆಳೆ ಹೋದರೂ ಪರವಾಗಿಲ್ಲ ಮುಂದಿನ ಹಿಂಗಾರು ಬೆಳೆ ಕೈಗೆಟಕುತ್ತದೆ. ಆದರೆ ನೀರು ಇಲ್ಲದೆ ಹೋದರೇ ಏನು ಬೆಳೆಯಲು ಸಾಧ್ಯವಾಗುದಿಲ್ಲ, ಆ ದಿಸೆಯಲ್ಲಿ ಪ್ರಸಕ್ತ ವರ್ಷದಲ್ಲಿ ಉತ್ತಮ ಮಳೆ ಸುರಿದು ಕೆರೆ ಭರ್ತಿಯಾಗಿರುವುದು ಹಳ್ಳಕೊಳ್ಳಗಳು ಹರಿಯುತ್ತಿರುವುದು ರೈತರ ಬೆಳವಣಿಗೆಗೆ ಸಹಕಾರಿಯಾಗಲಿದೆ ಎನ್ನುತ್ತಾರೆ ಮಡ್ಡಿ ಭಾಗದ ರೈತರು.

Advertisement

Udayavani is now on Telegram. Click here to join our channel and stay updated with the latest news.

Next