Advertisement
ಇದುವರೆಗೆ ಪಾಸಿಟಿವ್ ಪ್ರಚಾರದಿಂದಲೇ ಸುದ್ದಿಯಾಗಿರುವ ರಜಿನಿಕಾಂತ್ ಅವರ ʼಜೈಲರ್ʼ ಈಗ ಟೈಟಲ್ ವಿವಾದಿಂದ ಸದ್ದು ಮಾಡುತ್ತಿದೆ. ಮಲಯಾಳಂ ನಿರ್ದೇಶಕ ಸಕ್ಕಿರ್ ಮದತಿಲ್ ಅವರ ʼಜೈಲರ್ʼ ಸಿನಿಮಾದೊಂದಿಗೆ ತಮಿಳಿನ ʼಜೈಲರ್ʼ ಸಿನಿಮಾ ಟೈಟಲ್ ವಿಚಾರವಾಗಿ ಚರ್ಚೆಯಾಗುತ್ತಿದೆ.
Related Articles
Advertisement
ಟೈಟಲ್ ವಿವಾದ:
ರಜಿನಿಕಾಂತ್ ಅವರ ʼಜೈಲರ್ʼ ಸಿನಿಮಾ ಅನೌನ್ಸ್ ಆಗುವ ಮೊದಲೇ , 2021 ರ ಆಗಸ್ಟ್ ನಲ್ಲಿ ಕೇರಳ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್ (ಕೆಎಫ್‌ಸಿಸಿ) ನಲ್ಲಿ ‘ಜೈಲರ್’ ಶೀರ್ಷಿಕೆಯನ್ನು ನೋಂದಾಯಿಸಿಕೊಂಡಿರುವುದಾಗಿ ಸಕ್ಕಿರ್ ಹೇಳುತ್ತಾರೆ. ಇದಲ್ಲದೇ ಸನ್ ಪಿಕ್ಚರ್ಸ್ ಅವರಿಗೆ ಇದರ ಬಗ್ಗೆ ವಿನಂತಿ ಮಾಡಿದ್ದೆ. ನಿಮ್ಮ ಸಿನಿಮಾವನ್ನು ಬೇರೆ ಟೈಟಲ್ ನಲ್ಲಿ ರಿಲೀಸ್ ಮಾಡಿ, ಇದರಿಂದ ಎರಡೂ ಸಿನಿಮಾಕ್ಕೂ ಹಾನಿಯಾಗುವುದಿಲ್ಲ ಎಂದು ನಿರ್ದೇಶಕ ಸಕ್ಕಿರ್ ಸನ್ ಪಿಕ್ಚರ್ಸ್ ಗೆ ಮನವಿ ಮಾಡಿದ್ದರು ಎಂದು ವರದಿ ತಿಳಿಸಿದೆ.
ಕೋರ್ಟ್ ಮೆಟ್ಟಿಲಲ್ಲಿ ʼಟೈಟಲ್ ವಿವಾದʼ:
ಸಕ್ಕಿರ್ ಅವರ ವಿನಂತಿಯನ್ನು ಒಪ್ಪದ ಸನ್ ಪಿಕ್ಚರ್ಸ್ ʼಜೈಲರ್ʼ ಟೈಟಲ್ ನ್ನೇ ಮುಂದುವರಿಸಿದ್ದಾರೆ. ಈ ವಿಚಾರವಾಗಿ ಮದ್ರಾಸ್ ಕೋರ್ಟ್ ಗೆ ಸನ್ ಪಿಕ್ಚರ್ಸ್ ತಲುಪಿದ್ದು, ಇದಕ್ಕೆ ಪ್ರತಿಯಾಗಿ ಮದತಿಲ್ ಅವರು ಕೂಡ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ. ಇದರ ವಿಚಾರಣೆ ಆಗಸ್ಟ್ 2ಕ್ಕೆ ವಿಚಾರಣೆಯನ್ನು ನಡೆಯಲಿದೆ.