Advertisement
ಸದನದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ “ಜೈ ಶ್ರೀರಾಮ್’ ಘೋಷಣೆ ಮೊಳಗಿಸುತ್ತಿದ್ದಂತೆ ಡಾ.ಭರತ್ ಶೆಟ್ಟಿ, ವೇದವ್ಯಾಸ್ ಕಾಮತ್, ಅರವಿಂದ ಬೆಲ್ಲದ್, ಶೈಲೇಂದ್ರ ಬೆಳಾªಳೆ, ದೊಡ್ಡನಗೌಡ ಪಾಟೀಲ್ ಮೊದಲಾದವರು, ಜೈ ಜೈ ಶ್ರೀರಾಮ್ ಎಂದು ಧ್ವನಿಗೂಡಿಸಿದರು. ಇದರಿಂದ ಕೆರಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ “ಜೈ ಸೀತಾರಾಮ್’ ಎಂದು ಘೋಷಣೆ ಹಾಕಿದರು. ಕಾಂಗ್ರೆಸ್ ಶಾಸಕರ ಪೈಕಿ ಕೆಲವರು “ಜೈ ಸಿದ್ದರಾಮಯ್ಯ, ಜೈ ಜೈ ಸಿದ್ದರಾಮಯ್ಯ’ ಎಂದು ತಿರುಗೇಟು ನೀಡಿದರು. ಈ ಬಿಜೆಪಿಯವರಿಗೆ ತಲೆಯಲ್ಲಿ ಮಿದುಳು ಇಲ್ಲ. ಖಾಲಿ ತಲೆ. ರಾಮಾಯಣವನ್ನೂ ಓದಿಲ್ಲ, ಮಹಾಭಾರತವನ್ನೂ ಓದಿಲ್ಲ. ಅಯೋಧ್ಯೆಯಲ್ಲಿ ಯಾರೋ ದೇವಸ್ಥಾನ ಕಟ್ಟಿದರು ಎಂದು ಇವರು ಹೋಗಿ ಪೂಜೆ ಮಾಡುತ್ತಾರೆ. ನಾವೇನು ರಾಮನ ಭಕ್ತರಲ್ಲವೇ, ನಾನು ಕೂಡ ಎರಡು ರಾಮಮಂದಿರ ಕಟ್ಟಿಸಿದ್ದೇನೆ. ಇವರು ರಾಮ, ಲಕ್ಷ್ಮಣ, ಸೀತೆಯನ್ನೆಲ್ಲ ಬೇರೆ ಮಾಡಿದ್ದಾರೆ. ನಾವು ಗಾಂಧಿ ಹೇಳಿದ ರಾಮನನ್ನು ಪೂಜಿಸುತ್ತೇವೆ. ಇವರದು ಗೋಡ್ಸೆ ರಾಮ ಎಂದು ಟೀಕಿಸಿದರು.
Related Articles
Advertisement
ಒಂದೆಡೆ ಸಿದ್ದರಾಮಯ್ಯ ಭಾಷಣ ಮಾಡುತ್ತಿದ್ದರೆ ಸದನದ ಬಾವಿಯಲ್ಲಿ ಚಪ್ಪಾಳೆ ತಟ್ಟುತ್ತಾ ಸುತ್ತು ಹೊಡೆಯುತ್ತಿದ್ದ ಬಿಜೆಪಿ ಶಾಸಕರು ಇದ್ದಕ್ಕಿದ್ದಂತೆ ಮೋದಿ, ಮೋದಿ, ಮೋದಿ ಎಂದು ಏರಿದ ಧ್ವನಿಯಲ್ಲಿ ಘೋಷಣೆ ಮೊಳಗಿಸಲಾರಂಭಿಸಿದರು. ಇದರಿಂದ ಸಿಟ್ಟಿಗೆದ್ದ ಸಿದ್ದರಾಮಯ್ಯ, “ಮೋದಿ, ಮೋದಿ’ ಎಂದು ಅಣಕಿಸುತ್ತಾ, ಇಲ್ಲಿದ್ದಾರಾ ಮೋದಿ ? ನೀವು ನಿಶ್ಯಕ್ತರು, ಏನೂ ಆಗುವುದಿಲ್ಲ. ಎಲ್ಲದಕ್ಕೂ ಮೋದಿ ಹೆಸರು ತೆಗೆದುಕೊಳ್ಳುತ್ತೀರಿ. ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಮೋದಿ ಎದುರು ಪ್ರಶ್ನಿಸುವ ದಮ್ಮು-ತಾಕತ್ತು ಇಲ್ಲ ಎಂದು ವಾಗ್ಧಾಳಿ ನಡೆಸಿದರು. ಇದಕ್ಕೆ ಬಿಜೆಪಿ ಶಾಸಕರು “ಸತ್ ಹೋಯ್ತು, ಸತ್ ಹೋಯ್ತು, ಕಾಂಗ್ರೆಸ್ ಪಕ್ಷ ಸತ್ ಹೋಯ್ತು’ ಎಂದು ಸುತ್ತುಗಟ್ಟಲಾರಂಭಿಸಿದರು. ಆಗ ಸ್ಪೀಕರ್ ಖಾದರ್ ಇದೇನು ಸದನದ ಬಾವಿಯೋ, ನಿಮ್ಹಾನ್ಸ್ ಆಸ್ಪತ್ರೆಯೋ’ ಎಂದು ತರಾಟೆಗೆ ತೆಗೆದುಕೊಂಡರು.