Advertisement

ಮಗು, 100 ಕೋಟಿ ಆಸ್ತಿ ತ್ಯಜಿಸಿದ್ದ ಉದ್ಯಮಿಯಿಂದ ಜೈನ ದೀಕ್ಷೆ ಸ್ವೀಕಾರ

07:35 AM Sep 24, 2017 | Team Udayavani |

ಭೋಪಾಲ್‌: ಬರೋಬ್ಬರಿ 100 ಕೋಟಿ ರೂ. ಮೌಲ್ಯದ ಆಸ್ತಿ ಮತ್ತು ಮುದ್ದಾದ ಮಗುವನ್ನು ತ್ಯಜಿಸಿ ಜೈನ ಸನ್ಯಾಸಿಗಳಾಗ ಹೊರಟಿದ್ದ ಯುವ ದಂಪತಿ ಶನಿವಾರ ದೀಕ್ಷೆ ಸ್ವೀಕರಿಸಿದ್ದಾರೆ. 

Advertisement

ಗುಜರಾತ್‌ನ ಸೂರತ್‌ನ ವೃಂದಾವನ ಪಾರ್ಕ್‌ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸುಮಿತ್‌ ರಾಥೋಡ್‌ಗೆ ಸುಮಿತ್‌ ಮುನಿ ಎಂದು ಹೆಸರಿಡಲಾಗಿದೆ. ಜೈನ ಮುನಿ ಆಚಾರ್ಯ ರಾಮ್‌ಲಾಲ್‌ ಜಿ ಮಹ ರಾಜ್‌ ಧಾರ್ಮಿಕ ವಿಧಿವಿಧಾನ ನಡೆಸಿ ಕೊಟ್ಟರು. ಇನ್ನು ಉದ್ಯಮಿಯ ಪತ್ನಿ ಅನಾಮಿಕ ಅವರು ಪುತ್ರಿಯ ಮುಂದಿನ ಭವಿಷ್ಯ ಪರಿಗಣಿಸಿ ಕೈಗೊಳ್ಳಬೇಕಾದ ಕಾನೂನು ಪ್ರಕ್ರಿಯೆಗಳು ಮುಕ್ತಾಯ ಗೊಂಡ ಬಳಿಕ ದೀಕ್ಷೆ ಸ್ವೀಕರಿಸಲಿದ್ದಾರೆ ಎಂದರು.

ಮೂರು ವರ್ಷದ ಪುತ್ರಿಯನ್ನು ಬಿಟ್ಟು ಯುವ ದಂಪತಿ ಜೈನ ದೀಕ್ಷೆ ಸ್ವೀಕರಿಸು ವುದಕ್ಕೆ ಪ್ರಬಲ ಟೀಕೆಯೂ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಅನಾಮಿಕ ಅವರು ಮುಂದಿನ ದಿನಗಳಲ್ಲಿ ಸನ್ಯಾಸತ್ವ ಸ್ವೀಕ ರಿಸಲಿ ದ್ದಾರೆ ಎಂದು ಹೇಳಲಾಗುತ್ತಿದೆ. ಕೆಲ ಹೋರಾಟಗಾರರು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ. ಪುತ್ರಿಯ ಹೊಣೆಗಾರಿಕೆಯನ್ನು ಅನಾಮಿಕ ಅವರ ತಂದೆಗೆ ನೀಡುವ ಬಗ್ಗೆ ನಿರ್ಧರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next