Advertisement
ನಗರದ ಮಹಾತ್ಮ ಗಾಂಧೀಜಿ ವೃತ್ತದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ, ಸಿಐಟಿಯು, ಅಂಗನವಾಡಿ, ನೌಕರರ ಸಂಘ, ಕ.ರಾ. ಗ್ರಾಮ ಪಂಚಾಯತ್ ನೌಕರರ ಸಂಘ, ಕ.ರಾ.ಅಕ್ಷರ ದಾಸೋಹ ನೌಕರರ ಸಂಘ, ಪಪಂ ನೌಕರರ ಸಂಘ, ಲಾರಿ ಹಮಾಲರ ಸಂಘ, ದೇವದಾಸಿ ಮಹಿಳೆಯರ ವಿಮೋಚನಾ ಸಂಘ, ದಲಿತ ಹಕ್ಕು ಸಮಿತಿ, ಕರ್ನಾಟಕ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಮಹಾತ್ಮಗಾಂಧೀಜಿ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಈ ಹಂತದಲ್ಲಿ ಪ್ರತಿಭಟನಾಕಾರನ್ನು ವಶಕ್ಕೆ ಪಡೆದ ಪೊಲೀಸರು ನಂತರ ಬಿಡುಗಡೆ ಮಾಡಿದರು.
ಸರ್ಕಾರ ಜನ ವಿರೋಧಿ , ಕಾರ್ಮಿಕ ವಿರೋಧಿ ನೀತಿ ಅನುಸರಣೆ ಮಾಡುತ್ತಿದೆ. ಚುನಾವಣೆ ಪೂರ್ವದಲ್ಲಿ ಸಾಕಷ್ಟು ಭರವಸೆ ನೀಡಿದ್ದ ಪಕ್ಷ ಅಧಿಕಾರಕ್ಕೇರಿದ ನಂತರ ಕಾರ್ಪೋರೇಟ್ ಕಂಪನಿಗಳ ಹಿತರಕ್ಷಣೆ ಕಾರ್ಯಕ್ರಮ ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದು ಕಿಡಿ ಕಾರಿದರು. ದೇಶದಲ್ಲಿ ಅತ್ಯಂತ ಸಂಕಷ್ಟದಲ್ಲಿರುವ ರೈತರ ಹಿತ ರಕ್ಷಣೆಗಾಗಿ ಸಾಲಮನ್ನಾ ಮಾಡಬೇಕಿದ್ದ ಕೇಂದ್ರ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ. ಬದಲಾಗಿ ಉದ್ಯಮಿಗಳ ಲಕ್ಷಾಂತ ಕೋಟಿ ರೂ. ಸಾಲಮನ್ನಾ ಮಾಡಲು ಮುಂದಾಗಿದೆ. ಮತ್ತೂಂದೆಡೆ ಕಾರ್ಮಿಕ ಪರ ಕಾನೂನುಗಳನ್ನು ವಿನಾಕಾರಣ ಮಾರ್ಪಾಡು ಮಾಡಿ ಕಾರ್ಮಿಕ ಹಕ್ಕುಗಳ ದಮನಕ್ಕೆ ಮುಂದಾಗಿದೆ ಎಂದು ದೂರಿದರು.
Related Articles
Advertisement
ಅಣ್ಣಾರಾಯ ಈಳಿಗೇರ, ಲಕ್ಷ್ಮಣ ಹಂದ್ರಾಳ, ಸುರೇಖಾ ರಜಪೂತ, ಮಳಸಿದ್ದ ನಾಯ್ಕೋಡಿ, ಸುನಂದಾ ನಾಯಕ,ಭಾರತಿ ವಾಲಿ, ಸುನಂದಾ ನಾಯಕ, ಸರಸ್ವತಿ ಮಠ, ಕಾಳಮ್ಮ ಬಡಿಗೇರ, ಸುಮಂಗಲಾ ಆನಂದಶೆಟ್ಟಿ, ಹೀರಾಬಾಯಿ ಹಜೇರಿ, ಅಶ್ವಿನಿ ತಳವಾರ, ಸುಮಿತ್ರ ಘೋಣಸಗಿ, ದಾನಮ್ಮ ಗುಗ್ಗರೆ, ಬಿ.ಪದ್ಮಾವತಿ, ಆರ್.ಸಿ. ಮಠ, ಲಕ್ಷ್ಮೀಬಾಯಿ ಕುಂಬಾರ, ಪರಶುರಾಮ ಮಂಟೂರ, ರಾಮಣ್ಣ ಶಿರೋಳ, ಕಾಜುಸಾಬ ಕೋಲಾರ, ಬಸೀರಹ್ಮದ್ ತಾಂಬೆ, ಮಳಸಿದ್ದ ನಾಯ್ಕೋಡಿ, ಬಸ್ಮಿಲ್ಲಾ ಇನಾಂದಾರ, ಸಂಗು ನಾಲ್ಕಮಾನ, ಮಲಿಕಸಾಬ ಬಾಗಲಕೋಟ, ರಾಜು ಜಾಧವ, ಸಂಗಪ್ಪ ಸೀತಿಮನಿ, ರಂಗಪ್ಪ ದಳವಾಯಿ, ಇಸಾಕ್ ಜಮಾದಾರ, ವಿಠ್ಟಲ ಹೊನಮೋರೆ, ರೇಣುಕಾ ಯಂಟಮಾನ, ಎಂ.ಕೆ. ಚಳ್ಳಗಿ, ಲಾಲಸಾಬ ದೇವರಮನಿ, ಸಿದ್ರಾಯ ಬಂಗಾರಿ ಪಾಲ್ಗೊಂಡಿದ್ದರು.